HomeLive NewsBREAKING: ಬೆಂಗಳೂರಿನಲ್ಲಿ ನಾಲ್ಕು ಖಾಸಗಿ ಬಸ್ ಗಳು ಬೆಂಕಿಗಾಹುತಿ: ಪಾರ್ಕಿಂಗ್ ಲಾಟ್ ನಲ್ಲಿಯೇ ಸುಟ್ಟು ಭಸ್ಮ

BREAKING: ಬೆಂಗಳೂರಿನಲ್ಲಿ ನಾಲ್ಕು ಖಾಸಗಿ ಬಸ್ ಗಳು ಬೆಂಕಿಗಾಹುತಿ: ಪಾರ್ಕಿಂಗ್ ಲಾಟ್ ನಲ್ಲಿಯೇ ಸುಟ್ಟು ಭಸ್ಮ

ಬೆಂಗಳೂರು: ನಾಲ್ಕು ಖಾಸಗಿ ಬಸ್ ಗಳು ನಿಲ್ಲಿಸಿದ್ದ ಜಾಗದಲ್ಲಿಯೇ ಇದ್ದಕ್ಕಿದ್ದಂತೆ ಬೆಂಕಿಗಾಹುತಿಯಾಗಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಹಳೇ ಚಂದಾಅಪುರದಲ್ಲಿ ನಡೆದಿದೆ.

ಪಾರ್ಕಿಂಗ್ ಲಾಟ್ ನಲ್ಲಿ ನಿಲ್ಲಿಸಲಾಗಿದ್ದ ನಾಲ್ಕು ಬಸ್ ಗಳಿಗೆ ಏಕಾಏಕಿ ಬೆಂಕಿ ಹೊತ್ತಿಕೊಂಡು ಧಗ ಧಗನೆ ಉರಿದಿದೆ. ನೋಡ ನೋಡುತ್ತಿದ್ದಂತೆ ನಾಲ್ಕು ಬಸ್ ಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಬೆಂಕಿ ಅವಘಡಕ್ಕೆ ಕಾರಣ ತಿಳಿದುಬಂದಿಲ್ಲ.

ಸ್ಥಳೀಯರು ಹೇಳುವ ಪ್ರಕಾರ ಕೆಲ ದಿನಗಳಿಂದ ಇಲ್ಲಿ ನಾಲ್ಕು ಬಸ್ ಗಳನ್ನು ಮಾರಾಟಕ್ಕಾಗಿ ನಿಲ್ಲಿಸಲಾಗಿತ್ತು. ಇದರಲ್ಲಿ ಒಂದು ಬಸ್ ಬೆಂಗಳೂರಿನಿಂದ ಬಳ್ಳಾರಿ ಹಾಗೂ ಬಳ್ಳಾರಿಯಿಂದ ಬೆಂಗಳೂರು ಮಾರ್ಗವಾಗಿ ಸಂಚಾರ ನಡೆಸುತ್ತಿತ್ತು. ಉಳಿದ ಮೂರು ಬಸ್ ಗಳು ಸಂಚರಿಸುತ್ತಿರಲಿಲ್ಲ. ಆದರೆ ಈ ನಾಲ್ಕು ಬಸ್ ಗಳನ್ನು ಮಾರಾಟಕ್ಕಾಗಿ ನಿಲ್ಲಿಸಲಾಗಿತ್ತು ಎಂದು ತಿಳಿದುಬಂದಿದೆ. ಬಸ್ ಕಂಪನಿ ಓರ್ವ ಚಾಲಕನ್ನು ನೇಮಕ ಮಾಡಿತ್ತು. ಆತ ಪ್ರತಿದಿನ ಇಲಿಗೆ ಬಂದು ನಾಲ್ಕು ಬಸ್ ಗಳನ್ನು ಸ್ಟಾರ್ಟ್ ಮಾಡಿ ಮತ್ತೆ ಇಲ್ಲಿಯೇ ನಿಲ್ಲಿಸಿ ತೆರಳುತ್ತಿದ್ದ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೀಗೆ ನಿಲ್ಲಿಸಿದ್ದ ಬಸ್ ಗೆ ಇಂದು ಒಂದು ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಬಳಿಕ ಪಕ್ಕದಲ್ಲಿರುವ ಬಸ್ ಗಳಿಗೂ ಬೆಂಕಿ ವ್ಯಾಪಿಸಿದೆ. ಕ್ಷಣಾರ್ಧದಲ್ಲಿ ನಾಲ್ಕು ಬಸ್ ಗಳು ಬೆಂಇಯಲ್ಲಿ ಹೊತ್ತಿ ಉರಿಯಲಾರಂಭಿಸಿವೆ ಎಂದು ತಿಳಿಸಿದ್ದಾರೆ. ವಿಷಯ ತಿಳಿದು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಅಷ್ಟರಲ್ಲಾಗಲೇ ನಾಲ್ಕು ಬಸ್ ಗಳು ಸುಟ್ಟು ಭಸ್ಮವಾಗಿವೆ. ಸೂರ್ಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular