ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೈತುಂಬಾ ಸಂಬಳ ಬರುವುದು ಎಷ್ಟು ನಿಜವೋ, ಅಷ್ಟೇ ವೇಗವಾಗಿ ಕೈಯಿಂದ ಹಣ ಖಾಲಿಯಾಗುವುದು ಕೂಡ ಅಷ್ಟೇ ಸತ್ಯ ಅದರಲ್ಲೂ ವೈಟ್‌ಫೀಲ್ಡ್‌ನಂತಹ ಹೈ-ಫೈ ಏರಿಯಾದಲ್ಲಿ ವಾಸಿಸುತ್ತಾ ಹಣ ಉಳಿತಾಯ ಅಂದುಕೊಂಡಷ್ಟು ಸುಲಭ ಕೆಲಸವಲ್ಲ.
ಒರಾಕಲ್ (Oracle) ಮತ್ತು ವೋನೇಜ್ (Vonage) ಕಂಪನಿಗಳಲ್ಲಿ ಸೀನಿಯರ್ ಮ್ಯಾನೇಜರ್‌ಗಳಾಗಿರುವ ರಾಧಿಕಾ ಮತ್ತು ಏಕಾಂಶ್ ಎಂಬ ದಂಪತಿ, ತಮ್ಮ ಸ್ಮಾರ್ಟ್ ಬಜೆಟ್ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ತಿಂಗಳಿಗೆ ಲಕ್ಷ ಲಕ್ಷ ಖರ್ಚು ಮಾಡಿದ್ರೂ ಇವರು ತಮ್ಮ ಆದಾಯದ 50% ಹಣವನ್ನು ಉಳಿತಾಯ ಮಾಡುತ್ತಿದ್ದಾರೆ ಇವರ ಈ ಸಕ್ಸಸ್ ಫಾರ್ಮುಲಾ ಇಲ್ಲಿದೆ ನೋಡಿ:
ವೈಟ್‌ಫೀಲ್ಡ್ ಲೈಫ್: 1.5 ಲಕ್ಷ ರೂ. ಎಲ್ಲಿಗೆ ಹೋಗುತ್ತೆ?
ಪ್ರೀಮಿಯಂ ಸೊಸೈಟಿಯಲ್ಲಿ ವಾಸಿಸುವ ಈ ದಂಪತಿಯ ತಿಂಗಳ ಖರ್ಚಿನ ಪಟ್ಟಿ ಹೀಗಿದೆ:
ಮನೆ ಬಾಡಿಗೆ: 2 BHK ಫ್ಲ್ಯಾಟ್‌ಗೆ ಬರೋಬ್ಬರಿ ₹60,000.
ದಿನಸಿ ಮತ್ತು ಬಿಲ್‌ಗಳು: ಅಡುಗೆ ಸಾಮಗ್ರಿಗಳಿಗೆ ₹15,000 ಮತ್ತು ಕರೆಂಟ್, ಇಂಟರ್ನೆಟ್ ಸೇರಿ ₹15,000.
ಓಡಾಟ: ಆಫೀಸ್ ಪ್ರಯಾಣಕ್ಕೆ ತಿಂಗಳಿಗೆ ₹10,000.
ಲೈಫ್‌ಸ್ಟೈಲ್: ಹೊರಗಿನ ಊಟ, ಸಿನಿಮಾ ಮತ್ತು ಸಬ್‌ಸ್ಕ್ರಿಪ್ಷನ್‌ಗಳಿಗೆ ₹25,000.
ಟ್ರಾವೆಲ್ ಫಂಡ್: ಪ್ರವಾಸಕ್ಕಾಗಿಯೇ ಪ್ರತಿ ತಿಂಗಳು ಪ್ರತ್ಯೇಕವಾಗಿ ₹25,000 ಎತ್ತಿಡುತ್ತಾರೆ.
4 ಬಕೆಟ್ ಫಾರ್ಮುಲಾ: 50% ಉಳಿತಾಯದ ಗುಟ್ಟು
ಮದುವೆಯಾದ ಮೇಲೆ ಇವರು ಕಂಡುಕೊಂಡ ಯಶಸ್ವಿ ಸೂತ್ರವೆಂದರೆ ನಮ್ಮಿಬ್ಬರ ಸಂಬಳವೂ ಒಂದೇ ಮನೆಯ ಆದಾಯ. ಇವರು
https://www.grapevine.in/post/15-lakh-Monthly-Budget-706b6bb0-5a9c-4199-9ff7-d8f98e8ffd6c
ತಮ್ಮ ಒಟ್ಟು ಆದಾಯವನ್ನು 4 ಭಾಗಗಳಾಗಿ ವಿಂಗಡಿಸಿದ್ದಾರೆ:
ಏಕಾಂಶ್ ಪಾಲು: ಅವರ ವೈಯಕ್ತಿಕ ಖರ್ಚಿಗೆ.
ರಾಧಿಕಾ ಪಾಲು: ಅವರ ವೈಯಕ್ತಿಕ ಖರ್ಚಿಗೆ.
ಮನೆ ಖಾತೆ: ಎಲ್ಲಾ ಫಿಕ್ಸ್ಡ್ ಖರ್ಚುಗಳಿಗಾಗಿ.
ಉಳಿತಾಯ: ಉಳಿದ ಎಲ್ಲಾ ಹಣ ಸೇವಿಂಗ್ಸ್‌ಗೆ
ಸಂಬಳ ಹೆಚ್ಚಾದಂತೆ ಇವರು ತಮ್ಮ ಐಷಾರಾಮಿ ಖರ್ಚನ್ನು ಹೆಚ್ಚಿಸದೆ, ಉಳಿತಾಯದ ವೇಗವನ್ನು ಹೆಚ್ಚಿಸುತ್ತಿದ್ದಾರೆ. ಇವರ ಗುರಿ ತಮ್ಮ ಆದಾಯದ 50% ಹಣವನ್ನು ಉಳಿಸುವುದು
ಬೆಂಗಳೂರು ಲೈಫ್ ಬಗ್ಗೆ ಇವರ ಅಭಿಪ್ರಾಯವೇನು?
ಬೆಂಗಳೂರಿನ ಹವಾಮಾನ ಮತ್ತು ಕೆರಿಯರ್ ಗ್ರೋತ್ ಅದ್ಭುತವಾಗಿದೆ ಎನ್ನುವ ಇವರು, ಟ್ರಾಫಿಕ್ ಮತ್ತು ಗಗನಕ್ಕೇರುತ್ತಿರುವ ಬಾಡಿಗೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇವರ ಅಂತಿಮ ಗುರಿ ಏನು ಗೊತ್ತಾ? ಸದ್ಯಕ್ಕೆ ಐಟಿ ಸಿಟಿಯಲ್ಲಿ ಹಣ ಸಂಪಾದಿಸಿ, ಭವಿಷ್ಯದಲ್ಲಿ ಯಾವುದಾದರೂ ಟೈರ್-2 ನಗರಕ್ಕೆ (Tier-2 City) ಶಿಫ್ಟ್ ಆಗಿ ನೆಮ್ಮದಿಯಿಂದ ಬದುಕುವುದು
ತಿಂಗಳಿಗೆ ಲಕ್ಷ ಲಕ್ಷ ಖರ್ಚು ಮಾಡುವುದು ದೊಡ್ಡ ವಿಷಯವಲ್ಲ, ಆದರೆ ಅಷ್ಟೇ ಮೊತ್ತವನ್ನು ಪ್ಲಾನ್ ಮಾಡಿ ಉಳಿಸುವುದು ದೊಡ್ಡ ಸಾಧನೆ. ಬೆಂಗಳೂರಿನಲ್ಲಿ ಸೆಟಲ್ ಆಗಲು ಬಯಸುವ ಯುವ ದಂಪತಿಗಳಿಗೆ ಇವರ ‘ಬಕೆಟ್ ಸಿಸ್ಟಮ್’ ಒಂದು ಬೆಸ್ಟ್ ಎಕ್ಸಾಂಪಲ್

