HomeLatest NewsBIG NEWS: ಗ್ಲಾಂಡರ್ಸ್ ರೋಗ ಭೀತಿ: ಬೆಂಗಳೂರಿನ ಟರ್ಫ್ ಕ್ಲಬ್ ನಲ್ಲಿ ಕುದುರೆ ರೇಸ್ ಗೆ...

BIG NEWS: ಗ್ಲಾಂಡರ್ಸ್ ರೋಗ ಭೀತಿ: ಬೆಂಗಳೂರಿನ ಟರ್ಫ್ ಕ್ಲಬ್ ನಲ್ಲಿ ಕುದುರೆ ರೇಸ್ ಗೆ ತಾತ್ಕಾಲಿಕ ಬ್ರೇಕ್

ಬೆಂಗಳೂರು: ಗ್ಲಾಂಡರ್ಸ್ ರೋಗ ಭೀತಿ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಬೆಂಗಳೂಎರಿನ ಟರ್ಫ್ ಕ್ಲಬ್ ನಲ್ಲಿ ಕುದುರೆ ರೇಸ್ ಗಳಿಗೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ.

ಹೈದರಾಬಾದ್ ನಲ್ಲಿ ಕುದುರೆಗಳಲ್ಲಿ ಮಾರಣಾಂತಿಕ ಗ್ಲಾಂಡರ್ಸ್ ರೋಗ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಪ್ರತಿಷ್ಠಿತ ಬೆಂಗಳೂರು ಟರ್ಫ್ ಕ್ಲಬ್ ಕಳೆದ ಎರಡು ವಾರಗಳಿಂದ ರೇಸ್ ಗಳನ್ನು ತಾತ್ಕಾಲಿಕ ಸ್ಥಗಿತಗೊಳಿಸಿದೆ.

ಕುದುರೆಗಳಲ್ಲಿ ಪ್ರಾಣಹಾನಿಯಾಗುವಂತಹ ಅಪಾಯಕಾರಿ ಗ್ಲಾಂಡರ್ಸ್ ಸೋಂಕು ಮನುಷ್ಯನಿಗೂ ಹರಡುವ ಸಾಧ್ಯತೆ ಹಿನ್ನೆಲೆಯಲ್ಲಿ ಟರ್ಫ್ ಕ್ಲಬ್ ಆಡಳಿತ ಮಂಡಳಿ ತಾತ್ಕಾಲಿಕವಾಗಿ ಕುದುರೆ ರೇಸ್ ಗಳಿಗೆ ತಡೆ ನೀಡಿದೆ. ಅಲ್ಲದೇ ಬಿಟಿಸಿಯಲ್ಲಿರುವ 700ಕ್ಕೂ ಹೆಚ್ಚು ಕುದುರೆಗಳಿಗೆ ವೈದ್ಯಕೀಯ ತಪಾಸಣೆ ನಡೆಸಲಾಗಿದೆ. ಕುದುಗಳ ಸಲೈವಾ ಮಾದರಿಗಳನ್ನು ಹರಿಯಾಣದ ಪ್ರಯೋಗಾಲಯಕ್ಕೆ ಕಳುಹಿಸಿದ್ದು, ವರದಿಯಲ್ಲಿ ಒಂದು ಕುದುರೆಯಲ್ಲಿ ಗ್ಲಾಂಡರ್ಸ್ ಪಾಸಿಟಿವ್ ಪತ್ತೆಯಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸೋಂಕು ಪತ್ತೆಯಾದ ಕುದುರೆಯನ್ನು ಇತರ ಕುದುರೆಗಳಿಂದ ಬೇರ್ಪಡಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ವಿಶೇಷ ಆರೈಕೆ ಹಾಗೂ ನಿಗಾ ಇಡಲಾಗಿದೆ.

ಪ್ರತಿ ಕುದುರೆಯನ್ನು ನಿಗದಿತ ಅವಧಿಯಲ್ಲಿ ಮೂರು ಬಾರಿ ಪರೀಕ್ಷೆಗೆ ಒಳಪಡಿಸಿದ ಬಳಿಕ ಯಾವುದೇ ಕುದುರೆಗಳಲ್ಲಿಯೂ ಸೋಂಕು ಇಲ್ಲ ಎಂಬುದು ದೃಢಪಟ್ಟ ಬಳಿಕ ಮತ್ತೆ ರೇಸ್ ಗಳನ್ನು ಆಯೋಜಿಸಲಾಗುವುದು ಎಂದು ಟರ್ಫ್ ಕ್ಲಬ್ ಮಾಹಿತಿ ನೀಡಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular