HomeLatest Newsಬೆಂಗಳೂರು ನಗರಕ್ಕೆ 3 ಅಮೃತ್ ಭಾರತ್ ರೈಲು, ಮಾರ್ಗ ವಿವರ

ಬೆಂಗಳೂರು ನಗರಕ್ಕೆ 3 ಅಮೃತ್ ಭಾರತ್ ರೈಲು, ಮಾರ್ಗ ವಿವರ

ರೈಲ್ವೆ ಸಚಿವಾಲಯ 11 ಮಾರ್ಗದಲ್ಲಿ ಅಮೃತ್ ಭಾರತ್ ರೈಲುಗಳನ್ನು ಓಡಿಸಲು ತೀರ್ಮಾನಿಸಿದೆ. ಈ ರೈಲುಗಳ ಪೈಕಿ 3 ರೈಲುಗಳು ಬೆಂಗಳೂರು ನಗರಕ್ಕೆ ಸಿಕ್ಕಿವೆ. ಜನವರಿ 18ರಂದು ಪ್ರಧಾನಿ ನರೇಂದ್ರ ಮೋದಿ ಈ ರೈಲುಗಳಿಗೆ ಚಾಲನೆ ನೀಡುವ ನಿರೀಕ್ಷೆ ಇದೆ.

ಕೇಂದ್ರ ಸರ್ಕಾರ ಅಸ್ಸಾಂ, ತಮಿಳುನಾಡು, ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟು ಮೂರು ರಾಜ್ಯಗಳಿಗೆ ರೈಲುಗಳನ್ನು ಕೊಡುಗೆಯಾಗಿ ನೀಡಿದೆ. ವಂದೇ ಭಾರತ್ ಸ್ಲೀಪರ್ ರೈಲುಗಳು ಅಸ್ಸಾಂ-ಪಶ್ಚಿಮ ಬಂಗಾಳಕ್ಕೆ ಸಂಪರ್ಕ ಕಲ್ಪಿಸುತ್ತದೆ.

ತಮಿಳುನಾಡು ಮತ್ತು ಪಶ್ಚಿಮ ಬಂಗಾಳಕ್ಕೆ ಅಮೃತ್ ಭಾರತ್ ರೈಲುಗಳನ್ನು ನೀಡಿದ್ದು, ಇವುಗಳಲ್ಲಿ ಮೂರು ರೈಲುಗಳು ಬೆಂಗಳೂರು ನಗರ ಮತ್ತು ಪಶ್ಚಿಮ ಬಂಗಾಳ ಸಂಪರ್ಕಿಸುತ್ತವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಾರ್ಗದ ವಿವರ: ಸದ್ಯದ ಮಾಹಿತಿ ಪ್ರಕಾರ 3 ಅಮೃತ್ ಭಾರತ್ ರೈಲುಗಳ ಮಾರ್ಗ

  • ಪಶ್ಚಿಮ ಬಂಗಾಳದ ಅಲಿಪುರದ್ವಾರ- ಎಸ್‌ಎಂವಿಟಿ ಬೆಂಗಳೂರು
  • ಬಾಲೂರ್ ಘಾಟ್-ಎಸ್‌ಎಂವಿಟಿ ಬೆಂಗಳೂರು
  • ರಾಧಿಕಾಪುರ-ಎಸ್ಎಂವಿಟಿ ಬೆಂಗಳೂರು

ಈ ರೈಲುಗಳ ಮೂಲಕ ಬೆಂಗಳೂರು ನಗರ ಮತ್ತು ಪಶ್ಚಿಮ ಬಂಗಾಳ ರಾಜ್ಯದ ವಿವಿಧ ನಗರಕ್ಕೆ ನೇರ ಸಂಪರ್ಕ ಸಿಗಲಿದೆ. ರೈಲು ಕರ್ನಾಟಕ, ಪಶ್ಚಿಮ ಬಂಗಾಳ, ಆಂಧ್ರ ಪ್ರದೇಶ, ಒಡಿಶಾ ಮೂಲಕ ಸಂಚಾರ ನಡೆಸುವ ಕಾರಣ ಎಲ್ಲಾ ರಾಜ್ಯಗಳಿಗೆ ಅನುಕೂಲವಾಗಲಿದೆ.

ಹೊಸ ರೈಲುಗಳ ವೇಳಾಪಟ್ಟಿ, ದರಗಳನ್ನು ರೈಲ್ವೆ ಇಲಾಖೆ ಇನ್ನೂ ಅಧಿಕೃತವಾಗಿ ಪ್ರಕಟಿಸಿಲ್ಲ. ಜನವರಿ 18ರಂದು ಪ್ರಧಾನಿ ನರೇಂದ್ರ ಮೋದಿ ವಂದೇ ಭಾರತ್ ಸ್ಲೀಪರ್ ರೈಲುಗಳಿಗೆ ಚಾಲನೆ ನೀಡಲಿದ್ದು, ಆಗ ಈ ಅಮೃತ್ ಭಾರತ್ ರೈಲುಗಳನ್ನು ಸಹ ಲೋಕಾರ್ಪಣೆ ಮಾಡಲಿದ್ದಾರೆ.

ಭಾರತೀಯ ರೈಲ್ವೆಯ ಪ್ರಯಾಣಿಕ ಮೊದಲು ಎಂಬ ಯೋಜನೆಯ ಭಾಗವಾಗಿದೆ. ಈ ಅಮೃತ್ ಭಾರತ್ ರೈಲುಗಳನ್ನು ಘೋಷಣೆ ಮಾಡಿದೆ. ಸಾಮಾನ್ಯ ಪ್ರಯಾಣಿಕರಿಗಾಗಿ ಕೈಗೆಟುಕುವ ದರದಲ್ಲಿ ಉತ್ತಮ ಗುಣಮಟ್ಟದ, ಎಸಿ-ರಹಿತ, ಸ್ಲೀಪರ್ ಮತ್ತು ಜನರಲ್ ಬೋಗಿಗಳನ್ನು ಹೊಂದಿರುವ ರೈಲುಗಳು ಇವು.

ಪ್ರಯಾಣಿಕರಿಗೆ ಉತ್ತಮ ದರ್ಜೆಯ ಸಂಚಾರ ಅನುಭವ ನೀಡಲು ರೈಲ್ವೆ ಸಚಿವಾಲಯ ಈ ಮಾದರಿ ರೈಲುಗಳನ್ನು ಘೋಷಣೆ ಮಾಡಿದೆ. ಇವು ಸುಧಾರಿತ ಸೌಲಭ್ಯಗಳಾದ USB ಪೋರ್ಟ್‌ಗಳು, ಸಿಸಿಟಿವಿ, ಆಧುನಿಕ ಶೌಚಾಲಯಗಳು ಮತ್ತು ಮೊಬೈಲ್ ಚಾರ್ಜಿಂಗ್ ಪಾಯಿಂಟ್‌ಗಳನ್ನು ಹೊಂದಿವೆ.

ಭಾರತೀಯ ರೈಲ್ವೆಯ ಕೈಗೆಟುಕುವ ದರದ ಎಸಿ-ರಹಿತ ರೈಲು ಸಂಚಾರ ಪರಿಚಯಿಸುವ ಭಾಗವಾಗಿ ಅಮೃತ್ ಭಾರತ್ ರೈಲುಗಳನ್ನು ಪರಿಚಯಿಸಲಾಗಿದೆ. ವಂದೇ ಭಾರತ್ ಮಾದರಿಯಲ್ಲಿ ಉಭಯ ನಗರವನ್ನು ಸಂಪರ್ಕಿಸುವ ಈ ರೈಲು ನಾನ್ ಎಸಿ ರೈಲುಗಳಾಗಿವೆ ಮತ್ತು ವಂದೇ ಭಾರತ್ ರೈಲಿಗಿಂತ ಪ್ರಯಾಣ ದರ ಕಡಿಮೆ ಇರುತ್ತದೆ. ಈಗಾಗಲೇ ದೇಶದ ಹಲವು ಮಾರ್ಗದಲ್ಲಿ ಈ ಮಾದರಿ ರೈಲುಗಳು ಸಂಚಾರವನ್ನು ನಡೆಸುತ್ತಿವೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular