HomeKarnatakaಸಿದ್ದರಾಮಯ್ಯ ರಾಜೀನಾಮೆ ಬಳಿಕ ಇದೇ ಮೊದಲ ಬಾರಿಗೆ ಅಹಿಂದ ಸಮಾವೇಶ

ಸಿದ್ದರಾಮಯ್ಯ ರಾಜೀನಾಮೆ ಬಳಿಕ ಇದೇ ಮೊದಲ ಬಾರಿಗೆ ಅಹಿಂದ ಸಮಾವೇಶ

ಬೆಂಗಳೂರು- ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿರುವ ಬೆಳವಣಿಗೆಯೊಂದರಲ್ಲಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಇದೇ ಬರುವ ಸೆಪ್ಟೆಂಬರ್ 6ರಂದು ಬೆಂಗಳೂರಿನಲ್ಲಿ ಬೃಹತ್ ‘ಅಹಿಂದ’ ಸಮಾವೇಶಕ್ಕೆ ವೇದಿಕೆ ಸಜ್ಜಾಗಿದೆ.

ಹಿಂದುಳಿದ ವರ್ಗಗಳ ಒಕ್ಕೂಟದ ವತಿಯಿಂದ ಆಯೋಜಿತವಾಗಿರುವ ಈ ಸಮಾವೇಶವು ಪ್ರಸ್ತುತ ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಹಾಗೂ ಚರ್ಚೆಗೆ ಗ್ರಾಸವಾಗಿದೆ. ದೀರ್ಘಕಾಲದ ಬಳಿಕ ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಅಹಿಂದ (ಅಲ್ಪಸಂಖ್ಯಾತ, ಹಿಂದುಳಿದ ಮತ್ತು ದಲಿತ) ಧ್ವನಿಯನ್ನು ಮರುಸ್ಥಾಪಿಸುವ ಮತ್ತು ರಾಜಕೀಯವಾಗಿ ತಮ್ಮ ಬಲವನ್ನು ಪ್ರದರ್ಶಿಸುವ ಮಾಸ್ಟರ್ ಪ್ಲ್ಯಾನ್ ಇದರ ಹಿಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ನಂತರ ನಡೆಯುತ್ತಿರುವ ಪ್ರಥಮ ಬೃಹತ್ ಸಮಾವೇಶ ಇದಾಗಿದ್ದರಿಂದ, ಆ ಪಕ್ಷದ ಇತ್ತೀಚಿನ ಆಂತರಿಕ ರಾಜಕೀಯ ಪರಿಸ್ಥಿತಿಯಲ್ಲಿ ಕೆಪಿಸಿಸಿ ಪ್ರಮುಖರು ಹಾಗೂ ಇAತಹ ಸಮಾವೇಶಗಳಿಗೆ ಹೋಗಬೇಕೆ ಅಥವಾ ಬೇಡವೇ ಎಂಬ ಗೊಂದಲದಲ್ಲಿ ಸಿಲುಕಿರುವ ಕಾಂಗ್ರೆಸ್ ನಾಯಕರು ಭಾಗವಹಿಸುವರೇ ಎಂಬುದು ಯಕ್ಷಪ್ರಶ್ನೆಯಾಗಿದೆ.

ಸಮಾವೇಶದಲ್ಲಿ ವಿವಾದಿತ ಹಾಗೂ ನಿರ್ಣಾಯಕವಾಗಿರುವ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ (ಜಾತಿಗಣತಿ) ವರದಿ ಮತ್ತು ಒಳಮೀಸಲಾತಿ ವಿಚಾರಗಳ ಕುರಿತು ಗಂಭೀರ ಚರ್ಚೆ ನಡೆಸಿ, ಸರ್ಕಾರದ ಮುಂದೆ ಪ್ರಬಲ ಸಂದೇಶ ರವಾನಿಸುವ ಸಾಧ್ಯತೆಯಿದೆ.

ಸಿದ್ದರಾಮಯ್ಯ ಅವರು ಈ ಸಮಾವೇಶದ ಮೂಲಕ ಪಕ್ಷ ಹಾಗೂ ಸರ್ಕಾರದ ವಿರುದ್ಧ ತಮ್ಮದೇ ಆದ ರಾಜಕೀಯ ಸಂದೇಶ ರವಾನಿಸಲಿದ್ದಾರಾ ಅಥವಾ ಮುಂದಿನ ರಾಜಕೀಯ ನಡೆ ಏನು ಎಂಬ ಬಗ್ಗೆ ನೀಲಿ ನಕ್ಷೆ ಸಿದ್ಧಪಡಿಸಲಿದ್ದಾರಾ ಎಂಬ ಕುತೂಹಲ ಮೂಡಿದೆ.ಮುಂದಿನ ದಿನಗಳಲ್ಲಿ ಈ ಸಮಾವೇಶವು ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಪಕ್ಷದ ಹೈಕಮಾಂಡ್ ಮೇಲೆ ಎಂತಹ ರಾಜಕೀಯ ಪರಿಣಾಮ ಬೀರುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ರಾಜೀನಾಮೆಯ ಬಳಿಕ ಮೊದಲ ದೊಡ್ಡ ವೇದಿಕೆ

2026ರ ಮೇ 28ರಂದು ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಮರುದಿನ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ರಾಜೀನಾಮೆಯನ್ನು ಅಂಗೀಕರಿಸಿ, ಪರ್ಯಾಯ ವ್ಯವಸ್ಥೆ ಆಗುವವರೆಗೆ ಸಿದ್ದರಾಮಯ್ಯ ಮುಂದುವರಿಯುವಂತೆ ಸೂಚಿಸಿದ್ದರು. ಬಳಿಕ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನಾಗಿ ಡಿ.ಕೆ. ಶಿವಕುಮಾರ್ ಆಯ್ಕೆಯಾಗಿದ್ದು, ಜೂನ್ 3ರಂದು ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.

ಈ ಅಧಿಕಾರ ಬದಲಾವಣೆಯ ನಂತರ ಸಿದ್ದರಾಮಯ್ಯ ಅವರ ರಾಜಕೀಯ ಪಾತ್ರದ ಬಗ್ಗೆ ಹಲವು ಪ್ರಶ್ನೆಗಳು ಎದ್ದಿವೆ. ಸಕ್ರಿಯ ರಾಜಕೀಯದಿಂದ ಹಿಂದೆ ಸರಿಯುವುದಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿರುವ ಹಿನ್ನೆಲೆಯಲ್ಲಿ ಸೆ.6ರ ಸಮಾವೇಶವು ಅವರ ರಾಜಕೀಯ ಮುಂದಿನ ಹಂತಕ್ಕೆ ಪ್ರಮುಖ ವೇದಿಕೆಯಾಗಬಹುದೆಂಬ ಚರ್ಚೆ ನಡೆಯುತ್ತಿದೆ.

2005ರ ಅಹಿಂದ ಇತಿಹಾಸ ಮತ್ತೆ ನೆನಪಿಗೆ

ಸಿದ್ದರಾಮಯ್ಯ ಅವರ ರಾಜಕೀಯ ಬದುಕಿನಲ್ಲಿ ಅಹಿಂದ ಚಳವಳಿಗೆ ವಿಶೇಷ ಸ್ಥಾನವಿದೆ. ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಮತ್ತು ದಲಿತರನ್ನು ಒಗ್ಗೂಡಿಸುವ ರಾಜಕೀಯ-ಸಾಮಾಜಿಕ ಪರಿಕಲ್ಪನೆಯಾಗಿ ಅಹಿಂದವನ್ನು ಅವರು 2005ರ ಅವಧಿಯಲ್ಲಿ ಬಲವಾಗಿ ಮುನ್ನೆಲೆಗೆ ತಂದಿದ್ದರು.

ಜೆಡಿಎಸ್‌ನಲ್ಲಿದ್ದ ಸಂದರ್ಭದಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಅಹಿಂದ ಸಮಾವೇಶ ಸಿದ್ದರಾಮಯ್ಯ ಅವರ ರಾಜಕೀಯ ಬದುಕಿನ ಪ್ರಮುಖ ತಿರುವುಗಳಲ್ಲಿ ಒಂದಾಯಿತು. ಈ ಬೆಳವಣಿಗೆಯ ನಂತರ ದೇವೇಗೌಡರೊಂದಿಗೆ ಅವರ ಭಿನ್ನಾಭಿಪ್ರಾಯ ತೀವ್ರಗೊಂಡು, ಅಂತಿಮವಾಗಿ ಸಿದ್ದರಾಮಯ್ಯ ಜೆಡಿಎಸ್‌ನಿಂದ ಹೊರಬಂದು ಕಾಂಗ್ರೆಸ್ ಸೇರುವ ರಾಜಕೀಯ ಬೆಳವಣಿಗೆಗೂ ಇದು ಕಾರಣವಾಯಿತು ಎಂದು ಹಲವು ರಾಜಕೀಯ ವಿಶ್ಲೇಷಣೆಗಳು ದಾಖಲಿಸಿವೆ.

2006ರಲ್ಲಿ ಕಾಂಗ್ರೆಸ್ ಸೇರಿದ ಬಳಿಕವೂ ಅಹಿಂದ ಸಮೀಕರಣ ಸಿದ್ದರಾಮಯ್ಯ ಅವರ ರಾಜಕೀಯದ ಪ್ರಮುಖ ಆಧಾರವಾಗಿ ಮುಂದುವರಿಯಿತು. 2013ರಲ್ಲಿ ಕಾಂಗ್ರೆಸ್ ಸರ್ಕಾರ ರಚಿಸಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾದಾಗಲೂ ಸಾಮಾಜಿಕ ನ್ಯಾಯ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಅವರ ಆಡಳಿತದ ಪ್ರಮುಖ ರಾಜಕೀಯ ಸಂದೇಶವಾಗಿತ್ತು.

ಮತ್ತೆ ಅಹಿಂದ ವೇದಿಕೆ ಏಕೆ?

ಪ್ರಸ್ತುತ ಬೆಂಗಳೂರಿನಲ್ಲಿ ನಡೆಯಲಿರುವ ಸಮಾವೇಶವನ್ನು ಕೇವಲ ಒಂದು ಸಮುದಾಯದ ಕಾರ್ಯಕ್ರಮವೆಂದು ನೋಡುವುದಕ್ಕಿಂತ, ಸಿದ್ದರಾಮಯ್ಯ ಅವರ ರಾಜಕೀಯ ಪ್ರಭಾವದ ಮುಂದಿನ ಅಧ್ಯಾಯದ ಹಿನ್ನೆಲೆಯಲ್ಲಿ ನೋಡುವ ಅಗತ್ಯವಿದೆ.

ಇತ್ತೀಚಿನ ವರದಿಗಳ ಪ್ರಕಾರ, ಸೆ.6ರ ಒಬಿಸಿ ಸಮಾವೇಶವು ಅಹಿಂದ ವೇದಿಕೆಯನ್ನು ಹೊಸ ತಂಡದೊಂದಿಗೆ ಪುನರ್‌ಸಂಘಟಿಸುವ ಪ್ರಯತ್ನಕ್ಕೆ ವೇದಿಕೆಯಾಗಬಹುದು ಎಂಬ ಚರ್ಚೆ ಇದೆ. ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಸೇರಿದಂತೆ ಹೊಸ ಪೀಳಿಗೆಯ ನಾಯಕರ ಪಾತ್ರವೂ ಈ ಹಿನ್ನೆಲೆಯಲ್ಲಿ ಗಮನ ಸೆಳೆಯುತ್ತಿದೆ.

ಆದರೆ ಇದೇ ವೇಳೆ ಸಿದ್ದರಾಮಯ್ಯ ಅವರ ಹಳೆಯ ಅಹಿಂದ ಬಳಗದ ಕೆಲವು ಪ್ರಮುಖ ನಾಯಕರೊಂದಿಗೆ ರಾಜಕೀಯ ಅಂತರದ ಚರ್ಚೆಯೂ ಇದೆ. ಹೀಗಾಗಿ ಸೆ.6ರ ಸಮಾವೇಶದಲ್ಲಿ ಯಾರು ಸಕ್ರಿಯವಾಗಿ ಕಾಣಿಸಿಕೊಳ್ಳುತ್ತಾರೆ, ಯಾರು ದೂರ ಉಳಿಯುತ್ತಾರೆ ಎಂಬುದೂ ಅಷ್ಟೇ ಮಹತ್ವ ಪಡೆದಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular