BIG NEWS: ಸ್ನೇಹಿತೆಯಿಂದಲೇ ಎಂತೆಹ ಕೃತ್ಯ…..ಮಹಿಳೆಯನ್ನು ಕಟ್ಟಿಹಾಕಿ ದರೋಡೆ; ಐವರು ಆರೋಪಿಗಳು ಅರೆಸ್ಟ್

ಬೆಂಗಳೂರು: ಮಹಿಳೆಯನ್ನು ಕಟ್ಟಿಹಾಕಿ ದರೋಡೆ ಮಾಡಿದ್ದ ಖತರ್ನಾಕ್ ಗ್ಯಾಂಗ್ ನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಗುರು, ರುದ್ರೇಶ್, ಸಂದೀಪ್, ಪ್ರಭಾವತಿ, ರೇಣುಕಾ ಬಂಧಿತರು. ಗುರು ಹಾಗೂ ರೇಣುಕಾ ಗಂಡ-ಹೆಂಡತಿ. ಹಣದ ಆಸೆಗಾಗಿ ರೇಣುಕಾ ತನ್ನ ಸ್ನೇಹಿತೆಯನ್ನೇ ದೋಚಿದ್ದಳು.

ಕೋಡಿಗೆಹಳ್ಳಿ ಬಳಿಯ ಗಂಗಾ ಆಯುರ್ವೇದಿಕ್ ಮಸಾಜ್ ಸೆಂಟರ್ ಗೆ ನುಗ್ಗಿದ್ದ ಗ್ಯಾಂಗ್ ಕೆಮಿಕಲ್ ಸ್ಪ್ರೇ ಮಾಡಿದ್ದ ಕರ್ಚಿಫ್ ನಿಂದ ಅಲ್ಲಿದ್ದ ಅನುಶ್ರೀ ಎಂಬ ಮಹಿಳೆಯ ಮುಖಕ್ಕೆ ಹಿಡಿದು, ಮಹಿಳೆಯ ಕೈ ಕಾಲು ಕಟ್ಟಿಹಾಕಿ ಚಿತ್ರಹಿಂಸೆ ನೀಡಿದ್ದರು. ಬಳಿಕ ಮಹಿಳೆಯ ಚಿನ್ನಾಭರಣ, ಮಾಂಗಲ್ಯ ಸರ, ಆಯುರ್ವೇದಿಕ್ ಸೆಂಟರ್ ನಲ್ಲಿದ್ದ ಹಣ ದೋಚಿ ಪರಾರಿಯಾಗಿದ್ದರು. ಜನವರಿ 14ರಂದು ಈ ಘಟನೆ ನಡೆದಿತ್ತು.

ಆಯುರ್ವೇದಿಕ್ ಸೆಂಟರ್ ಗೆ ಮಸಾಜ್ ಮಾಡಿಸಿಕೊಳ್ಳಲು ಬಂದವರಂತೆ ಎರಡು ಬೈಕ್ ನಲ್ಲಿ ಬಂದಿದ್ದ ಗ್ಯಾಂಗ್ ಮಹಿಳೆಯನ್ನು ಕಟ್ಟಿ ಹಾಕಿ ದರೋಡೆ ಮಾಡಿತ್ತು. ಇದೀಗ ಕೋಡಿಗೆಹಳ್ಳಿ ಪೊಲೀಸರು ಐವರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ರೇಣುಕಾ ಎಂಬ ಮಹಿಳೆ ಈ ಕೆಲಸ ಮಾಡಿಸಿದ್ದು, ಆಕೆ ಆಯುರ್ವೇದಿಕ್ ಸೆಂಟರ್ ನ ಅನುಶ್ರೀ ಸ್ನೇಹಿತೆಯಾಗಿದ್ದಳು. ಹಣ ದೋಚಲೆಂದೇ ಸ್ನೇಹಿತೆಯನ್ನೇ ಕಟ್ಟಿಹಾಕಿ ದರೋಡೆ ಮಾಡಿಸಿದ್ದಳು ಎಂಬುದು ಬಯಲಾಗಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read