ಬೆಂಗಳೂರಿನ ಜನತೆಯ ಗಮನಕ್ಕೆ : ಇಂದಿನಿಂದ 15 ದಿನ ಈ ಏರಿಯಾಗಳಲ್ಲಿ ʻವಿದ್ಯುತ್ ವ್ಯತ್ಯಯʼ| Power Cut

ಬೆಂಗಳೂರು : ಹೊಸ ವರ್ಷದ ಆರಂಭದಲ್ಲೇ ಬೆಂಗಳೂರಿಗರಿಗೆ ಮತ್ತೆ ಪವರ್ ಶಾಕ್ ಎದುರಾಗಿದ್ದು, ನಗರದ ಹಲವು ಪ್ರದೇಶಗಳಲ್ಲಿ ಇಂದಿನಿಂದ 15 ದಿನ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ಹೊರಡಿಸಿದೆ.

ಜ.10 ರಿಂದ ಜ.26ರವರೆಗೆ ಸುಮಾರು 16 ದಿನಗಳ ಕಾಲ ತಾವರೆಕೆರೆ ಹಾಗೂ ಮಾಚೋಹಳ್ಳಿ ಸುತ್ತಮುತ್ತ ಪವರ್ ಕಟ್ ಇರಲಿದೆ. ಬೆಳಗ್ಗೆ 8ರಿಂದ ರಾತ್ರಿ 8ರ ನಡುವೆ 2-3 ಗಂಟೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ಹೊರಡಿಸಿದೆ.

ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ

ತಾವರೆಕೆರೆ ವ್ಯಾಪ್ತಿಯ ಚನ್ನೇನಹಳ್ಳಿ, ಯರ್ರಪ್ಪ ಕೈಗಾರಿಕಾ ಪ್ರದೇಶ, ದೊಡ್ಡಾಲದ ಮರ, ನಾಗನಹಳ್ಳಿ, ಪೆದ್ದನಪಾಳ್ಯ, ದೇವಮಾಚೋಹಳ್ಳಿ. ಹಾಗೂ ಮಾಚೋಹಳ್ಳಿ ವ್ಯಾಪ್ತಿಯ ಕಾಚೋಹಳ್ಳಿ, ಕಲ್ಪಾ ಕೈಗಾರಿಕಾ ಪ್ರದೇಶ, ಹೊನಗನಹಟ್ಟಿ, ಗಾಣಕಲ್ ಕೈಗಾರಿಕಾ ಪ್ರದೇಶ, ಫಾರೆಸ್ಟ್ ಗೇಟ್ ಕೈಗಾರಿಕಾ ಪ್ರದೇಶ, ಕೆ.ಜಿ. ಲಕ್ಕೇನಹಳ್ಳಿ. ಯಲಚಗುಪ್ಪೆ, ಗಂಗಪ್ಪನಹಳ್ಳಿ, ಯಲ್ಲಪ್ಪನ ಪಾಳ್ಯ, ಕೆಂಪಗೊಂಡನಹಳ್ಳಿ,ಚಿಕ್ಕಗೊಲ್ಲರಹಟ್ಟಿಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಅದೇ ರೀತಿ ಶ್ರೀನಿಧಿ ಲೇಔಟ್, ವಿನಾಯಕ ಬಡಾವಣೆ, ರಾಘವೇಂದ್ರ ಲೇಔಟ್, ಸ್ಪೂರ್ತಿ ಬಡಾವಣೆ, ಮಂಚನಬೆಲೆ ಕಾಲೋನಿ, ಸೀಗೇಹಳ್ಳಿ ಗೇಟ್, ಕಡಬಗೆರೆ ಕ್ರಾಸ್, ಕೆ.ಕೆ.ಲೇಔಟ್, ಅರ್ಕಾವತಿ ಲೇಔಟ್, ಮಹಿಮಣ್ಣನಪಾಳ್ಯ, ಲಕ್ಷ್ಮೀ ಬಡಾವಣೆ, ಕಿನ್ನಹಳ್ಳಿ ರಸ್ತೆ, ಸೀಗೆಹಳ್ಳಿ, ಕಡಬಗೆರೆ, ಬೈಲಾಕೋನೆನಹಳ್ಳಿ, ರಾಘವೇಂದ್ರ ಬಡಾವಣೆ, ಸೇರಿ ಸುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ಹೊರಡಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read