HomeAutoಹೊಸ ಜಾವಾ 42 ಎಫ್‌ಜೆ ಆಲ್ ಸ್ಟಾರ್ಸ್ ಲಾಂಚ್‌: ಆಕರ್ಷಕ ವಿನ್ಯಾಸ, ಬಲಿಷ್ಠ ಎಂಜಿನ್‌, ಬೆಲೆ...

ಹೊಸ ಜಾವಾ 42 ಎಫ್‌ಜೆ ಆಲ್ ಸ್ಟಾರ್ಸ್ ಲಾಂಚ್‌: ಆಕರ್ಷಕ ವಿನ್ಯಾಸ, ಬಲಿಷ್ಠ ಎಂಜಿನ್‌, ಬೆಲೆ ಎಷ್ಟು?

ಬೆಂಗಳೂರು: ದೇಶದ ಕ್ಲಾಸಿಕ್ ಬೈಕ್‌ ಪ್ರಿಯರ ನೆಚ್ಚಿನ ಬ್ರ್ಯಾಂಡ್ ‘ಜಾವಾ ಯೆಜ್ಡಿ ಮೋಟಾರ್‌ಸೈಕಲ್ಸ್’ (Jawa Yezdi Motorcycles) ತನ್ನ ಜನಪ್ರಿಯ ಜಾವಾ 42 ಸರಣಿಯಲ್ಲಿ ಹೊಚ್ಚ ಹೊಸ ‘ಜಾವಾ 42 ಎಫ್‌ಜೆ ಆಲ್ ಸ್ಟಾರ್ಸ್’ (Jawa 42 FJ All Stars) ಆವೃತ್ತಿಯನ್ನು ಭಾರತೀಯ ಮಾರುಕಟ್ಟೆಗೆ ಅದ್ಧೂರಿಯಾಗಿ ಬಿಡುಗಡೆ ಮಾಡಿದೆ.

ರೆಟ್ರೋ ಲುಕ್‌ನೊಂದಿಗೆ ಕಣ್ಣುಸೆಳೆಯುವ ಹೊಸ ವಿನ್ಯಾಸ, ಬಲಿಷ್ಠ ಎಂಜಿನ್ ಸಾಮರ್ಥ್ಯ ಹಾಗೂ ಅತ್ಯಾಧುನಿಕ ಫೀಚರ್‌ಗಳ ಸಮ್ಮಿಲನವಾಗಿರುವ ಈ ರಸ್ತೆ ರಾಜ, ರಾಯಲ್ ಎನ್‌ಫೀಲ್ಡ್‌ಗೆ ಕಠಿಣ ಪೈಪೋಟಿ ನೀಡಲು ಸಂಪೂರ್ಣವಾಗಿ ಸಜ್ಜಾಗಿದೆ.

ಏನಿದು ಜಾವಾ ‘ಆಲ್ ಸ್ಟಾರ್ಸ್’?

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಟ್ರೆಂಡ್ ಹಿಂದೆ ಹೋಗದೆ, ತಮ್ಮದೇ ಆದ ವಿಶಿಷ್ಟ ವ್ಯಕ್ತಿತ್ವ, ಆತ್ಮವಿಶ್ವಾಸ ಮತ್ತು ಧೈರ್ಯ ಹೊಂದಿರುವ ರೈಡರ್‌ಗಳನ್ನು ಗುರುತಿಸುವ ಉದ್ದೇಶದಿಂದ ಜಾವಾ ಈ ‘ಆಲ್ ಸ್ಟಾರ್ಸ್’ ಪರಿಕಲ್ಪನೆಯನ್ನು ಪರಿಚಯಿಸಿದೆ. ಇದು ಜಾವಾ ಬೈಕ್ ಸವಾರರ ಕ್ಯಾರೆಕ್ಟರ್, ಕಾಂಡಕ್ಟ್ ಮತ್ತು ಕರೇಜ್ (ವ್ಯಕ್ತಿತ್ವ, ನಡವಳಿಕೆ ಮತ್ತು ಧೈರ್ಯ) ಅನ್ನು ಸಂಕೇತಿಸುತ್ತದೆ. ಈ ಸರಣಿಯ ಮೊದಲ ಬೈಕ್ ಆಗಿ ʼಜಾವಾ 42 ಎಫ್‌ಜೆ ಆಲ್ ಸ್ಟಾರ್ಸ್’ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ.

ಹೇಗಿದೆ ಎಂಜಿನ್ ಮತ್ತು ಪರ್ಫಾರ್ಮೆನ್ಸ್? ದರ ಎಷ್ಟು?

ಹೊಸ ಜಾವಾ 42 ಎಫ್‌ಜೆ ಬೈಕ್‌ನಲ್ಲಿ 334-ಸಿಸಿ ಸಾಮರ್ಥ್ಯದ ಆಲ್ಫಾ-2 ಲಿಕ್ವಿಡ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ.

ಇದು 29.17 ಪಿಎಸ್‌ ಗರಿಷ್ಠ ಪವರ್ ಹಾಗೂ 29.62 ನ್ಯೂಟನ್‌ಮೀಟರ್‌ ಟಾರ್ಕ್ ಉತ್ಪಾದಿಸುತ್ತದೆ. ಕಂಪನಿಯ ಪ್ರಕಾರ, ಈ ಬೈಕ್ ತನ್ನ ಸೆಗ್ಮೆಂಟ್‌ನ ಇತರ 350ಸಿಸಿ ಬೈಕ್‌ಗಳಿಗಿಂತ ಶೇ. 42ರಷ್ಟು ಹೆಚ್ಚು ಪವರ್ ನೀಡುತ್ತದೆ.

ಸುಗಮ ಚಾಲನೆಗಾಗಿ 6-ಸ್ಪೀಡ್ ಗೇರ್‌ಬಾಕ್ಸ್ ಅನ್ನು ನೀಡಲಾಗಿದ್ದು, ಇದರ ಆರಂಭಿಕ ಬೆಲೆ 2.01 ಲಕ್ಷ ರೂಪಾಯಿ (ಎಕ್ಸ್-ಶೋರೂಮ್) ಆಗಿದೆ.

ವಿನ್ಯಾಸ ಮತ್ತು ಟಾಪ್ ಫೀಚರ್ಸ್

ನಿಯೋ-ಕ್ಲಾಸಿಕ್ ವಿನ್ಯಾಸದೊಂದಿಗೆ, ಸೆಗ್ಮೆಂಟ್‌ನಲ್ಲೇ ಮೊದಲ ಬಾರಿಗೆ ಬ್ರಷ್ಡ್ ಅಲ್ಯೂಮಿನಿಯಂ ಟ್ಯಾಂಕ್ ಪ್ಯಾನೆಲ್‌ಗಳನ್ನು ನೀಡಲಾಗಿದ್ದು, ಬೈಕ್‌ಗೆ ಸ್ಪೋರ್ಟಿ ಲುಕ್ ತಂದುಕೊಟ್ಟಿದೆ.

ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಆಲ್-ಎಲ್ಇಡಿ ಲೈಟಿಂಗ್ ವ್ಯವಸ್ಥೆ ಇದರಲ್ಲಿದ್ದು, ಸುರಕ್ಷತೆಗಾಗಿ ಡ್ಯುಯಲ್-ಚಾನೆಲ್ ಎಬಿಎಸ್ ನೀಡಲಾಗಿದೆ. ಮುಂಭಾಗ 320 ಎಂಎಂ ಮತ್ತು ಹಿಂಭಾಗ 240 ಎಂಎಂ ಡಿಸ್ಕ್ ಬ್ರೇಕ್ ಅಳವಡಿಸಲಾಗಿದೆ.

ಸಸ್ಪೆನ್ಷನ್ ವಿಚಾರಕ್ಕೆ ಬರುವುದಾದರೆ, ಮುಂಭಾಗದಲ್ಲಿ 41 ಎಂಎಂ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ 5-ಸ್ಟೆಪ್ ಅಡ್ಜಸ್ಟಬಲ್ ಗ್ಯಾಸ್-ಫಿಲ್ಡ್ ಟ್ವಿನ್ ಶಾಕ್ ಅಬ್ಸಾರ್ಬರ್ ಇದೆ. ಗುಂಡಿ ಬಿದ್ದ ರಸ್ತೆಗಳಲ್ಲೂ ಇದು ಆರಾಮದಾಯಕ ರೈಡ್ ನೀಡುತ್ತದೆ.790 ಎಂಎಂ ಸೀಟ್ ಎತ್ತರ, 178 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 12-ಲೀಟರ್ ಇಂಧನ ಟ್ಯಾಂಕ್ ಇದರಲ್ಲಿದೆ. ಬೈಕಿನ ಒಟ್ಟು ತೂಕ 184 ಕೆ.ಜಿ. ಆಗಿದೆ.

ಬಣ್ಣಗಳು ಮತ್ತು ಬೆಲೆ

ಈ ಬೈಕ್ ಒಟ್ಟು ಆರು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ. ವಿಶೇಷವೆಂದರೆ ಇದರಲ್ಲಿ ಕ್ರೋಮ್ ಎಡಿಷನ್ ಕೂಡ ಸೇರಿದೆ. ವಿವಿಧ ಬೈಕ್‌ಗಳ ದೆಹಲಿ ಎಕ್ಸ್‌ ಶೋರೂಂ ದರಗಳು ಈ ಕೆಳಗಿನಂತಿವೆ.

ಆಲ್ ಸ್ಟಾರ್ಸ್ ಅರೋರಾ ಗ್ರೀನ್: 2,01,942 ರೂ.

ಆಲ್ ಸ್ಟಾರ್ಸ್ ರೆಡ್: 2,01,942 ರೂ.

ಆಲ್ ಸ್ಟಾರ್ಸ್ ನೆಬ್ಯುಲಾ ಬ್ಲೂ: 2,07,942 ರೂ.

ಆಲ್ ಸ್ಟಾರ್ಸ್ ಮ್ಯಾಟ್ ಬ್ಲ್ಯಾಕ್ (ರೆಡ್ ಕ್ಲಾಡ್): 2,07,942 ರೂ

.

ಆಲ್ ಸ್ಟಾರ್ಸ್ ಮ್ಯಾಟ್ ಬ್ಲ್ಯಾಕ್ (ಬ್ಲ್ಯಾಕ್ ಕ್ಲಾಡ್): 2,07,942 ರೂ.

ಆಲ್ ಸ್ಟಾರ್ಸ್ ಕ್ರೋಮ್ : 2,15,942 ರೂ.

ಗ್ರಾಹಕರಿಗೆ ಭರ್ಜರಿ ಆಫರ್

ಜಾವಾ ಯೆಜ್ಡಿ ಕಂಪನಿಯು ಈ ಬೈಕಿನ ಮೇಲೆ ಭರ್ಜರಿ ವಾರಂಟಿ ಪ್ಯಾಕೇಜ್ ಘೋಷಿಸಿದೆ.

4 ವರ್ಷ ಅಥವಾ 50,000 ಕಿ.ಮೀ ಸ್ಟ್ಯಾಂಡರ್ಡ್ ವಾರಂಟಿ (ಇದನ್ನು 6 ವರ್ಷಗಳವರೆಗೆ ವಿಸ್ತರಿಸಬಹುದು).

8 ವರ್ಷಗಳವರೆಗೆ ರೋಡ್ ಸೈಡ್ ಅಸಿಸ್ಟೆನ್ಸ್ ಸೌಲಭ್ಯ.

5 ವರ್ಷಗಳವರೆಗೆ ವಾರ್ಷಿಕ ನಿರ್ವಹಣೆ (ಎಎಂಸಿ) ಪ್ಯಾಕೇಜ್‌

ವಿಶಿಷ್ಟವಾದ ನಿಯೋ ಕ್ಲಾಸಿಕ್‌ ವಿನ್ಯಾಸ, ಬಲವಾದ ರೋಡ್‌ ಪ್ರಸೆನ್ಸ್‌ ಮತ್ತು ಆಕರ್ಷಕ ಕಾರ್ಯಕ್ಷಮತೆ ಹೊಂದಿರುವ ಜಾವಾ 42 ಎಫ್‌ಜೆ ಬೈಕ್, 2024 ಮತ್ತು 2025ನೇ ಸಾಲಿನ ಪ್ರತಿಷ್ಠಿತ ವ್ಯೂವರ್ಸ್ ಚಾಯ್ಸ್ ಮೋಟಾರ್‌ಸೈಕಲ್ ಆಫ್ ದಿ ಇಯರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿರುವುದು ವಿಶೇಷ.

ದೇಶಾದ್ಯಂತ ಇರುವ 450 ಕ್ಕೂ ಹೆಚ್ಚು ಜಾವಾ ಯೆಜ್ಡಿ ಶೋರೂಮ್‌ಗಳಲ್ಲಿ ಈ ಹೊಸ ಬೈಕ್ ಬುಕ್ಕಿಂಗ್ ಮತ್ತು ಖರೀದಿಗೆ ಲಭ್ಯವಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular