HomeTourismBig News: ಬೆಂಗಳೂರು-ಗೋವಾ ವಂದೇ ಭಾರತ್ ರೈಲು: ಕರಾವಳಿಗರಿಗೆ ಅಭಯ

Big News: ಬೆಂಗಳೂರು-ಗೋವಾ ವಂದೇ ಭಾರತ್ ರೈಲು: ಕರಾವಳಿಗರಿಗೆ ಅಭಯ

ಬೆಂಗಳೂರು-ಗೋವಾ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆ. ಈಗ ಎಲ್ಲಾ ಕಡೆ ಇದೇ ಸುದ್ದಿ. ಬೆಂಗಳೂರು ನಗರದ ಯಶವಂತಪುರದಿಂದ ಗೋವಾದ ಮಡಗಾಂವ್‌ಗೆ ವಂದೇ ಭಾರತ್ ರೈಲು ಆರಂಭಿಸಲು ಇಲಾಖೆ ಮುಂದಾಗಿದೆ.

ಆದರೆ ರೈಲಿನ ವೇಳಾಪಟ್ಟಿ, ನಿಲ್ದಾಣಗಳ ಕುರಿತು ಹಲವಾರು ಮಾಹಿತಿಗಳು ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿದ್ದು, ಜನರ ಗೊಂದಲಕ್ಕೆ ಕಾರಣವಾಗಿದೆ. ರೈಲ್ವೆ ಇಲಾಖೆ ಇನ್ನೂ ಸಹ ವೇಳಾಪಟ್ಟಿ, ನಿಲ್ದಾಣಗಳನ್ನು ಅಂತಿಮಗೊಳಿಸಿಲ್ಲ.

ಯಶವಂತಪುರ-ಮಡಗಾಂವ್ ವಂದೇ ಭಾರತ್ ರೈಲು ಮಂಗಳೂರು ಸೆಂಟ್ರಲ್, ಮಂಗಳೂರು ಜಂಕ್ಷನ್‌ಗೆ ಬರುವುದಿಲ್ಲ. ಪಡೀಲ್ ಬೈಪಾಸ್ ಮೂಲಕ ಸಾಗಲಿದೆ ಎಂಬುದು ಸದ್ಯದ ಮಾಹಿತಿ. ಆದರೆ ನಿಲ್ದಾಣಗಳ ಕುರಿತು ಇನ್ನೂ ರೈಲ್ವೆ ಇಲಾಖೆ ಅಧಿಕೃತ ಆದೇಶವನ್ನು ಹೊರಡಿಸಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಂಸದರ ಪೋಸ್ಟ್: ಸಾಮಾಜಿಕ ಜಾಲತಾಣದಲ್ಲಿ ವಂದೇ ಭಾರತ್ ರೈಲಿನ ಸುದ್ದಿಗಳು ವೈರಲ್ ಆದ ಬಳಿಕ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಪೋಸ್ಟ್ ಒಂದನ್ನು ಹಾಕಿದ್ದಾರೆ.

‘ವಂದೇ ಭಾರತ್ ಆಸಕ್ತರಿಗೊಂದು ಮಾತು…ಬೆಂಗಳೂರು-ಮಡಗಾಂವ್ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಪ್ರಯಾಣದ ಬಗ್ಗೆ ಗೊಂದಲದ ಸುದ್ದಿಗಳು ಹೊರಬರುತ್ತಿವೆ. ಬರಲಿರುವ ವಂದೇ ಭಾರತ್ ರೈಲು ಮಂಗಳೂರು, ಉಡುಪಿ, ಕಾರವಾರದಲ್ಲಿ ನಿಲುಗಡೆ ಇಲ್ಲ ಎಂಬ ವದಂತಿ ಹರಿದಾಡುತ್ತಿದ್ದು ಪ್ರಯಾಣಿಕರಿಗೆ ಯಾವುದೇ ಗೊಂದಲ ಬೇಡ’ ಎಂದು ಹೇಳಿದ್ದಾರೆ.

‘ಕರಾವಳಿಯ ಪ್ರದೇಶವಾದ ಮಂಗಳೂರು, ಉಡುಪಿ, ಕಾರವಾರವು ಸೇರಿದಂತೆ ಅಗತ್ಯ ಇದ್ದೆಡೆ ವಂದೇ ಭಾರತ್ ರೈಲು ನಿಲುಗಡೆಗೆ ಪ್ರಸ್ತಾವನೆ ನೀಡಲಾಗಿದೆ. ರೈಲ್ವೆ ಇತಿಹಾಸದಲ್ಲಿಯೇ ರಾಜಧಾನಿಗೆ ಕರಾವಳಿ ಪ್ರದೇಶವನ್ನು ಬೆಸೆಯುತ್ತಿರುವ ಮೋದಿ ಸರಕಾರ, ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್, ವಿ ಸೋಮಣ್ಣರವರು ಅಭಿನಂದನಾರ್ಹರು’ ಎಂದು ತಿಳಿಸಿದ್ದಾರೆ.

‘ವಂದೇ ಭಾರತ್ ಕರಾವಳಿಗರಿಗಾಗಿಯೇ ಹೊರಡಲು ಸಿದ್ಧವಾದ ರೈಲು. ವಂದೇ ಭಾರತ್ ಪ್ರಯಾಣಿಕರ ಜೊತೆ ಕರಾವಳಿ ಜನಪ್ರತಿನಿಧಿಗಳು ನಿಮ್ಮೊಂದಿಗಿರುತ್ತೇವೆ’ ಎಂದು ಭರವಸೆಯನ್ನು ನೀಡಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular