HomeKarnatakaಬೆಂಗಳೂರು : ಸ್ವಾತಂತ್ರ್ಯೋತ್ಸವಕ್ಕೆ ಡಾ.ಬಿ.ಆರ್ ಅಂಬೇಡ್ಕರ್ ಥೀಮ್ ಅಡಿ ಫಲಪುಷ್ಪ ಪ್ರದರ್ಶನ..!

ಬೆಂಗಳೂರು : ಸ್ವಾತಂತ್ರ್ಯೋತ್ಸವಕ್ಕೆ ಡಾ.ಬಿ.ಆರ್ ಅಂಬೇಡ್ಕರ್ ಥೀಮ್ ಅಡಿ ಫಲಪುಷ್ಪ ಪ್ರದರ್ಶನ..!

ನವದೆಹಲಿ :  ಲಾಲ್ ಬಾಗ್  ನಲ್ಲಿ ಈ ಬಾರಿಯ ಸ್ವಾತಂತ್ರೋತ್ಸವ ಫಲಪುಷ್ಪ ಪ್ರದರ್ಶನದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ರಾರಾಜಿಸಲಿದ್ದಾರೆ.

ಅಂಬೇಡ್ಕರ್ ಥೀಮ್ನಡಿ ಫಲಪುಷ್ಪ ಪ್ರದರ್ಶನ ನಡೆಸಲು ರಾಜ್ಯ ತೋಟಗಾರಿಕೆ ಇಲಾಖೆ ತೀರ್ಮಾನಿಸಿದೆ. ಅಂಬೇಡ್ಕರ್ ಅವರ ಪ್ರತಿಮೆ, ಸಂವಿಧಾನ ಕೃತಿ, ಅವರು ಬಾಳಿ ಬದುಕಿದ ಮನೆ, ಅವರ ಆದರ್ಶಗಳನ್ನು ಹೂಗಳಲ್ಲಿ ಅನಾವರಣಗೊಳಿಸುವ ಮೂಲಕ ಪ್ರದರ್ಶನವನ್ನು ಅಂದಗೊಳಿಸಲಾಗುತ್ತದೆ.

ಪ್ರತಿ ವರ್ಷ ಎರಡು ಬಾರಿ ಬೆಂಗಳೂರಿನ ಲಾಲ್ಬಾಗ್ನಲ್ಲಿ ಫ್ಲವರ್ ಶೋ ನಡೆಯುತ್ತಿದೆ. ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಫ್ಲವರ್ ಶೋ ನಡೆಸಲಾಗುತ್ತದೆ. 2ಬಾರಿ ಸತತ 15 ದಿನ ಶೋ ನಡೆಯುತ್ತದೆ. ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆವರೆಗೂ ಪ್ರದರ್ಶನ ವೀಕ್ಷಣೆಗೆ ಅವಕಾಶ ಇರುತ್ತದೆ. ವಯಸ್ಕರಿಗೆ 80 ರೂ ಹಾಗೂ ಶಾಲಾ ಮಕ್ಕಳಿಗೆ ಉಚಿತ ಟಿಕೆಟ್ ದರ ಇರುತ್ತದೆ. ಫ್ಲವರ್ ಶೋ ದಿನಾಂಕವನ್ನು ಇನ್ನೂ ತೋಟಗಾರಿಕೆ ಇಲಾಖೆ ಫೈನಲ್ ಮಾಡಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular