HomeKarnatakaಮಾಲ್​ನಲ್ಲೇ ಕುಸಿದು ಬಿದ್ದ ವ್ಯಕ್ತಿ; ಜೀವ ಉಳಿಸಿದ ಸ್ಥಳದಲ್ಲಿದ್ದ ವೈದ್ಯ

ಮಾಲ್​ನಲ್ಲೇ ಕುಸಿದು ಬಿದ್ದ ವ್ಯಕ್ತಿ; ಜೀವ ಉಳಿಸಿದ ಸ್ಥಳದಲ್ಲಿದ್ದ ವೈದ್ಯ

ಬೆಂಗಳೂರು: ಬೆಂಗಳೂರಿನ ಐಕಿಯಾ ಮಾಲ್​ನಲ್ಲಿ ಮೂರ್ಛೆ ಹೋದ ವ್ಯಕ್ತಿಯೊಬ್ಬರಿಗೆ ಅಲ್ಲಿ ಹಾಜರಿದ್ದ ವೈದ್ಯರು ಜೀವ ಉಳಿಸಿರುವ ಘಟನೆ ನಡೆದಿದೆ. ಘಟನೆಯ ವಿಡಿಯೋವನ್ನು ವೈದ್ಯರ ಮಗ ಜಾಲತಾಣದಲ್ಲಿ ಶೇರ್​ ಮಾಡಿಕೊಂಡಿದ್ದು, ಇದೀಗ ವೈರಲ್ ಆಗಿದೆ.

ವ್ಯಕ್ತಿಯನ್ನು ಪುನರುಜ್ಜೀವನಗೊಳಿಸಲು ಸಹಾಯ ಮಾಡಿದ ವೈದ್ಯರ ಬಗ್ಗೆ ಜನರು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ.
“ನನ್ನ ತಂದೆ ಒಂದು ಜೀವವನ್ನು ಉಳಿಸಿದರು. ಅಲ್ಲಿ ಯಾರೋ ಒಬ್ಬ ವ್ಯಕ್ತಿ ಕುಸಿದುಬಿದ್ದರು, ಅವರ ನಾಡಿಮಿಡಿತ ನಿಂತು ಹೋಗಿತ್ತು. ಅಪ್ಪ 10 ನಿಮಿಷಕ್ಕೂ ಹೆಚ್ಚು ಕಾಲ ಅವರನ್ನು ಚಿಕಿತ್ಸೆಗೆ ಒಳಪಡಿಸಿ ಬದುಕಿಸಿದ್ದಾರೆ ಎಂದುರೋಹಿತ್ ಡಾಕ್ ಬರೆದುಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ವೈದ್ಯೋ ನಾರಾಯಣ ಹರಿ ಎಂದು ಹೇಳುವುದು ಇದಕ್ಕೇನೇ ಎಂದು ಕೆಲವರು ಕಮೆಂಟ್​ನಲ್ಲಿ ತಿಳಿಸುತ್ತಿದ್ದಾರೆ. “ಉದಾತ್ತ ವೃತ್ತಿಯಿಂದ ಉದಾತ್ತ ಕಾರ್ಯದ ಮತ್ತೊಂದು ನೋಟ” ಎಂದು ಮತ್ತೊಬ್ಬರು ಬರೆದಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular