ಡ್ರಗ್ಸ್ ಖರೀದಿಸಲು ಬೈಕ್ ಕಳ್ಳತನ; ಪ್ರೇಮಿಗಳು ಅಂದರ್

ಡ್ರಗ್ಸ್ ಖರೀದಿಗೆಂದು ಬೈಕ್ ಕಳ್ಳತನ ಮಾಡ್ತಿದ್ದ ಪ್ರೇಮಿಗಳನ್ನ ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಯುವಕನ ಜೊತೆಗೆ ಆತನ 18 ವರ್ಷದ ಗೆಳತಿಯನ್ನ ಅರೆಸ್ಟ್ ಮಾಡಿದ್ದು ಮೂರು ದ್ವಿಚಕ್ರ ವಾಹನಗಳನ್ನ ವಶಪಡಿಸಿಕೊಳ್ಳಲಾಗಿದೆ. ಪ್ರೇಮಿಯ ಆಜ್ಞೆಯಂತೆ ಗೆಳತಿ ಮೊಪೆಡ್ ಗಳನ್ನ ಕಳ್ಳತನ ಮಾಡಿದ್ದಳು.

ಪ್ರೇಮಿಗಳು ಮಾದಕ ವ್ಯಸನಿಗಳಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅವರು ಕದ್ದ ದ್ವಿಚಕ್ರ ವಾಹನಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿ ಎಂಡಿಎಂಎಯಂತಹ ಡ್ರಗ್ಸ್ ಗಳನ್ನು ಖರೀದಿಸುತ್ತಾರೆ.

ಹುಡುಗಿ ಮೊಪೆಡ್ ಅನ್ನು ಕದಿಯುವ ಸಿಸಿ ಕ್ಯಾಮೆರಾ ದೃಶ್ಯಾವಳಿಗಳು ಪ್ರಕರಣವನ್ನು ಭೇದಿಸಲು ಪೊಲೀಸರಿಗೆ ಸಹಾಯ ಮಾಡಿತು ಎಂದು ಪೊಲೀಸರು ತಿಳಿಸಿದ್ದಾರೆ. ತನ್ನ ಗುರುತನ್ನು ಮರೆಮಾಚಲು ಮೊಪೆಡ್‌ಗಳನ್ನು ಕದಿಯುವಾಗ ಯುವತಿ ಬುರ್ಖಾ ಧರಿಸುತ್ತಿದ್ದಳು. ಅಪರಾಧದ ವೇಳೆ ಅವಳ ಸಂಗಾತಿ ದೂರದಲ್ಲಿ ಕಾಯುತ್ತಾ ನಿರ್ದೇಶನಗಳನ್ನು ನೀಡುತ್ತಿದ್ದನು.

ಆರೋಪಿಯನ್ನು ಶ್ರೀರಾಂಪುರದ ಅಂಬೇಡ್ಕರ್‌ನಗರದ ವಿ ಮುರುಗನ್ (25) ಎಂದು ಗುರುತಿಸಲಾಗಿದ್ದು, ಯುವತಿ ಥಣಿಸಂದ್ರದ ಸಾರಾಯಿಪಾಳ್ಯದವಳು. ಮತ್ತೋರ್ವ ಯಶವಂತಪುರದ ಮತ್ತಿಕೆರೆ ನಿವಾಸಿ ಬಿ.ಮುರಳಿ (23) ಬಂಧಿತ ಆರೋಪಿಗಳು. ಮುರಳಿ ಪ್ರೇಮಿಗಳಿಗೆ ವಾಹನಗಳನ್ನು ಮಾರಾಟ ಮಾಡಲು ಸಹಾಯ ಮಾಡಿದ್ದ. ದ್ವಿಚಕ್ರ ವಾಹನಗಳಲ್ಲದೆ, 1 ಲಕ್ಷ ರೂಪಾಯಿ ಮೌಲ್ಯದ 2 ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read