HomeKarnatakaಬೆಂಗಳೂರು ನಗರದಲ್ಲಿ 10 ಹೊಸ ಫ್ಲೈ ಓವರ್ ನಿರ್ಮಾಣ

ಬೆಂಗಳೂರು ನಗರದಲ್ಲಿ 10 ಹೊಸ ಫ್ಲೈ ಓವರ್ ನಿರ್ಮಾಣ

ಬೆಂಗಳೂರು ನಗರದ ಸಂಚಾರ ದಟ್ಟಣೆ ಸಮಸ್ಯೆಗೆ ಹೊಸ ಹೊಸ ಪರಿಹಾರವನ್ನು ಹುಡುಕಲಾಗುತ್ತಿದೆ. ಅತಿ ಹೆಚ್ಚು ದಟ್ಟಣೆ ಉಂಟಾಗುವ ಪ್ರದೇಶಗಳನ್ನು ಗುರುತಿಸಲಾಗುತ್ತಿದೆ. ಮೆಟ್ರೋ ಮಾರ್ಗ ಹಾದು ಹೋಗುವಲ್ಲಿ ಡಬಲ್ ಡೆಕ್ಕರ್ ಫ್ಲೈ ಓವರ್ ನಿರ್ಮಾಣ ಮಾಡಿ, ಸಂಚಾರ ಸಮಸ್ಯೆ ಪರಿಹಾರ ಮಾಡಲು ಪ್ರಯತ್ನ ಮಾಡಲಾಗುತ್ದೆ.

ಈಗ ಬೆಂಗಳೂರು ಸ್ಮಾರ್ಟ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಬಿ-ಸ್ಮೈಲ್) ಹೊಸ ತಂಡವನ್ನು ರಚನೆ ಮಾಡಲು ಮುಂದಾಗಿದೆ. ಬಿ-ಸ್ಮೈಲ್‌ನ ಈ ಅಧಿಕಾರಿಗಳ ತಂಡ ನಗರದಲ್ಲಿ ಹೊಸ 10 ಫ್ಲೈ ಓವರ್ ನಿರ್ಮಾಣದ ಕುರಿತು ಯೋಜನೆ ರೂಪಿಸಲಿದ್ದಾರೆ.

ಬಿ-ಸ್ಮೈಲ್‌ನ ಕಾರ್ಯ ವೈಖರಿ ಕುರಿತು ಈಗಾಗಲೇ ತಜ್ಞರು ಪ್ರಶ್ನೆಗಳನ್ನು ಎತ್ತಿದ್ದಾರೆ. ನಗರದಲ್ಲಿ ಸಂಚಾರ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ?. ನಗರದ ಮೂಲ ಸೌಕರ್ಯ ಅಭಿವೃದ್ಧಿಗಾಗಿಯೇ ಇರುವ ಬಿ-ಸ್ಮೈಲ್‌ ಏನು ಮಾಡುತ್ತಿದೆ? ಎಂದು ಪ್ರಶ್ನೆ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸರ್ಕಾರದಿಂದಲೂ ಹಲವು ಆದೇಶಗಳು ಬಂದ ಬಳಿಕ ಬಿ-ಸ್ಮೈಲ್‌ ಇಂಜನಿಯರ್‌ಗಳನ್ನು ಫ್ಲೈ ಓವರ್ ಯೋಜನೆ ರೂಪಿಸುವ ಕೆಲಸಕ್ಕೆ ನಿಯೋಜನೆ ಮಾಡಿದೆ. ಒಟ್ಟು 10 ಫ್ಲೈ ಓವರ್‌ಗಳನ್ನು ಅವುಗಳ ದೂರದ ಆಧಾರದ ಮೇಲೆ 3 ಭಾಗವಾಗಿ ವಿಭಾಗ ಮಾಡಲಾಗಿದೆ.

ಎಲ್ಲೆಲ್ಲಿ ಫ್ಲೈ ಓವರ್ ನಿರ್ಮಾಣ?; 5 ಕಿ.ಮೀ. ತನಕ ಮೊದಲ ಭಾಗ, 5-10 ಕಿ.ಮೀ. 2ನೇ ಭಾಗ ಮತ್ತು 10 ಕಿ.ಮೀ.ಗಿಂತ ಉದ್ದದ ಫ್ಲೈ ಓವರ್‌ ಅನ್ನು 3ನೇ ಭಾಗ ಎಂದು ವಿಭಾಗ ಮಾಡಲಾಗಿದೆ. 10 ಕಿ.ಮೀ.ಗಿಂತ ಉದ್ದದ ಫ್ಲೈ ಓವರ್‌ ಅನ್ನು ಪಿಪಿಪಿ ಮಾದರಿಯಲ್ಲಿ ಕೈಗೊಳ್ಳಲು ಚಿಂತನೆ ನಡೆಸಲಾಗಿದೆ.

ಸರ್ಕಾರ ಇಂತಹ ಯೋಜನೆಗಳಿಗೆ ಶೇ 40ರಷ್ಟು ಅನುದಾನವನ್ನು ನೀಡುತ್ತದೆ. ಉಳಿದ ಅನುದಾನವನ್ನು ಟೆಂಡರ್ ಪಡೆದ ಕಂಪನಿಯೇ ಹಾಕಿಕೊಳ್ಳಬೇಕು ಈ ಮಾದರಿಯಲ್ಲಿ ಟೆಂಡರ್ ಪ್ರಕ್ರಿಯೆ ನಡೆಸಲು ತೀರ್ಮಾನಿಸಲಾಗಿದೆ.

ಜನವರಿ 28ರೊಳಗೆ ಇಂಜಿನಿಯರ್‌ಗಳು ಈಗಿರುವ ರಸ್ತೆ, ಬದಲಾವಣೆ ಆಗಬೇಕಾದ ಮಾದರಿ, ಅಂದಾಜು ಯೋಜನಾ ವೆಚ್ಚದ ಇತರ ಮಾಹಿತಿಯನ್ನು ಆಧರಿಸಿ ವರದಿ ನೀಡಿಲು ಸೂಚನೆ ನೀಡಲಾಗಿದೆ.

ಹಣಕಾಸು ಸಚಿವ, ಮುಖ್ಯಮಂತ್ರಿ ಸಿದ್ದರಾಮಯ್ಯ ಮಾರ್ಚ್‌ನಲ್ಲಿ ಮಂಡನೆ ಮಾಡುವ 2026-27ನೇ ಸಾಲಿನ ಬಜೆಟ್‌ನಲ್ಲಿ ಬೆಂಗಳೂರು ನಗರಕ್ಕೆ ಹೊಸ ಫ್ಲೈ ಓವರ್ ಘೋಷಣೆ ಮಾಡುವ ನಿರೀಕ್ಷೆ ಇದೆ. ಜೂನ್‌ವೊಳಗೆ ಜಿಬಿಎ ಚುನಾವಣೆಯನ್ನು ನಡೆಸಬೇಕಾಗಿದ್ದು. ಅದಕ್ಕೂ ಮೊದಲು ಈ ಘೋಷಣೆ ನಿರೀಕ್ಷೆ ಮಾಡಲಾಗಿದೆ.

ಜಿಬಿಎ ಅಡಿಯಲ್ಲಿ ಬೆಂಗಳೂರು ನಗರವನ್ನು 5 ನಗರ ಪಾಲಿಕೆಗಳಾಗಿ ವಿಂಗಡನೆ ಮಾಡಲಾಗಿದೆ. ಹೊಸ ಫ್ಲೈ ಓವರ್ ಎಲ್ಲಿ ನಿರ್ಮಾಣವಾಗಲಿದೆ? ಎಂದು ನಗರ ಪಾಲಿಕೆಗಳಿಗೂ ಇಂಜಿನಿಯರ್‌ಗಳು ಮಾಹಿತಿ ನೀಡಬೇಕಿದೆ.

ಸಿರ್ಸಿ ಸರ್ಕಲ್, ನಾಯಂಡಹಳ್ಳಿ, ಯಶವಂತಪುರ, ಹಲಸೂರು, ಕನಕಪುರ ರಸ್ತೆಯ ಆದ್ಯಾರ್ ಆನಂದ್ ಭವನ ಬಳಿ, ಹಡ್ಸನ್ ಸರ್ಕಲ್, ಮಿನರ್ವ ಸರ್ಕಲ್, ಮಾರೇನಹಳ್ಳಿ ಮುಖ್ಯ ರಸ್ತೆ, ಎಂಇಇ ಜಂಕ್ಷನ್, ದೊಡ್ಡಬಳ್ಳಾಪುರ ರಸ್ತೆ, ಓಲ್ಡ್ ಮದ್ರಾಸ್ ರಸ್ತೆಯಲ್ಲಿ ಹೊಸ ಫ್ಲೈ ಓವರ್ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗುತ್ತಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular