HomeLatest NewsSHOCKING: ಬೆಂಗಳೂರಿನಲ್ಲಿ ಯುವತಿಯರಿಗೆ ಬೀದಿ ಪುಂಡರ ಕಾಟ: ಬೈಕ್ ನಲ್ಲಿ ಹೋಗುತ್ತಿದ್ದವಳಿಗೆ ಫಾಲೋ ಮಾಡಿ ಟಾರ್ಚರ್...

SHOCKING: ಬೆಂಗಳೂರಿನಲ್ಲಿ ಯುವತಿಯರಿಗೆ ಬೀದಿ ಪುಂಡರ ಕಾಟ: ಬೈಕ್ ನಲ್ಲಿ ಹೋಗುತ್ತಿದ್ದವಳಿಗೆ ಫಾಲೋ ಮಾಡಿ ಟಾರ್ಚರ್ ಕೊಟ್ಟ ಕಿರಾತಕರು

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಯುವತಿಯರು, ಮಹಿಳೆಯರಿಗೆ ಪುಂಡರ ಕಾಟ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ರಸ್ತೆಗಳಲ್ಲಿ, ವಾಹನಗಳಲ್ಲಿ ಚಲಿಸುವಾಗ, ಮೆಟ್ರೋದಲ್ಲಿ ಕೂಡ ಕಿರಾತಕರ ಹಾವಳಿ ಹೆಚ್ಚಾಗುತ್ತಿದೆ. ರಾಜ್ಯ ರಾಜಧಾನಿಯಲ್ಲಿ ಮಹಿಳೆಯರು ಸುರಕ್ಷಿತವಾಗಿ ಓಡಾಡಲು ಆತಂಕಪಡುವ ಸ್ಥಿತಿಯಿದೆ. ಇಂತದ್ದೇ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.

ಬೆಂಗಳೂರು ನಗರದಲ್ಲಿ ಯುವತಿಯೊಬ್ಬಳು ತನ್ನ ಪಾಡಿಗೆ ತಾನು ಬೈಕ್ ಓಡಿಸುತ್ತಾ ಹೋಗುತ್ತಿದಾಗ ಮತ್ತೊಂದು ಬೈಕ್ ನಲ್ಲಿ ಬಂದ ಮೂವರು ಪುಂಡರು ಯುವತಿಗೆ ಕಾಟ ಕೊಟ್ಟಿದ್ದಾರೆ. ಯುವತಿಯನ್ನು ಬೈಕ್ ನಲ್ಲಿ ಫಾಲೋಮಾಡಿಕೊಂಡು ಹೋಗಿದಾರೆ. ಆಕೆಯ ಪಕ್ಕದಲ್ಲಿಯೇ ಒಂದೇ ಬೈಕ್ ನಲ್ಲಿ ಮೂವರು ಯುವಕರು ಬೈಕ್ ಚಲಾಯಿಸಿಕೊಂಡು ಕಿಲೋಮೀಟರ್ ಗಟ್ಟಲೆ ಹೋಗಿ ಸತಾಯಿಸಿದ್ದಾರೆ.

ಸುಮಾರು ಎರಡು ಕಿ.ಮೀವರೆಗೂ ಮೂವರು ಹುಡುಗರು ಯುವತಿಯ ಬೈಕ್ ನ್ನು ಫಾಲೋಮಾಡಿಕೊಂಡು ಹೋಗಿದ್ದು, ಹಿಂದೆ ಬರುತ್ತಿದ್ದ ಕಾರು ಚಾಲಕ ಈ ದೃಶ್ಯ ಸೆರೆಹಿಡಿದು ಪೊಲೀಸರ್ ಟ್ಯಾಗ್ ಮಾಡಿದ್ದಾರೆ. ಬೀದಿ ಪುಂಡರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular