ಮಳೆ ಅಬ್ಬರಕ್ಕೆ ಉರುಳಿ ಬಿದ್ದ ಬೃಹತ್ ಮರ: 3 ಕಾರುಗಳು ಜಖಂ, ಮೂರು ಮನೆಗಳಿಗೆ ಹಾನಿ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮೂರು ದಿನಗಳಿಂದ ನಿರಂತರವಾಗಿ ಸುರಿದ ವರುಣಾರ್ಭಟಕ್ಕೆ ಅಲ್ಲೋಲಕಲ್ಲೋಲ ಸೃಷ್ಟಿಯಾಗಿದೆ. ಮಳೆ ಅನಾಹುತದಲ್ಲಿ ಮೂವರು ಬಲಿಯಾಗಿದ್ದಾರೆ. ಹಲವೆಡೆ ಮರಗಳು, ಮನೆಗಳು ಧರೆಗುರುಳಿದ್ದು, ಜನಜೀವನ ದುಸ್ತರವಾಗಿದೆ.

ಮಳೆಯ ಅಬ್ಬರಕ್ಕೆ ಪದ್ಮನಾಭನಗರದಲ್ಲಿ ಬೃಹತ್ ಮರ ಮುರುದು ಬಿದ್ದಿದ್ದು, ಮೂರು ಕಾರುಗಳು ಜಖಂಗೊಂಡಿವೆ. ಅಲ್ಲದೇ ಮೂರು ಮನೆಗಳಿಗೆ ಹಾನಿಯಾಗಿದೆ.

ಪದ್ಮನಾಭನಗರ ಸರ್ಕಲ್ ಬಳಿ ಈ ಅವಘಡ ಸಂಭವಿಸಿದೆ. ಮರ ಮುರು ಕಾರುಗಳ ಮೇಲೆ ಹಾಗೂ ಮನೆಗಳ ಕಾಂಪೌಂಡ್, ಗೇಟ್, ಕಿಟಕಿಗಳ ಮೇಲೆ ಬಿದ್ದಿದೆ. ಕಾರುಗಳು ಅಪ್ಪಚ್ಚಿಯಾಗಿದ್ದು, ಅದೃಷ್ಟವಶಾತ್ ಯಾವುದೆ ಪ್ರಾಣಾಪಾಯ ಸಂಭವಿಸಿಲ್ಲ.

ಇನ್ನು ಗಿರಿನಗರದಲ್ಲಿಯೂ ಬೃಹತ್ ಮರವೊಂದು ಬುಡಸಮೇತ ಉರುಳಿ ಬಿದ್ದಿದೆ. ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read