HomeKarnatakaBIG NEWS: ಪ್ರೀತಿಸುವಂತೆ ಯುವತಿಗೆ ಪಾಗಲ್ ಪ್ರೇಮಿಯ ಕಿರುಕುಳ ಪ್ರಕರಣ; ಯುವಕ ಅರೆಸ್ಟ್

BIG NEWS: ಪ್ರೀತಿಸುವಂತೆ ಯುವತಿಗೆ ಪಾಗಲ್ ಪ್ರೇಮಿಯ ಕಿರುಕುಳ ಪ್ರಕರಣ; ಯುವಕ ಅರೆಸ್ಟ್

ಬೆಳಗಾವಿ: ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿಯ ಮನೆ ಮೇಲೆ ಕಲ್ಲು ತೂರಾಟ ನಡೆಸಿ, ಯುವತಿಗೆ ಬೆದರಿಕೆ ಹಾಕಿ ಹುಚ್ಚಾಟ ಮೆರೆದಿದ್ದ ಪಾಗಲ್ ಪ್ರೇಮಿಯನ್ನು ಬಂಧಿಸಲಾಗಿದೆ ಎಂದು ಬೆಳಗಾವಿ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟೀನ್ ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯಡಾ ಮಾರ್ಟೀನ್, ಕಿಣೈ ಗ್ರಾಮದಲ್ಲಿ 21 ವರ್ಷದ ಯುವತಿಗೆ ಪಾಗಲ್ ಪ್ರೇಮಿಯೊಬ್ಬ ಕಿರುಕುಳ ನೀಡುತ್ತಿದ್ದ. ಕಳೆದ ಮೂರು ವರ್ಷಗಳಿಂದ ತೊಂದರೆ ಕೊಡುತ್ತಿರುವುದಾಗಿ ಯುವತಿ ದೂರು ನೀಡಿದ್ದರು. ಯುವತಿಯ ದೂರಿನ ಹಿನ್ನೆಲೆಯಲ್ಲಿ ಯುವಕ ತಿಪ್ಪಣ್ಣ ಡೋಕರೆ (27)ಯನ್ನು ಬಂಧಿಸಲಾಗಿದೆ.

ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರು ಆರೋಪಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿಕೊಂಡು, ಆತನನ್ನು ಬಂಧಿಸಿದ್ದಾರೆ. ಯುವತಿ ಹಾಗೂ ಆಕೆಯ ಕುಟುಂಬಕ್ಕೆ ಸೂಕ್ತ ರಕ್ಷಣೆಯನ್ನು ನೀಡಲಾಗುವುದು ಎಂದು ತಿಳಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular