HomeKarnatakaBIG NEWS: ಡಿಸೆಂಬರ್ ಮೊದಲ ವಾರದಲ್ಲಿ ಬೆಳಗಾವಿಯಲ್ಲಿ ಅಧಿವೇಶನ; ಅಧಿಕೃತ ದಿನಾಂಕ ಸಿಎಂ ಘೋಷಣೆ ಮಾಡ್ತಾರೆ...

BIG NEWS: ಡಿಸೆಂಬರ್ ಮೊದಲ ವಾರದಲ್ಲಿ ಬೆಳಗಾವಿಯಲ್ಲಿ ಅಧಿವೇಶನ; ಅಧಿಕೃತ ದಿನಾಂಕ ಸಿಎಂ ಘೋಷಣೆ ಮಾಡ್ತಾರೆ ಎಂದ ಪರಿಷತ್ ಸಭಾಪತಿ ಹೊರಟ್ಟಿ

ಬೆಳಗಾವಿ: ಡಿಸೆಂಬರ್ ಮೊದಲ ವಾರದಲ್ಲಿ ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನ ಆರಂಭವಾಗಲಿದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಸವರಾಜ್ ಹೊರಟ್ಟಿ, ಡಿಸೆಂಬರ್ ಮೊದಲ ವಾರದಿಂದ ಅಧಿವೇಶನ ಶುರುವಾಗಲಿದೆ. ಅನೌಪಚಾರಿಕವಾಗಿ ಡಿಸೆಂಬರ್ 4ರಿಂದ ಅಧಿವೇಶನ ನಡೆಯಲಿದೆ ಎಂಬ ಮಾಹಿತಿಯಿದೆ. ಆದರೆ ಸರ್ಕಾರದಿಂದ ನಮಗೆ ಅಧಿಕೃತವಾಗಿ ದಿನಾಂಕ ತಿಳಿಸಿಲ್ಲ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಧಿಕೃತವಾಗಿ ದಿನಾಂಕವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡುತ್ತಾರೆ. ಅಧಿವೇಶನ ಅರ್ಥಪೂರ್ಣವಾಗಬೇಕು. ಅಂದರೆ ಪ್ರತಿಭಟನೆಗಳು ಕಡಿಮೆಯಗಬೇಕು. ಬೆಳಗಾವಿ ಅಧಿವೇಶನ ಎಂದರೆ ಪ್ರತಿಭಟನೆ ಅಂತಾ ಆಗಿದೆ. ಹಾಗಾಗಬಾರದು. ಅಧಿವೇಶನದಲ್ಲಿ ಪ್ರಮುಖವಾಗಿ ರೈತರ ಸಮಸ್ಯೆ ನಿವಾರಣೆಗೆ ಸಂಬಂಧಿಸಿದಂತೆ ಚರ್ಚೆಗಳಾಗಬೇಕು. ಈ ಬಗ್ಗೆ ಸಚಿವರಿಗೂ ಹೇಳುತ್ತೇನೆ ಎಂದು ತಿಳಿಸಿದರು.

For Latest News Updates, Join Our Whatsapp Community🚩
RELATED ARTICLES

Most Popular