HomeLatest Newsಮನೆ ಬಳಿ ಆಟವಾಡುತ್ತಿದ್ದ ಒಂದೂವರೆ ವರ್ಷದ ಮಗುವಿನ ಮೇಲೆ ಹರಿದ ಕಾರು: ಕಂದಮ್ಮ ಸ್ಥಳದಲ್ಲೇ ಸಾವು

ಮನೆ ಬಳಿ ಆಟವಾಡುತ್ತಿದ್ದ ಒಂದೂವರೆ ವರ್ಷದ ಮಗುವಿನ ಮೇಲೆ ಹರಿದ ಕಾರು: ಕಂದಮ್ಮ ಸ್ಥಳದಲ್ಲೇ ಸಾವು

ಬೆಳಗಾವಿ: ಪುಟ್ಟ ಮಕ್ಕಳು ಆಟವಾಡುತ್ತಿದ್ದರೆ ಎಂದು ಪೋಷಕರು ಕೊಂಚ ನಿರ್ಲಕ್ಷ ಮಾಡಿದರೆ ಅಷ್ಟರಲ್ಲಿ ಅನಾಹುತಗಳನ್ನೇ ಮಾದಿಕೊಂಡು ಬಿಟ್ಟಿರುತ್ತಾರೆ. ಇಲ್ಲೊಂದು ಘಟನೆಯಲ್ಲಿ ಇಂತದ್ದೇ ಅನಾಹುತ ಸಂಭವಿಸಿ ಮಗು ಕಾರಿನ ಚಕ್ರಕ್ಕೆ ಸಿಲುಕಿ ಬಲಿಯಾಗಿದೆ.

ಮನೆ ಮುಂದೆ ಆಟವಾಡುತ್ತಾ ಕುಳಿತಿದ್ದ ಮಗು ಮೇಲೆ ವೇಗವಾಗಿ ಬಂದ ಕಾರು ಹರಿದು ಹೋಗಿದ್ದು, ಕಂದಮ್ಮ ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ವಾಟರೆ ಗ್ರಾಮದಲ್ಲಿ ನಡೆದಿದೆ.

ಒಂದೂವರೆ ವರ್ಷದ ಮಗು ತ್ರಿಷಾ ಮೃತ ಕಂದಮ್ಮ. ರಸ್ತೆ ಪಕ್ಕದಲ್ಲಿಯೇ ಇದ್ದ ಮನೆ ಮುಂದೆ ಮಗು ಆಟವಾಡುತ್ತಿತ್ತು. ಈ ವೇಳೆ ವೇಗವಾಗಿ ಬಂದ ಕಾರು ಮಗುವುಗೆ ಡಿಕ್ಕಿ ಹೊಡೆದಿದ್ದು, ಅಪಘಾತದಲ್ಲಿ ಮಗು ಮೃತಪಿಟ್ಟಿದೆ. ಖಾನಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular