HomeKarnatakaಮೂರು ಮಕ್ಕಳ ತಾಯಿ ಜೊತೆ ಯುವಕನ ಲವ್ವಿ-ಡವ್ವಿ: ಭೇಟಿಗೆ ಹೋಗಿದ್ದಾಗ ಪತಿ ಹಾಗೂ ಸಹೋದರನಿಂದ ಮರಕ್ಕೆ...

ಮೂರು ಮಕ್ಕಳ ತಾಯಿ ಜೊತೆ ಯುವಕನ ಲವ್ವಿ-ಡವ್ವಿ: ಭೇಟಿಗೆ ಹೋಗಿದ್ದಾಗ ಪತಿ ಹಾಗೂ ಸಹೋದರನಿಂದ ಮರಕ್ಕೆ ಕಟ್ಟಿಹಾಕಿ ಮಾರಣಾಂತಿಕ ಹಲ್ಲೆ

ಬೆಳಗಾವಿ: ಮೂರು ಮಕ್ಕಳ ತಾಯಿ ಜೊತೆ ಯುವಕನೊಬ್ಬ ಅಕ್ರಮ ಸಂಬಂಧ ಹೊಂದಿದ್ದು, ಆಕೆಯನ್ನು ಭೇಟಿಯಾಗಲೆಂದು ಬಂದಿದ್ದ ವೇಳೆ ಮಹಿಳೆಯ ಪತಿ ಹಾಗೂ ಆತನ ಸಹೋದರ ಯುವಕನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದ ಹೊರವಲಯದಲ್ಲಿ ಈ ಘಟನೆ ನಡೆದಿದೆ. ಯಕ್ಸಾಂಬಾ ಪಟ್ಟಣದ ಅಕ್ಷಯ್ ಕಲ್ಲಟಗಿ ಎಂಬ ಯುವಕ ನಾಲ್ಕು ವರ್ಷಗಳಿಂದ ವಿವಾಹಿತ ಮಹಿಳೆಯ ಹಿಂದೆ ಬಿದ್ದಿದ್ದ. ಮಹಿಳೆಯ ಜೊತೆ ಸಂಪರ್ಕದಲ್ಲಿದ್ದ ಎನ್ನಲಾಗಿದೆ.

ರಾತ್ರಿ ಭೇಟಿಯಾಗಲು ಬರುವಂತೆ ಮಹಿಳೆಯೇ ಯುವಕನಿಗೆ ಕರೆ ಮಾಡಿದ್ದಳು. ಮಹಿಳೆಯ ಮಾತು ನಂಬಿ ಅಕ್ಷಯ್ ಭೇಟಿಗೆ ಹೋಗಿದ್ದಾನೆ. ಈ ವೇಳೆ ದಾರಿ ಮಧ್ಯೆಯೇ ಮಹಿಳೆಯ ಪತಿ ಹಾಗೂ ಆತನ ಸಹೋದರ ತಡೆದು, ಯುವಕನನ್ನು ಮರಕ್ಕೆ ಕಟ್ಟಿಹಾಕಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗಂಭೀರವಾಗಿ ಹಲ್ಲೆಗೊಳಗಾಗಿರುವ ಅಕ್ಷಯ್ ನನ್ನು ಸದ್ಯ ಚಿಕ್ಕೋಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕ್ಕೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

For Latest News Updates, Join Our Whatsapp Community🚩
RELATED ARTICLES

Most Popular