HomeKarnatakaಬೆಳಗಾವಿ ರಾಜಕಾರಣ, ಡಿ.ಕೆ. ಶಿವಕುಮಾರ್ ರಿಂದಲೇ ರಾಜ್ಯ`ಕಾಂಗ್ರೆಸ್ ಸರ್ಕಾರ ಪತನ’ : ರಮೇಶ್ ಜಾರಕಿಹೊಳಿ...

ಬೆಳಗಾವಿ ರಾಜಕಾರಣ, ಡಿ.ಕೆ. ಶಿವಕುಮಾರ್ ರಿಂದಲೇ ರಾಜ್ಯ`ಕಾಂಗ್ರೆಸ್ ಸರ್ಕಾರ ಪತನ’ : ರಮೇಶ್ ಜಾರಕಿಹೊಳಿ ಹೊಸ ಬಾಂಬ್

ಬೆಳಗಾವಿ : ಬೆಳಗಾವಿ ರಾಜಕಾರಣ,  ಡಿ.ಕೆ. ಶಿವಕುಮಾರ್ ರಿಂದಲೇ ರಾಜ್ಯ ಕಾಂಗ್ರೆಸ್ ಸರ್ಕಾರ ಮಹಾರಾಷ್ಟ್ರ ಸರ್ಕಾರದ ಮಾದರಿಯಲ್ಲಿ ಬಿದ್ದು ಹೋಗುತ್ತದೆ ಎಂದು ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಸ್ಪೋಟಕ ಹೇಳಿಕೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ವಿಪಕ್ಷದಲ್ಲಿದ್ದಾಗ ಕಾಲಿಗೆ ಬೀಳ್ತಾ ಓಡಾಡುತ್ತಾ ಇದ್ದರು. ಈಗ ಎದೆ ಉಬ್ಬಿಸಿಕೊಂಡು ಒಡಾಡುತ್ತಿದ್ದಾರೆ. ದುರಂಕಾರದಿಂದ ಮಹಾರಾಷ್ಟ್ರ ಮಾದರಿಯಲ್ಲ ಕರ್ನಾಟಕ ಕಾಂಗ್ರೆಸ್ ಸರ್ಕಾರವು ಪತನವಾಗಲಿದೆ ಎಂದು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಸರ್ಕಾರದಲ್ಲಿ ಲಾಟರಿ ಸಚಿವರು, ಲಾಟರಿ ಶಾಸಕರಿದ್ದಾರೆ. ಡಿಕೆಶಿ ಆ್ಯಂಡ್ ನಾಟಕ ಮಂಡಳಿ ಬಿಜೆಪಿಯ ಹೆಸರು ಹಾಳುಮಾಡುತ್ತಿದೆ. ಆಪರೇಷನ್ ಕಮಲ ಮಾಡುತ್ತಿದ್ದಾರೆ ಎಂದು ಸುಳ್ಳು ಹೇಳುತ್ತಿದ್ದಾರೆ. ನಾವು ಅಪರೇಷನ್ ಕಮಲ ಬಗ್ಗೆ ಚಕಾರ ಎತ್ತಿಲ್ಲ. 2019 ರಲ್ಲಿ ಅನಿವಾರ್ಯ ಇದ್ದಿದ್ದರಿಮದ ಆಪರೇಷನ್ ಮಾಡಿದ್ದೇವೆ. ಡಿಕೆಶಿ ಸರ್ವಾಧಿಕಾರಿ ಧೋರಣೆ, ಸೊಕ್ಕಿನಿಂದ ಆಪರೇಷನ್ ಮಾಡಿದ್ದೇವೆ. ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ವಿರುದ್ಧ ನಾವು ಮಾಡಿಲ್ಲ ಎಂದರು.

For Latest News Updates, Join Our Whatsapp Community🚩
RELATED ARTICLES

Most Popular