BREAKING NEWS: ಮಾರಕಾಸ್ತ್ರ ಹಿಡಿದು ಸಿನಿಮೀಯ ರೀತಿಯಲ್ಲಿ ಗ್ರಾಮಕ್ಕೆ ನುಗ್ಗಿ ಪುಂಡರ ಅಟ್ಟಹಾಸ: ಮನೆ, ವಾಹನಗಳಿಗೆ ಹಾನಿ

ಬೆಳಗಾವಿ: ಸಿನಿಮೀಯ ರೀತಿಯಲ್ಲಿ ಗ್ರಾಮಕ್ಕೆ ನುಗ್ಗಿ ಪುಂಡರು ಅಟ್ಟಹಾಸ ನಡೆಸಿದ್ದಾರೆ. ಬೆಳಗಾವಿ ತಾಲೂಕಿನ ನಾವಗೆ ಗ್ರಾಮದಲ್ಲಿ ನಿನ್ನೆ ರಾತ್ರಿ ಘಟನೆ ನಡೆದಿದೆ.

ಪ್ರೀತಿಯ ವಿಚಾರಕ್ಕೆ ಗಲಾಟೆ ನಡೆಸಲಾಗಿದೆ. ನಾವಗೆ ಗ್ರಾಮದ ನಾಲ್ಕು ಮನೆಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಹಾಲಿ ಮತ್ತು ಮಾಜಿ ಗ್ರಾಮ ಪಂಚಾಯತಿ ಸದಸ್ಯರ ಮನೆಗಳ ಮೇಲೆಯೂ ದಾಳಿ ಮಾಡಲಾಗಿದೆ. ರಾತ್ರಿ ಗ್ರಾಮಕ್ಕೆ ನುಗ್ಗಿದ 30ಕ್ಕೂ ಅಧಿಕ ಮುಸುಕುಧಾರಿಗಳಿದ್ದ ಗುಂಪು ಬಂದೂಕು, ತಲ್ವಾರ್ ರಾಡ್ ಗಳನ್ನು ತಂದಿದ್ದರು.

ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿ ಪುಂಡರು ಅಟ್ಟಹಾಸ ಮೆರೆದಿದ್ದು, ಮನೆ ಮುಂದೆ ನಿಲ್ಲಿಸಿದ್ದ ಮೂರು ಕಾರು, 6 ಬೈಕ್ ಜಖಂಗೊಳಿಸಿದ್ದಾರೆ. ಮನೆಯ ಕಿಟಕಿ ಗಾಜುಗಳು, ಗೋಡೆಗೆ ಅಂಟಿಸಿದ ಟೈಲ್ಸ್ ಗಳಿಗೆ ಹಾನಿ ಮಾಡಿದ್ದಾರೆ. ಮನೆ ಒಳಗೂ ನುಗ್ಗಿ ಪುಂಡಾಟ ಮೆರೆದು ವಸ್ತುಗಳನ್ನು ಹಾನಿ ಮಾಡಿದ್ದಾರೆ.

ಹೊಸ ವರ್ಷದ ರಾತ್ರಿ ಪ್ರೀತಿ ವಿಚಾರಕ್ಕೆ ಯುವಕರ ಮಧ್ಯ ಗಲಾಟೆ ನಡೆದಿತ್ತು. ಬಾದರವಾಡಿ ಗ್ರಾಮಕ್ಕೆ ಬಂದಿದ್ದ ನಾವಗೆ ಗ್ರಾಮದ ಯುವಕರು ಗಲಾಟೆ ಮಾಡಿಕೊಂಡಿದ್ದು, ಈ ವೇಳೆ ಮಧ್ಯ ಪ್ರವೇಶಿಸಿದ ಮುಖಂಡರು ಎರಡೇಟು ನೀಡಿ ಜಗಳ ಬಿಡಿಸಿದ್ದರು. ನಿಮ್ಮನ್ನು ನೋಡಿಕೊಳ್ಳುವುದಾಗಿ ಬಾದರವಾಡಿಯ ಯುವಕರಿಗೆ ನಾವಗೆ ಗ್ರಾಮದ ಯುವಕರು ವಾರ್ನಿಂಗ್ ಮಾಡಿದ್ದರು ಎನ್ನಲಾಗಿದೆ.

ನಿನ್ನೆ ರಾತ್ರಿ ಬಾದರವಾಡಿ ಗ್ರಾಮದವರು ಬಂದು ಗಲಾಟೆ ಮಾಡಿದ್ದಾರೆ ಎಂದು ನಾವಗೆ ಗ್ರಾಮಸ್ಥರು ಆರೋಪಿಸಿದ್ದಾರೆ. ಪುಂಡರ ಅಟ್ಟಹಾಸ ಕಂಡು ನಾವಗೆ ಗ್ರಾಮದ ಜನರು ಬೆಚ್ಚಿಬಿದ್ದಿದ್ದಾರೆ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಗ್ರಾಮಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಪೊಲೀಸ್ ಬಂದೋ ಬಸ್ತ್ ಕೈಗೊಂಡಿದ್ದು, ಹಾನಿಗೀಡಾದ ವಾಹನಗಳು, ಮನೆಗಳ ಪರಿಶೀಲನೆ ನಡೆಸಿದ ಪೊಲೀಸ್ ಅಧಿಕಾರಿಗಳು ಮಾಹಿತಿ ಪಡೆದಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read