HomeKarnatakaಮಾಜಿ ಪ್ರಿಯತಮೆಯಿಂದ ಯುವಕನಿಗೆ ಗುಂಡೇಟು: ಮೂವರು ಪೊಲೀಸ್ ವಶಕ್ಕೆ

ಮಾಜಿ ಪ್ರಿಯತಮೆಯಿಂದ ಯುವಕನಿಗೆ ಗುಂಡೇಟು: ಮೂವರು ಪೊಲೀಸ್ ವಶಕ್ಕೆ

ಬೆಳಗಾವಿ: ಮಾಜಿ ಪ್ರಿಯತಮೆಯಿಂದ ಯುವಕನ ಮೇಲೆ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬೆಳಗಾವಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಬೆಳಗಾವಿ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್, ಪ್ರಕರಣ ಸಂಬಂಧ ಮಾಳಮಾರುತಿ ಠಾಣೆಯಲ್ಲಿ ಎರಡು ಪ್ರಕರನ ದಾಖಲಾಗಿದೆ. ಯುವಕ ಪ್ರಣೀತ್ ಹಾಗೂ ಆತನ ಸ್ನೇಹಿತೆ ಇಬ್ಬರಿಂದ ಎರಡು ಪ್ರತ್ಯೇಕ ಕೇಸ್ ದಾಖಲಾಗಿದೆ ಎಂದು ತಿಳಿಸಿದ್ದಾರೆ.

ಪ್ರಣೀತ್ ತನ್ನ ಹಳೆಯ ಪ್ರಿಯತಮೆಯ ಮನೆಗೆ ಊಟಕ್ಕೆ ಹೋಗಿದ್ದ. ಈ ವೇಳೆ ಪ್ರೀತಿಯಲ್ಲಿ ತೊಂದರೆಯಾಗಿದೆ ಎಂದು ಹೇಳಿಕೊಂಡಿದ್ದಾನೆ. ಆಗ ಪ್ರಣೀತ್ ಪ್ರಿಯತಮೆಗೆ ಕರೆ ಮಾಡಿ ಆಕೆಯನ್ನು ಮಾಜಿ ಪ್ರಿಯತಮೆ ಕರೆಸಿಕೊಂಡಿದ್ದಾಳೆ. ಆಕೆ ತನ್ನ ಸಹೋದರನ ಜೊತೆ ಮನೆಗೆ ಬರುತ್ತಿದ್ದಂತೆ ಮಾಜಿ ಪ್ರಿಯತಮೆ ಯುವಕನ ಮೇಲೆ ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದಾಳೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರಣಿತ್ ಪ್ರಿಯತಮೆ ಸೇರಿ ಮೂವರನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

 

For Latest News Updates, Join Our Whatsapp Community🚩
RELATED ARTICLES

Most Popular