HomeKarnatakaಮಗಳ ಬಗ್ಗೆ ಅಪಪ್ರಚಾರ: ತಮ್ಮನನ್ನೇ ಕೊಂದ ಅಣ್ಣ

ಮಗಳ ಬಗ್ಗೆ ಅಪಪ್ರಚಾರ: ತಮ್ಮನನ್ನೇ ಕೊಂದ ಅಣ್ಣ

ಬೆಳಗಾವಿ: ತನ್ನ ಮಗಳ ಬಗ್ಗೆ ಅಪಪ್ರಚಾರ ಮಾಡಿ ಊರೆಲ್ಲ ಡಂಗುರ ಸಾರುತ್ತಿದ್ದ ತಮ್ಮನ ಕೆಲಸಕ್ಕೆ ಬೇಸತ್ತು, ಅಣ್ಣನೊಬ್ಬ ತಮ್ಮನನ್ನೇ ಕೊಲೆಗೈದಿರುವ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಕಲ್ಲೋಳಿಯಲ್ಲಿ ನಡೆದಿದೆ.

ವಿಠಲ ಚೌವ್ಹಾಣ್ ಕೊಲೆಯಾದ ವ್ಯಕ್ತಿ. ಭೀಮಪ್ಪ ಚೌವ್ಹಾಣ್ ತಮ್ಮನನ್ನೇ ಕೊಂದ ಅಣ್ಣ. ಆರೋಪಿ ಭೀಮಪ್ಪ ಚೌವ್ಹಾಣ್ ಮಗಳು ಪಕ್ಕದ ಗ್ರಾಮದ ಯುವಕನನ್ನು ಪ್ರೀತಿಸಿದ್ದಳು. ಆತ ಸರ್ಕಾರಿ ನೌಕರಿಯಲ್ಲಿದ್ದಾನೆ ಎಂದು ನಂಬಿ ಓಡಿ ಹೋಗಿ ಮದುವೆಯಾಗಿದ್ದಳು. ಆದರೆ ತನ್ನ ಪತಿ ಸರ್ಕಾರಿ ನೌಕರಿಯಲ್ಲಿ ಇಲ್ಲ ಎಂಬುದು ಗೊತ್ತಾಗುತ್ತಿದ್ದಂತೆ ಮೂರು ತಿಂಗಳ ಬಳಿಕ ಕೋಪಗೊಂಡು ತವರು ಮನೆಗೆ ವಾಪಾಸ್ ಆಗಿದ್ದಾಳೆ.

ತವರು ಮನೆಗೆ ಬಂದ ಮಗಳ ಬಗ್ಗೆ ಚಿಕ್ಕಪ್ಪ ವಿಠಲ ಚೌವ್ಹಾಣ್, ಊರ ತುಂಬ ಸುಳ್ಳು ಸುದ್ದಿ ಹಬ್ಬಿಸಲು ಆರಂಭಿಸಿದ್ದ. ತನ್ನ ಅಣ್ಣನ ಮಗಳು ಗರ್ಭಿಣಿ ಎಂದು ಅಪಪ್ರಚಾರ ಮಾಡಲಾರಂಭಿಸಿದ್ದ. ಇದರಿಂದ ಭೀಮಪ್ಪ ಚೌವ್ಹಾಣ್ ತಮ್ಮನ ಬಗ್ಗೆ ಕೋಪಗೊಂಡು ಜಗಳವಡಿದ್ದ. ಅಣ್ಣ-ತಮ್ಮನ ನಡುವೆ ಗಲಾಟೆ ನಡೆದಿತ್ತು. ಕೆಲ ದಿನಗಳ ಬಳಿಕ ಭೀಮಪ್ಪ ಚೌವ್ಹಾಣ್ ಗ್ಯಾಂಗ್ ಕಟ್ಟಿಕೊಂಡು ಬಂದು ತಮ್ಮ ವಿಠಲ ಚೌವ್ಹಾಣ್ ನನ್ನು ರಾಡ್ ಹಾಗೂ ಕಟ್ಟಿಗೆಯಿಂದ ಥಳಿಸಿದ್ದ. ಗಂಭೀರವಾಗಿ ಗಾಯಗೊಂಡಿದ್ದ ವಿಠಲ ಚೌವ್ಹಾಣ್ ನನ್ನು ಬೆಳಗಾವಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದೀಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭೀಮಪ್ಪ ಚೌವ್ಹಾಣ್ ಹಾಗೂ ಲಕ್ಷ್ಮಣ ಪಡತರೆಯನ್ನು ಘಟಪ್ರಭಾ ಪೊಲೀಸರು ಬಂಧಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular