HomeLatest Newsಬೆರಳುಗಳ ಮೇಲೆ ಟ್ಯಾಟೂ ಹಾಕಿಸಿಕೊಳ್ಳುವ ಮುನ್ನ ತಿಳಿದುಕೊಳ್ಳಿ ಅದರಿಂದಾಗುವ ಅಪಾಯ..…!

ಬೆರಳುಗಳ ಮೇಲೆ ಟ್ಯಾಟೂ ಹಾಕಿಸಿಕೊಳ್ಳುವ ಮುನ್ನ ತಿಳಿದುಕೊಳ್ಳಿ ಅದರಿಂದಾಗುವ ಅಪಾಯ..…!

ಈ ಫ್ಯಾಷನ್ ಯುಗದಲ್ಲಿ ಟ್ಯಾಟೂ ಹಾಕಿಸಿಕೊಳ್ಳುವ ಪ್ರವೃತ್ತಿ ಹೆಚ್ಚಾಗಿದೆ. ಈ ಕಲೆ ಶತಮಾನಗಳಷ್ಟು ಹಳೆಯದು. ಆದರೆ ಆ ಸಮಯದಲ್ಲಿ ಇಷ್ಟೊಂದು ಟ್ರೆಂಡ್‌ ಇರಲಿಲ್ಲ. ಇತ್ತೀಚಿನ ದಿನಗಳಲ್ಲಿ ಟ್ಯಾಟೂ ಒಂದು ಟ್ರೆಂಡ್ ಆಗಿಬಿಟ್ಟಿದೆ. ಜನರು ಮೈತುಂಬಾ ಹಚ್ಚೆ ಹಾಕಿಸಿಕೊಳ್ಳುವುದನ್ನೇ ಫ್ಯಾಷನ್‌ ಆಗಿ ಪರಿವರ್ತಿಸಿದ್ದಾರೆ. ಬೆನ್ನು, ಕೈ, ಕಾಲು, ಸೊಂಟ ಹೀಗೆ ಎಲ್ಲಾ ಕಡೆ ಟ್ಯಾಟೂ ಹಾಕಿಸಿಕೊಳ್ಳುವುದರ ಜೊತೆಗೆ ಕಳೆದ ಕೆಲವು ಸಮಯದಿಂದ  ಬೆರಳುಗಳ ಮೇಲೆ ಟ್ಯಾಟೂ ಹಾಕಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಬೆರಳಿನ ಮೇಲೆ ಹಚ್ಚೆ ಹಾಕಿಸಿಕೊಳ್ಳುವ ಮುನ್ನ ಕೆಲವೊಂದು ಕಾಳಜಿ ತೆಗೆದುಕೊಳ್ಳಬೇಕು, ಇಲ್ಲದಿದ್ದಲ್ಲಿ ಸಮಸ್ಯೆಯಾಗಬಹುದು.

ಸ್ವಲ್ಪ ರಿಸರ್ಚ್‌ ಮಾಡಿ : ಬೆರಳಿಗೆ ಹಚ್ಚೆ ಹಾಕಿಸಿಕೊಳ್ಳುವ ಮೊದಲು ಸ್ವಲ್ಪ ಸಂಶೋಧನೆ ಅಗತ್ಯ. ಏಕೆಂದರೆ ಇದು ದೇಹದ ಸೂಕ್ಷ್ಮ ಪ್ರದೇಶವಾಗಿದೆ. ಚರ್ಮಕ್ಕೆ ಹಾನಿಯಾಗುತ್ತದೆಯೇ ಎಂದು ಮೊದಲು ಚರ್ಮ ತಜ್ಞರನ್ನು ಕೇಳಿ. ಹಚ್ಚೆ ಹಾಕಿಸಿಕೊಂಡ ನಂತರ ಅದು ಹೇಗೆ ಕಾಣುತ್ತದೆ ಎಂಬುದನ್ನು ಸಹ ಪರಿಶೀಲಿಸಿ.

ನೋವಿನ ಸಾಧ್ಯತೆ : ಬೆರಳುಗಳ ಬಳಿ ಇರುವ ಚರ್ಮವು ಸೂಕ್ಷ್ಮ ಮತ್ತು ತೆಳ್ಳಗಿರುತ್ತದೆ. ದೇಹದ ಇತರ ಭಾಗಗಳ ಮೇಲೆ ಹಚ್ಚೆ ಹಾಕುವುದಕ್ಕಿಂತ ಬೆರಳಿನ ಮೇಲೆ ಹಾಕಿಸಿಕೊಳ್ಳುವುದು ಹೆಚ್ಚು ನೋವಿನಿಂದ ಕೂಡಿರುತ್ತದೆ. ಹಾಗಾಗಿ ಚರ್ಮ ಅಥವಾ ಮೂಳೆಗೆ ಹಾನಿಯಾಗದಂತೆ ನೋಡಿಕೊಳ್ಳಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸರಳ ವಿನ್ಯಾಸವಿರಲಿ: ಬೆರಳಿನ ಮೇಲ್ಮೈ ವಿಸ್ತೀರ್ಣವು ತುಂಬಾ ಕಡಿಮೆಯಾಗಿರುತ್ತದೆ. ಆದ್ದರಿಂದ ಹೆಚ್ಚಿನ ಪ್ರಯೋಗಕ್ಕೆ ಯಾವುದೇ ಅವಕಾಶವಿಲ್ಲ. ನೀವು ಸರಳವಾದ ವಿನ್ಯಾಸವನ್ನು ಆಯ್ಕೆ ಮಾಡಿ ಮತ್ತು ಅದನ್ನು ನುರಿತ ಕಲಾವಿದರಿಂದ ಹಾಕಿಸಿಕೊಳ್ಳಿ.

ಹಚ್ಚೆ ಮರೆಯಾಗುವ ಭಯ: ದೇಹದ ಉಳಿದ ಭಾಗಗಳಿಗಿಂತ ನಮ್ಮ ಬೆರಳುಗಳಲ್ಲಿ ಹೆಚ್ಚು ಘರ್ಷಣೆ ಇರುತ್ತದೆ. ಏಕೆಂದರೆ ನಾವು ದೈನಂದಿನ ಜೀವನದ ಎಲ್ಲಾ ಕೆಲಸಗಳನ್ನು ಕೈಗಳ ಮೂಲಕ ಮಾಡುತ್ತೇವೆ. ದಿನಕ್ಕೆ ಹಲವಾರು ಬಾರಿ ಸಾಬೂನಿನಿಂದ ನಮ್ಮ ಕೈಗಳನ್ನು ತೊಳೆಯುತ್ತೇವೆ. ಆದ್ದರಿಂದ ನಮ್ಮ ಬೆರಳುಗಳಲ್ಲಿ ಹಾಕಿಸಿಕೊಂಡಿರುವ ಹಚ್ಚೆಗಳು ಮರೆಯಾಗುವ ಹೆಚ್ಚಿನ ಅಪಾಯವಿರುತ್ತದೆ. ಕೆಲವರು ಕಾಲಕಾಲಕ್ಕೆ ಟಚ್ ಅಪ್ ಮಾಡುತ್ತಲೇ ಇರುತ್ತಾರೆ.

For Latest News Updates, Join Our Whatsapp Community🚩
RELATED ARTICLES

Most Popular