HomeKarnatakaಬರೋಬ್ಬರಿ 98.52 ಕೋಟಿ ರೂ. ಮೌಲ್ಯದ ಬಿಯರ್ ವಶಕ್ಕೆ

ಬರೋಬ್ಬರಿ 98.52 ಕೋಟಿ ರೂ. ಮೌಲ್ಯದ ಬಿಯರ್ ವಶಕ್ಕೆ

ಚಾಮರಾಜನಗರ: 98.52 ಕೋಟಿ ರೂ. ಮೌಲ್ಯದ ಬಿಯರ್ ಹಾಗೂ ಕಚ್ಚಾ ವಸ್ತು ವಶಕ್ಕೆ ಪಡೆಯಲಾಗಿದೆ. ಚಾಮರಾಜನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಮೈಸೂರು ಜಿಲ್ಲೆ ನಂಜನಗೂಡಿನ ಯುಬಿ ತಯಾರಿಕಾ ಘಟಕದಲ್ಲಿ ಬಿಯರ್ ವಶಕ್ಕೆ ಪಡೆಯಲಾಗಿದೆ.

ಜಿಲ್ಲಾ ಚುನಾವಣಾಧಿಕಾರಿ ಕಚೇರಿಗೆ ಬಂದ ಮಾಹಿತಿ ಆಧರಿಸಿ ಚಾಮರಾಜನಗರ ಅಬಕಾರಿ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. 6.3 ಲಕ್ಷ ಬಿಯರ್ ಪೆಟ್ಟಿಗೆ, ಟ್ಯಾಂಕ್ ನಲ್ಲಿದ್ದ 60 ಲಕ್ಷ ಲೀಟರ್ ಬಿಯರ್, ಕಚ್ಚಾ ವಸ್ತು ಸೇರಿ 98.52 ಕೋಟಿ ರೂ. ಮೌಲ್ಯದ ಬಿಯರ್ ವಶಕ್ಕೆ ಪಡೆಯಲಾಗಿದೆ. 7,000 ಬಿಯರ್ ರಟ್ಟಿನ ಪೆಟ್ಟಿಗೆ ವಶಕ್ಕೆ ಪಡೆಯಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದಾಳಿಯ ವೇಳೆ ಪರಿಶೀಲಿಸಿದಾಗ ಹೆಚ್ಚಿನ ಪ್ರಮಾಣದಲ್ಲಿ ಬಿಯರ್ ದಾಸ್ತಾನು ಮಾಡಿರುವುದು ಕಂಡು ಬಂದಿದೆ. ಘಟಕದಲ್ಲಿ ನಿಗದಿಗಿಂತ ಹೆಚ್ಚುವರಿ ಬಿಯರ್ ತಯಾರಿಸಿ ಕೇರಳಕ್ಕೆ ಸಾಗಾಟ ಮಾಡಲು ಸಂಗ್ರಹಿಸಲಾಗಿತ್ತು ಎನ್ನಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular