HomeLatest NewsSHOCKING : ಕ್ರಿಕೆಟ್ ಪಂದ್ಯಾವಳಿ ವೇಳೆ ಜೇನುನೊಣಗಳ ದಾಳಿ : ಅಂಪೈರ್ ದಾರುಣ ಸಾವು.....

SHOCKING : ಕ್ರಿಕೆಟ್ ಪಂದ್ಯಾವಳಿ ವೇಳೆ ಜೇನುನೊಣಗಳ ದಾಳಿ : ಅಂಪೈರ್ ದಾರುಣ ಸಾವು.. !


ಉತ್ತರ ಪ್ರದೇಶ : ಕ್ರಿಕೆಟ್ ಪಂದ್ಯ ನಡೆಯುತ್ತಿದ್ದ ವೇಳೆ ಅಕಸ್ಮಾತ್ತಾಗಿ ಜೇನುನೊಣಗಳ ಹಿಂಡು ದಾಳಿ ನಡೆಸಿದ ಪರಿಣಾಮ ಅಂಪೈರ್ ಒಬ್ಬರು ಮೃತಪಟ್ಟ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಈ ದಾಳಿಯಲ್ಲಿ ಮೈದಾನದಲ್ಲಿದ್ದ ಅನೇಕರು ಗಾಯಗೊಂಡಿದ್ದು, ಹಲವರು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕಾನ್ಪುರ ಕ್ರಿಕೆಟ್ ಅಸೋಸಿಯೇಷನ್ ವತಿಯಿಂದ ಅಂಡರ್-13 ಕ್ರಿಕೆಟ್ ಪಂದ್ಯಾವಳಿಗಳು ನಡೆಯುತ್ತಿದ್ದವು. ಈ ಪಂದ್ಯವೊಂದರಲ್ಲಿ 65 ವರ್ಷದ ಮಾಣಿಕ್ ಗುಪ್ತಾ ಮತ್ತು ಜಗದೀಶ್ ಶರ್ಮಾ ಅವರು ಅಂಪೈರಿಂಗ್ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದರು.

ಪಂದ್ಯ ನಡೆಯುತ್ತಿದ್ದ ಮಧ್ಯೆ ದಿಢೀರನೆ ಜೇನುನೊಣಗಳ ಹಿಂಡು ದಾಳಿ ಮಾಡಿದೆ. ಇದರಿಂದ ತಪ್ಪಿಸಿಕೊಳ್ಳಲು ಮೈದಾನದಲ್ಲಿದ್ದ ಆಟಗಾರರು ಮತ್ತು ಅಧಿಕಾರಿಗಳು ದಿಕ್ಕಾಪಾಲಾಗಿ ಓಡಿದ್ದಾರೆ. ಈ ವೇಳೆ ಮಾಣಿಕ್ ಗುಪ್ತಾ ಅವರಿಗೆ ಜೇನುನೊಣಗಳು ತೀವ್ರವಾಗಿ ಕಚ್ಚಿದ್ದು, ಅವರು ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.ಮಾಣಿಕ್ ಗುಪ್ತಾ ಅವರು ಸುಮಾರು 30 ವರ್ಷಗಳಿಂದ ಕಾನ್ಪುರ ಕ್ರಿಕೆಟ್ ಅಸೋಸಿಯೇಷನ್ ಜೊತೆ ಗುರುತಿಸಿಕೊಂಡಿದ್ದರು ಮತ್ತು ಅನೇಕ ಪ್ರಾದೇಶಿಕ ಪಂದ್ಯಗಳಲ್ಲಿ ಅಂಪೈರ್ ಆಗಿ ಸೇವೆ ಸಲ್ಲಿಸಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹಿಂದೆ ನಡೆದಿದ್ದ ಇಂತಹುದೇ ಘಟನೆ
2019 ರಲ್ಲಿ ತಿರುವನಂತಪುರದಲ್ಲಿ ಭಾರತ ‘ಎ’ ಮತ್ತು ಇಂಗ್ಲೆಂಡ್ ಲಯನ್ಸ್ ನಡುವಿನ ಪಂದ್ಯದ ವೇಳೆಯೂ ಜೇನುನೊಣಗಳು ದಾಳಿ ಮಾಡಿದ್ದವು. ಆಗ ಪಂದ್ಯವನ್ನು ಸ್ಥಗಿತಗೊಳಿಸಲಾಗಿತ್ತು ಮತ್ತು ಅನೇಕರು ಗಾಯಗೊಂಡಿದ್ದರು. ಆದರೆ, ಆ ಸಮಯದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿರಲಿಲ್ಲ.ಕ್ರೀಡಾಂಗಣದ ಹತ್ತಿರವಿದ್ದ ದೊಡ್ಡ ಜೇನುಗೂಡಿಗೆ ಯಾರೋ ಕಲ್ಲು ಎಸೆದಿದ್ದರಿಂದ ಅಥವಾ ಗಾಳಿಯ ಬದಲಾವಣೆಯಿಂದ ಜೇನುನೊಣಗಳು ಮೈದಾನಕ್ಕೆ ನುಗ್ಗಿವೆ ಎಂದು ಶಂಕಿಸಲಾಗಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular