ವೈದ್ಯರ ಚೀಟಿ ಇಲ್ಲದೆ ನಿದ್ದೆ ಮಾತ್ರೆ ಕೊಡಲು ನಿರಾಕರಿಸಿದ್ದಕ್ಕೆ ಯುವಕನಿಂದ ದುಷ್ಕೃತ್ಯ: ಮೆಡಿಕಲ್ ಶಾಪ್ ಗೆ ಹಾನಿ, ಮಾಲೀಕನ ಮೇಲೆ ಹಲ್ಲೆ

ದಾವಣಗೆರೆ: ವೈದ್ಯರ ಚೀಟಿ ಇಲ್ಲದೆ ನಿದ್ದೆ ಮಾತ್ರೆ ಕೊಡಲು ನಿರಾಕರಿಸಿದ್ದಕ್ಕೆ ಯುವಕನೊಬ್ಬ ಮೆಡಿಕಲ್ ಶಾಪ್ ಗ್ಲಾಸ್ ಒಡೆದು ಹಾನಿಗೊಳಿಸಿ, ಮಾಲೀಕನ ಮೇಲೆ ಹಲ್ಲೆ ಮಾಡಿದ್ದಾನೆ.

ದಾವಣಗೆರೆ ಜಿಲ್ಲೆ ಹರಿಹರ ನಗರದ ಇಕ್ರಾ ಮೆಡಿಕಲ್ ಶಾಪ್ ನಲ್ಲಿ ಘಟನೆ ನಡೆದಿದೆ. ಮೆಡಿಕಲ್ ಶಾಪ್ ಮಾಲೀಕ ಅಮಾನುದ್ದೀನ್ ಮೇಲೆ ಯುವಕ ಹಲ್ಲೆ ಮಾಡಿದ್ದಾನೆ. ಹಲ್ಲೆ ಮಾಡಿ ಓಡಿ ಹೋಗುತ್ತಿದ್ದ ಯುವಕನನ್ನು ಹಿಡಿದ ಸ್ಥಳೀಯರು ಧರ್ಮದೇಟು ನೀಡಿದ್ದಾರೆ. ಯುವಕನಿಗೆ ಥಳಿಸಿ ಹರಿಹರ ನಗರ ಪೊಲೀಸರಿಗೆ ಒಪ್ಪಿಸಿದ್ದಾರೆ. ದಾವಣಗೆರೆ ನಗರದ ಆರೋಪಿ ಯುವಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read