HomeKarnatakaಮರಾಠಿ ಯುವಕರಿಂದ ಮತ್ತೆ ಗೂಂಡಾಗಿರಿ: ಕರವೇ ಉಪಾಧ್ಯಕ್ಷನ ಮೇಲೆ ತೀವ್ರ ಹಲ್ಲೆ

ಮರಾಠಿ ಯುವಕರಿಂದ ಮತ್ತೆ ಗೂಂಡಾಗಿರಿ: ಕರವೇ ಉಪಾಧ್ಯಕ್ಷನ ಮೇಲೆ ತೀವ್ರ ಹಲ್ಲೆ

ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಮರಾಠಿ ಯುವಕರು ಮತ್ತೆ ಗೂಂಡಾಗಿರಿ ನಡೆಸಿದ್ದಾರೆ. ಕನ್ನಡ ಮಾತನಾಡಿದ್ದಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಉಪಾಧ್ಯಕ್ಷನನ್ನು ರಕ್ತ ಬರುವಂತೆ ಥಳಿಸಿದ್ದಾರೆ.

ಖಾನಾಪುರ ತಾಲೂಕು ಜಾಂಬೋಟಿ ಕ್ರಾಸ್ ಬಳಿ ನಾರಾಯಣ ಗೌಡರ ಬಣದ ಕರವೇ ಉಪಾಧ್ಯಕ್ಷ ಜಯವಂತ್ ನಿಡಗಲ್ಕರ ಅವರ ಮೇಲೆ ಹಲ್ಲೆ ನಡೆಸಲಾಗಿದೆ. ಹೋಟೆಲ್ ವೊಂದರಲ್ಲಿ ನಾರಾಯಣಗೌಡ ಬಣದ ಖಾನಾಪುರ ತಾಲೂಕು ಉಪಾಧ್ಯಕ್ಷ ಜಯವಂತ್ ಅವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಮರಾಠಿ ಯುವಕರು ಪರಾರಿಯಾಗಿದ್ದಾರೆ.

ಗಾಯಾಳು ಜಯವಂತ್ ಅವರನ್ನು ಸ್ಥಳೀಯ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಖಾನಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular