HomeKarnatakaALERT : ಸರ್ಕಾರದ ಉಚಿತ ಯೋಜನೆಗೆ ಅರ್ಜಿ ಸಲ್ಲಿಸುವಾಗ ಎಚ್ಚರ : ಈ ನಕಲಿ ಆ್ಯಪ್...

ALERT : ಸರ್ಕಾರದ ಉಚಿತ ಯೋಜನೆಗೆ ಅರ್ಜಿ ಸಲ್ಲಿಸುವಾಗ ಎಚ್ಚರ : ಈ ನಕಲಿ ಆ್ಯಪ್ ಗಳ ಬಗ್ಗೆ ನಿಮಗೆ ಗೊತ್ತಿರಲಿ

ಬೆಂಗಳೂರು: ರಾಜ್ಯ ಸರ್ಕಾರ ಘೋಷಿಸಿರುವ ಗ್ಯಾರಂಟಿ ಯೋಜನೆಗಳಿಗೆ ಅರ್ಜಿ ಸಲ್ಲಿಸುವಾಗ ಗ್ರಾಹಕರು ಎಚ್ಚರಿಕೆ ವಹಿಸುವುದು ಅಗತ್ಯ. ಮೊಬೈಲ್ ನಲ್ಲಿ ಅಪ್ಲಿಕೇಷನ್ ಡೌನ್ ಲೋಡ್ ಗೆ ಮುಂದಾದಾಗ ನಕಲಿ ಆಪ್ ಗಳು ಲಭ್ಯವಾಗುತ್ತಿದೆ.

ಶಕ್ತಿ ಯೋಜನೆ, ಗೃಹಜ್ಯೋತಿ ಯೋಜನೆಗಳಿಗಾಗಿ ಅರ್ಜಿ ಸಲ್ಲಿಕೆ ಈಗಾಗಲೇ ಆರಂಭವಾಗಿದ್ದು, ಕೆಲ ದಿನಗಳಲ್ಲೇ ಮನೆ ಯಜಮಾನಿಗೆ 2000 ರೂ ನೀಡುವ , ಗೃಹಲಕ್ಷ್ಮೀ ಯೋಜನೆ ಕೂಡ ಆರಂಭವಾಗಲಿದೆ. ಆದರೆ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಈ ಯೋಜನೆಗಳ ನಕಲಿ ಆಪ್ ಗಳು ತಲೆ ಎತ್ತಿವೆ. ಇದು ಸರ್ಕಾರವೇ ಬಿಡುಗಡೆ ಮಾಡಿರುವ ಆಪ್ ಎಂದು ಡೌನ್ ಲೋಡ್ ಮಾಡಿದರೆ ಸಂಕಷ್ಟಕ್ಕೆ ಸಿಲುಕುವುದು ಗ್ಯಾರಂಟಿ.

ನಕಲಿ ಆಪ್ ಗಳಿಂದ ನಮ್ಮ ಮೊಬೈಲ್ ಪರ್ಸನಲ್ ಡೀಟೇಲ್ಸ್ ಹಾಗೂ ಡೇಟಾ ಕಳುವಾಗುವ ಸಾಧ್ಯತೆ ಇದೆ. ಅಲ್ಲದೇ ನಕಲಿ ಆಪ್ ನಲ್ಲಿ ಅರ್ಜಿ ಸಲ್ಲಿಸಿದರೆ ನಮ್ಮ ಅಕೌಂಟ್ ನಲ್ಲಿರುವ ಹಣದ ಜೊತೆ ಇನ್ನಿತರ ಮಾಹಿತಿಗಳು ಸೋರಿಕೆಯಾಗುವ ಸಾಧ್ಯತೆ ಇದೆ. ಸಧ್ಯ ಗೃಹಲಕ್ಷ್ಮೀ ಯೋಜನೆ ಹೆಸರಲ್ಲಿ ಪ್ಲೇ ಸ್ಟೋರ್ ನಲ್ಲಿ 5 ನಕಲಿ ಆಪ್ ಗಳು ತಲೆ ಎತ್ತಿವೆ. ಪ್ಲೇ ಸ್ಟೋರ್ ಆಪ್ ಮೂಲಕ ಅರ್ಜಿ ಸಲ್ಲಿಸುವ ಬದಲು ಸರ್ಕಾರದ ಸೇವಾ ಸಿಂಧು ಆಪ್ ಮೂಲಕವೇ ಅರ್ಜಿ ಸಲ್ಲಿಸುವುದು ಉತ್ತಮ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗೃಹಲಕ್ಷ್ಮಿ ಹೆಸರಿನಲ್ಲಿ ಗೃಹ ಲಕ್ಷ್ಮಿ ಯೋಜನಾ ಆ್ಯಪ್, ಕರ್ನಾಟಕ ಲಕ್ಷ್ಮಿ ಯೋಜನಾ ಆ್ಯಪ್,
ಗೃಹಲಕ್ಷ್ಮಿ ಸ್ಕೀಮ್ ಆ್ಯಪ್, ಗೃಹಲಕ್ಷ್ಮಿ ಯೋಜನೆ ಅಪ್ಲಿಕೇಶನ್ ಆ್ಯಪ್ ಗಳು ತಲೆ ಎತ್ತಿದೆ.ನೀವೇನಾದರೂ ಈ ನಕಲಿ ಆ್ಯಪ್ ಬಳಸಿದ್ರೆ ನಿಮ್ಮ ಬ್ಯಾಂಕ್ ಖಾತೆಗಳಿಗೂ ಕನ್ನ ಹಾಕುವ ಸಾಧ್ಯತೆಯಿದೆ. ಆದ್ದರಿಂದ ನೀವು ಎಚ್ಚರದಿಂದಿರುವುದು ಒಳಿತು.ಅದೇ ರೀತಿ ಗೃಹ ಜ್ಯೋತಿ ಹೆಸರಿನಲ್ಲಿ ಪೋರ್ಟಲ್ ಗೃಹ ಜ್ಯೋತಿ, ಸ್ಕೀಮ್ ಗೃಹ ಜ್ಯೋತಿ, ಗೃಹ ಜ್ಯೋತಿ ಎಲೆಕ್ಟ್ರಿಸಿಟಿ ಆ್ಯಪ್, , ಗೃಹ ಜ್ಯೋತಿ ಸ್ಕೀಮ್, ಗೃಹ ಜ್ಯೋತಿ ಸ್ಕೀಮ್, ಗೃಹಜ್ಯೋತಿ ಸ್ಕೀಮ್ ನಕಲಿ ಆ್ಯಪ್ ಗಳು ತಲೆ ಎತ್ತಿದೆ.ಅಷ್ಟೇ ಅಲ್ಲದೇ ಇನ್ನೂ ಜಾರಿಯಾಗದ ಯುವನಿಧಿ ಸ್ಕೀಮ್, ಯುವ ನಿಧಿ ಆ್ಯಪ್, ಯುವ ನಿಧಿ ಆನ್ ಲೈನ್ ಆ್ಯಪ್ ಗಳನ್ನು ಕೂಡ ಆನ್ ಲೈನ್ ನಲ್ಲಿ ಬಿಡಲಾಗಿದ್ದು, ಇದು ಸರ್ಕಾರವೇ ಬಿಡುಗಡೆ ಮಾಡಿರುವ ಆಪ್ ಎಂದು ಡೌನ್ ಲೋಡ್ ಮಾಡಿದರೆ ಸಂಕಷ್ಟಕ್ಕೆ ಸಿಲುಕುವುದು ಗ್ಯಾರಂಟಿ.

 

 

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular