HomeLatest Newsಬಿಡಿಎ ಹೊಸ ದರ ಪ್ರಕಟ: ಶಿವರಾಮ ಕಾರಂತ ಲೇಔಟ್‌ನಲ್ಲಿ ಚದರಡಿಗೆ ₹6,000 ದರ ನಿಗದಿ: 30×40...

ಬಿಡಿಎ ಹೊಸ ದರ ಪ್ರಕಟ: ಶಿವರಾಮ ಕಾರಂತ ಲೇಔಟ್‌ನಲ್ಲಿ ಚದರಡಿಗೆ ₹6,000 ದರ ನಿಗದಿ: 30×40 ಸೈಟ್ ಈಗ ₹72 ಲಕ್ಷ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಸ್ವಂತ ಮನೆ ನಿರ್ಮಿಸುವ ಮಧ್ಯಮ ವರ್ಗದ ಜನರ ಕನಸಿಗೆ ಬಿಡಿಎ (BDA) ಭಾರಿ ಹೊಡೆತ ನೀಡಿದೆ. ತನ್ನ ಬಹುನಿರೀಕ್ಷಿತ ಡಾ. ಕೆ. ಶಿವರಾಮ ಕಾರಂತ ಬಡಾವಣೆಯ ನಿವೇಶನಗಳ ಬೆಲೆಯನ್ನು ಬಿಡಿಎ ಗಣನೀಯವಾಗಿ ಏರಿಕೆ ಮಾಡಿದ್ದು, ಪರಿಷ್ಕೃತ ದರದಂತೆ ಪ್ರತಿ ಚದರ ಅಡಿಗೆ ಬರೋಬ್ಬರಿ ₹6,000 ನಿಗದಿಪಡಿಸಿದೆ. ಇದೇ ವೇಳೆ, ಒಟ್ಟು ನಿವೇಶನಗಳ ಹಂಚಿಕೆಯನ್ನು ಎರಡು ಹಂತಗಳಲ್ಲಿ ನಡೆಸಲು ಪ್ರಾಧಿಕಾರ ತೀರ್ಮಾನಿಸಿದೆ.

30×40 ನಿವೇಶನದ ದರ ಈಗ ₹72 ಲಕ್ಷ

ಬಿಡಿಎ ಹೊಸ ದರ ಜಾರಿಗೊಳಿಸಿದ ನಂತರ, ಸಾರ್ವಜನಿಕರಲ್ಲಿ ಅತ್ಯಂತ ಹೆಚ್ಚಿನ ಬೇಡಿಕೆ ಇರುವ 30×40 ಅಡಿ (1,200 ಚದರ ಅಡಿ) ಅಳತೆಯ ನಿವೇಶನದ ಬೆಲೆ ಸುಮಾರು ₹72 ಲಕ್ಷ ತಲುಪಲಿದೆ.

ಕಳೆದ 2023ರ ಅಂತ್ಯದಲ್ಲಿ ಬಿಡಿಎ ಪ್ರತಿ ಚದರ ಅಡಿಗೆ ₹4,900 ದರ ನಿಗದಿಪಡಿಸಿತ್ತು. ಆಗ 30×40 ನಿವೇಶನದ ಬೆಲೆ ಸುಮಾರು ₹59 ಲಕ್ಷ ಇತ್ತು. ಅಂದರೆ, ಇದೀಗ ಒಂದೇ ಬಾರಿಗೆ ಪ್ರತಿ ಚದರ ಅಡಿಗೆ ಬರೋಬ್ಬರಿ ₹1,100 ಹೆಚ್ಚಳವಾದಂತಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸುತ್ತಮುತ್ತಲಿನ ಖಾಸಗಿ ಲೇಔಟ್‌ಗಳ ಪ್ರಸ್ತುತ ಮಾರುಕಟ್ಟೆ ದರಕ್ಕೆ ಹೋಲಿಸಿದರೆ ಬಿಡಿಎ ನಿಗದಿಪಡಿಸಿರುವ ದರ ಕಡಿಮೆಯಿರುವುದು ನಿಜವಾದರೂ, ಬಡಾವಣೆ ಆರಂಭಿಸಿದ ಮೂಲ ಉದ್ದೇಶವಾದ “ಮಧ್ಯಮ ವರ್ಗದ ಜನರಿಗೆ ಕೈಗೆಟುಕುವ ದರದಲ್ಲಿ ಮನೆ” ಎನ್ನುವ ಆಶಯಕ್ಕೆ ಇದು ಹಿನ್ನಡೆಯುಂಟುಮಾಡಲಿದೆ ಎಂದು ಅರ್ಜಿದಾರರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಈ ಬಡಾವಣೆಯಲ್ಲಿ 20×30, 40×60 ಹಾಗೂ 50×80 ಅಳತೆಯ ಸೈಟ್‌ಗಳಿಗಿಂತ 30×40 ಅಳತೆಯ ನಿವೇಶನಗಳೇ ಹೆಚ್ಚಾಗಿವೆ.

ಎರಡು ಹಂತಗಳಲ್ಲಿ ನಿವೇಶನ ಹಂಚಿಕೆ: ವಾರದಲ್ಲೇ ಅಧಿಸೂಚನೆ

ಬಡಾವಣೆಯ ಕೆಲವು ನಿವೇಶನಗಳು ಇನ್ನೂ ನ್ಯಾಯಾಲಯದ ವ್ಯಾಜ್ಯದಲ್ಲಿ ಇರುವುದರಿಂದ ಬಿಡಿಎ ಹಂಚಿಕೆ ಪ್ರಕ್ರಿಯೆಯನ್ನು ಎರಡು ಹಂತಗಳಲ್ಲಿ ಮಾಡಲು ಮುಂದಾಗಿದೆ.

ಮೊದಲ ಹಂತ: ಸಾರ್ವಜನಿಕರಿಗೆ ಲಭ್ಯವಾಗಲಿರುವ ಒಟ್ಟು 6,000 ನಿವೇಶನಗಳ ಪೈಕಿ, ಮೊದಲ ಹಂತವಾಗಿ 3,000 ನಿವೇಶನಗಳಿಗೆ ಅರ್ಜಿ ಆಹ್ವಾನಿಸಲು ಇನ್ನು ಕೇವಲ ಒಂದು ವಾರದೊಳಗೆ ಅಧಿಕೃತ ಅಧಿಸೂಚನೆ ಹೊರಡಿಸಲು ಬಿಡಿಎ ಸಿದ್ಧತೆ ನಡೆಸಿದೆ.

ರೈತರಿಗೆ ನಿವೇಶನ ಹಂಚಿಕೆ: ಬಡಾವಣೆಗೆ ಭೂಮಿ ನೀಡಿದ ರೈತರಿಗೆ ರ್ಯಾಂಡಮೈಸೇಷನ್ ತಂತ್ರಜ್ಞಾನದ ಮೂಲಕ ಸುಮಾರು 18,000 ನಿವೇಶನಗಳನ್ನು ಹಂಚಿಕೆ ಮಾಡಲಾಗುತ್ತದೆ. ಬಿಡಿಎ ಬಳಿ ಈ ತಂತ್ರಜ್ಞಾನ ಈಗಾಗಲೇ ಸಿದ್ಧವಾಗಿದೆ.

17 ಹಳ್ಳಿಗಳ ವ್ಯಾಪ್ತಿಯಲ್ಲಿ ನಿರ್ಮಾಣವಾಗುತ್ತಿದೆ ಅತಿದೊಡ್ಡ ಬಡಾವಣೆ

ಸರ್ ಎಂ. ವಿಶ್ವೇಶ್ವರಯ್ಯ ಬಡಾವಣೆಯ ನಂತರ ಉತ್ತರ ಬೆಂಗಳೂರಿನಲ್ಲಿ ನಿರ್ಮಾಣವಾಗುತ್ತಿರುವ ಕಾರಂತ ಬಡಾವಣೆಯು ಬಿಡಿಎ ಕೈಗೆತ್ತಿಕೊಂಡಿರುವ ಅತಿ ದೊಡ್ಡ ವಸತಿ ಯೋಜನೆಯಾಗಿದೆ. ಒಟ್ಟು 3,069 ಎಕರೆ ಸುಬಂಧಿತ ಪ್ರದೇಶದಲ್ಲಿ ಹರಡಿಕೊಂಡಿರುವ ಈ ಬಡಾವಣೆಯು ಹಾರೋಹಳ್ಳಿ, ಅವರಹಳ್ಳಿ, ರಾಮಗೊಂಡನಹಳ್ಳಿ, ಜಾರಕಬಂಡೆ ಕಾವಲ್ ಸೇರಿದಂತೆ ಒಟ್ಟು 17 ಹಳ್ಳಿಗಳ ವ್ಯಾಪ್ತಿಯನ್ನು ಒಳಗೊಂಡಿದೆ.

ದಶಕಗಳ ಕಾಲ ಕಾನೂನು ಸಂಕಷ್ಟದಲ್ಲಿದ್ದ ಈ ಯೋಜನೆಗೆ ಸುಪ್ರೀಂ ಕೋರ್ಟ್ ಹಸಿರು ನಿಶಾನೆ ತೋರಿದ ನಂತರ ಕಾಮಗಾರಿ ಚುರುಕುಗೊಂಡಿದ್ದು, ಯೋಜನೆಯಲ್ಲಿ ಒಟ್ಟು 34,000 ನಿವೇಶನಗಳನ್ನು ನಿರ್ಮಿಸುವ ಬೃಹತ್ ಗುರಿ ಹೊಂದಲಾಗಿದೆ.

ನಿವೇಶನಗಳ ಅಳತೆ ಮತ್ತು ಲಭ್ಯವಿರುವ ಸಂಖ್ಯೆಯ ವಿವರ:

20 x 30 ಅಡಿ: 3,257 ನಿವೇಶನಗಳು

30 x 40 ಅಡಿ: 13,024 ನಿವೇಶನಗಳು

30 x 50 ಅಡಿ: 2,718 ನಿವೇಶನಗಳು

40 x 60 ಅಡಿ: 3,616 ನಿವೇಶನಗಳು

50 x 60 ಅಡಿ: 422 ನಿವೇಶನಗಳು

60 x 50 ಅಡಿ: 31 ನಿವೇಶನಗಳು

ಬೆಸ ನಿವೇಶನ (Odd Sites): 6,723 ನಿವೇಶನಗಳು

ಮೂಲೆ ನಿವೇಶನ (Corner Sites): 5,201 ನಿವೇಶನಗಳು

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular