HomeLatest NewsBIG NEWS: ಇಂದಿರಾ ಕ್ಯಾಂಟೀನ್ ಹಣ ಅವ್ಯವಹಾರ: ಉಪ ಆರೋಗ್ಯಾಧಿಕಾರಿ ಸಸ್ಪೆಂಡ್

BIG NEWS: ಇಂದಿರಾ ಕ್ಯಾಂಟೀನ್ ಹಣ ಅವ್ಯವಹಾರ: ಉಪ ಆರೋಗ್ಯಾಧಿಕಾರಿ ಸಸ್ಪೆಂಡ್

ಬೆಂಗಳೂರು: ಇಂದಿರಾ ಕ್ಯಾಂಟೀನ್ ನ ಕೋಟ್ಯಂತರ ರೂಪಾಯಿ ಅವ್ಯಹಾರ ಪ್ರಕರಣಕ್ಕೆ ಸಂಬಧಿಸಿದಂತೆ ಬೆಂಗಳೂರು ದಕ್ಷಿಣ ಉಪ ಆರೋಗ್ಯಾಧಿಕಾರಿಯನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

ಡಾ.ಕಲ್ಪನಾ.ಪಿ ಅಮಾನತುಗೊಂಡಿರುವ ಆರೋಗ್ಯಾಧಿಕಾರಿ. ಚಿಫ್ ಟಾಕ್ ಫುಡ್ ಆಂಡ್ ಹಾಸ್ಪಿಟಾಲಿಟಿ ಸರ್ವಿಸ್ ಪ್ರೈ.ಲಿಮಿಟೆಡ್ ಗೆ ನೀಡಬೇಕಿದ್ದ 2,27,34,474 ರೂ ಬದಲಾಗಿ ಪರಿಶೀಲನೆ ನಡೆಸದೇ 9,72,21,787 ರೂ ಗಳನ್ನು ಪಾವತಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆರೋಗ್ಯಾಧಿಕಾರಿಯ ನಿರ್ಲಕ್ಷ್ಯದಿಂದಾಗಿ ಚಿಫ್ ಟಾಕ್ ಫುಡ್ ಆಂಡ್ ಹಾಸ್ಪಿಟಾಲಿಟಿ ಸರ್ವಿಸ್ ಪ್ರೈ.ಲಿಮಿಟೆಡ್ ಗೆ 7,00,12,396 ರೂ ಅಧಿಕ ಮೊತ್ತ ಪಾವತಿಯಾಗಿದೆ. ಕರ್ತವ್ಯ ಲೋಪ ಹಿನ್ನೆಲೆಯಲ್ಲಿ ಉಪ ಆರೋಗ್ಯಾಧಿಕಾರಿ ಡಾ.ಕಲ್ಪನಾ ಅವರನ್ನು ಬಿಬಿಎಂಪಿ ವಿಶೇಶ ಆಯುಕ್ತರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular