HomeLatest Newsಬಿಗ್‌ಬಾಸ್‌ನಲ್ಲಿರುವ ಸ್ಪರ್ಧಿಗಳ ಪೈಕಿ ಅತಿಹೆಚ್ಚು ಇನ್ಸ್ಟಾಗ್ರಾಮ್ ಫಾಲೋವರ್ಸ್ ಹೊಂದಿರುವವರು ಯಾರು?

ಬಿಗ್‌ಬಾಸ್‌ನಲ್ಲಿರುವ ಸ್ಪರ್ಧಿಗಳ ಪೈಕಿ ಅತಿಹೆಚ್ಚು ಇನ್ಸ್ಟಾಗ್ರಾಮ್ ಫಾಲೋವರ್ಸ್ ಹೊಂದಿರುವವರು ಯಾರು?

ಬಿಗ್‌ಬಾಸ್ ಕನ್ನಡ ಸೀಸನ್ 12 ಮುಕ್ತಾಯದ ಹಂತಕ್ಕೆ ಬಂದು ತಲುಪಿದೆ. ಸದ್ಯ ನೂರು ಸಂಚಿಕೆಗಳ ಸನಿಹದಲ್ಲಿರುವ ಬಿಗ್‌ಬಾಸ್ ಸೀಸನ್ ಹನ್ನೆರಡರಲ್ಲಿ ಯಾರು ವಿನ್ನರ್ ಆಗಲಿದ್ದಾರೆ, ಟಾಪ್ 5 ಹಂತಕ್ಕೆ ಯಾರು ತಲುಪಲಿದ್ದಾರೆ ಎನ್ನುವ ಕುತೂಹಲ ಕೆರಳಿದೆ.

ಸದ್ಯ ಮನೆಯಲ್ಲಿ ಗಿಲ್ಲಿ, ಕಾವ್ಯ, ಅಶ್ವಿನಿ ಗೌಡ, ಧೃವಂತ್, ರಾಶಿಕಾ ಶೆಟ್ಟಿ, ರಕ್ಷಿತಾ ಶೆಟ್ಟಿ, ಧನುಷ್ ಹಾಗೂ ರಘು ಉಳಿದುಕೊಂಡಿದ್ದು, ಯಾರು ವಿಜಯಪತಾಕೆ ಹಾರಿಸಲಿದ್ದಾರೆ ಎಂಬುದು ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ.

ಆರಂಭದಲ್ಲಿ ಸ್ಪರ್ಧಿಗಳ ಆಯ್ಕೆ ವಿಚಾರದಲ್ಲಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದ್ದ ಬಿಗ್‌ಬಾಸ್ ಕನ್ನಡ ಸೀಸನ್ 12 ದಿನ ಕಳೆದಂತೆ ತನ್ನ ಛಾಪು ಮೂಡಿಸುವಲ್ಲಿ ಯಶಸ್ವಿಯಾಗಿದೆ. ಈ ಬಾರಿ ಹೊಸ ನಿಯಮಗಳನ್ನು ಅಳವಡಿಸಿಕೊಂಡರೂ ಸಹ ನೋಡುಗರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇನ್ನು ಸಾಮಾಜಿಕ ಜಾಲತಾಣದಲ್ಲಿ ಬಿಗ್‌ಬಾಸ್ ಕುರಿತ ಪೋಸ್ಟ್‌ಗಳು ದೊಡ್ಡ ಸಂಖ್ಯೆಯಲ್ಲಿಯೇ ಹರಿದಾಡಿದ್ದು, ನೇರವಾಗಿ ಹೇಳುವುದಾದರೆ ಗಿಲ್ಲಿ ಪಾರುಪತ್ಯ ನಡೆಯುತ್ತಿದೆ. ಹೌದು, ಸಾಮಾಜಿಕ ಜಾಲತಾಣದಲ್ಲಿ ಎಲ್ಲ ಸ್ಪರ್ಧಿಗಳಿಗಿಂತಲೂ ಗಿಲ್ಲಿ ನಟನ ಕುರಿತ ಪೋಸ್ಟ್‌ಗಳು ಹೆಚ್ಚಿವೆ. ಈ ಪೈಕಿ ಗಿಲ್ಲಿ ಪರವಾಗಿಯೇ ಹೆಚ್ಚಿನ ಪೋಸ್ಟ್‌ಗಳು ಇರುವುದು ಗಿಲ್ಲಿ ಗಳಿಸಿರುವ ಜನಪ್ರಿಯತೆಗೆ ಹಿಡಿದ ಕೈಗನ್ನಡಿ.

ಬಿಗ್‌ಬಾಸ್ ಆರಂಭದ ಸಂದರ್ಭದಲ್ಲಿ ಒಂದು ಲಕ್ಷ ಹಿಂಬಾಲಕರನ್ನು ಇನ್ಸ್ಟಾಗ್ರಾಮ್‌ನಲ್ಲಿ ಹೊಂದಿದ್ದ ಗಿಲ್ಲಿ ಸದ್ಯ ಡಿಸೆಂಬರ್ 6ರಂದು 8 ಲಕ್ಷ ಹಿಂಬಾಲಕರನ್ನು ದಾಟಿ ಮುನ್ನುಗ್ಗುತ್ತಿದ್ದಾರೆ. ಈ ಮಟ್ಟಕ್ಕೆ ಕನ್ನಡ ಬಿಗ್‌ಬಾಸ್ ಇತಿಹಾಸದಲ್ಲಿ ಹಿಂಬಾಲಕರನ್ನು ಹೊಂದಿದ್ದು ಇದೇ ಮೊದಲ ಬಾರಿ ಎಂದೇ ಹೇಳಬಹುದು.

ಹೀಗೆ ಸದ್ಯ ಬಿಗ್‌ಬಾಸ್ ಮನೆಯಲ್ಲಿರುವ ಸ್ಪರ್ಧಿಗಳ ಪೈಕಿ ಯಾರು ಎಷ್ಟು ಇನ್ಸ್ಟಾಗ್ರಾಮ್ ಫಾಲೋವರ್ಸ್ ಹೊಂದಿದ್ದಾರೆ ಎಂಬ ಮಾಹಿತಿ ಮುಂದಿದೆ.

ಅಶ್ವಿನಿ ಗೌಡ – 1. 97 ಲಕ್ಷ

ಕಾವ್ಯ- 481 ಲಕ್ಷ

ರಕ್ಷಿತಾ ಶೆಟ್ಟಿ – 4. 70 ಲಕ್ಷ

ರಾಶಿಕಾ ಶೆಟ್ಟಿ – 1. 70 ಲಕ್ಷ

ಧೃವಂತ್ – 12 ಸಾವಿರ

ಧನುಷ್ – 2. 64 ಲಕ್ಷ

ರಘು – 2. 32 ಲಕ್ಷ

ಗಿಲ್ಲಿ – 8. 06 ಲಕ್ಷ

( ಡಿಸೆಂಬರ್ 6, ಮಧ್ಯಾಹ್ನ 1.30ರ ಸಮಯಕ್ಕೆ )

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

Most Popular