ಕನ್ನಡ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದಾದ ಬಿಗ್‌ಬಾಸ್ ಕನ್ನಡ ಸೀಸನ್ 12ರ ಫಿನಾಲೆ ಇಂದು ( ಜನವರಿ 18 ) ನಡೆಯುತ್ತಿದೆ. 112 ದಿನಗಳ ಪಯಣ ಇಂದಿಗೆ ಮುಗಿದಿದ್ದು, ಫಿನಾಲೆಗೆ ಆರು ಸ್ಪರ್ಧಿಗಳು ಪ್ರವೇಶ ಪಡೆದುಕೊಂಡಿದ್ದಾರೆ.
ಅಶ್ವಿನಿ ಗೌಡ, ಗಿಲ್ಲಿ ನಟ, ಮ್ಯೂಟಂರ್ ರಘು, ರಕ್ಷಿತಾ ಶೆಟ್ಟಿ, ಕಾವ್ಯ ಶೈವ ಹಾಗೂ ಧನುಷ್ ಫಿನಾಲೆಯಲ್ಲಿದ್ದಾರೆ. ಇನ್ನು ಈ ಪೈಕಿ ಕಡಿಮೆ ಮತಗಳನ್ನು ಪಡೆದುಕೊಂಡ ಧನುಷ್ ಫಿನಾಲೆಯಿಂದ ಮೊದಲ ಎಲಿಮಿನೇಷನ್‌ನಲ್ಲಿ ಹೊರಬಿದ್ದಿದ್ದಾರೆ.
ಹೀಗೆ ಮೊದಲ ಎಲಿಮಿನೇಷನ್ ಮುಕ್ತಾಯವಾಗುತ್ತಿದ್ದಂತೆ ಉಳಿದ ಐವರಲ್ಲಿ ಮುಂದಿನ ಎಲಿಮಿನೇಷನ್ ಯಾರಾಗಬಹುದು ಹಾಗೂ ಗೆಲುವು ಯಾರ ಪಾಲಾಗಬಹುದು ಎಂಬ ಕುತೂಹಲ ಮೂಡಿದೆ.
ಈ ಬಾರಿ ಕೋಟಿ ಕೋಟಿ ಮತಗಳು ಚಲಾವಣೆಯಾಗಿವೆ ಎಂಬುದನ್ನು ಸ್ವತಃ ಕಿಚ್ಚ ಸುದೀಪ್ ಅವರೇ ಘೋಷಣೆ ಮಾಡಿರುವ ಕಾರಣ ಜಿದ್ದಾಜಿದ್ದಿ ಭರ್ಜರಿಯಾಗಿಯೇ ನಡೆದಿದೆ.
ಇನ್ನು ಧನುಷ್ ಮನೆಯಿಂದ ಹೊರಬಂದು ಬಿಗ್‌ಬಾಸ್ ಫಿನಾಲೆ ವೇದಿಕೆ ಪ್ರವೇಶಿಸಿದ ಧನುಷ್‌ಗೆ ಕಿಚ್ಚ ಸುದೀಪ್ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಮಗನನ್ನು ಕಂಡು ಧನುಷ್ ತಾಯಿ ಕಣ್ಣೀರು ಹಾಕಿದರು. ಸೋದರಿ ಆತನನ್ನು ವಿನ್ನರ್ ಸ್ಥಾನದಲ್ಲಿ ನೋಡಬಯಸಿದ್ದೆ ಎಂದು ಕಣ್ಣೀರು ಹಾಕಿದರು.
ಇನ್ನು ಮನೆಯಲ್ಲಿ ಉಳಿದ ಮಂದಿ ಪೈಕಿ ಯಾರೂ ಸಹ ಧನುಷ್ ಆರನೇ ಸ್ಥಾನಕ್ಕೆ ಎಲಿಮಿನೇಟ್ ಆಗುತ್ತಾರೆ ಎಂದುಕೊಂಡಿರಲಿಲ್ಲ ಎಂದು ಆಶ್ಚರ್ಯ ಹೊರಹಾಕಿದರು. ಮ್ಯೂಟಂರ್ ರಘು ಧನುಷ್ ಐದು ಅಥವಾ ನಾಲ್ಕನೇ ಸ್ಥಾನದಲ್ಲಿ ಎಲಿಮಿನೇಟ್ ಆಗಬಹುದು ಎಂದುಕೊಂಡಿದ್ದೆ ಎಂದರೆ, ಅಶ್ವಿನಿ ಗೌಡ ಧನುಷ್ ಮೂರನೇ ಸ್ಥಾನವನ್ನಾದರೂ ಪಡೆಯಲಿದ್ದಾರೆ ಎಂದರು. ಕಾವ್ಯ ಸಹ ನಾಲ್ಕು ಅಥವಾ ಐದನೇ ಸ್ಥಾನ ಎಂದರೆ ಗಿಲ್ಲಿ ಹಾಗೂ ರಕ್ಷಿತಾ ಇಷ್ಟು ಬೇಗ ಹೋಗುತ್ತಾರೆ ಎಂದುಕೊಂಡಿರಲಿಲ್ಲ ಎಂದು ಸುದೀಪ್‌ಗೆ ಉತ್ತರ ನೀಡಿದರು.

