HomeAgricultureಕಾಂಗ್ರೆಸ್ ದೇಶದಲ್ಲಿ ಅರಾಜಕತೆಯನ್ನು ಸೃಷ್ಟಿಸುತ್ತಿದೆ: ಬಸವರಾಜ ಬೊಮ್ಮಾಯಿ

ಕಾಂಗ್ರೆಸ್ ದೇಶದಲ್ಲಿ ಅರಾಜಕತೆಯನ್ನು ಸೃಷ್ಟಿಸುತ್ತಿದೆ: ಬಸವರಾಜ ಬೊಮ್ಮಾಯಿ

ಗದಗ- ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರವು ದೆಹಲಿ ಹಾಗೂ ದೇಶದಲ್ಲಿ ಅರಾಜಕತೆಯನ್ನು ಸೃಷ್ಟಿಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರು ಗಂಭೀರ ಆರೋಪ ಮಾಡಿದ್ದಾರೆ.

ಇಂದು ಗದಗ ನಗರದ ಶ್ರೀ ವಿಠ್ಠಲಾರೂಢ ಸಮುದಾಯ ಭವನದಲ್ಲಿ ಭಾರತೀಯ ಜನತಾ ಪಾರ್ಟಿಯ ವಿಧಾನ ಪರಿಷತ್ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯ ಪದಾಧಿಕಾರಿಗಳು, ಘಟನಾಯಕರು ಹಾಗೂ ಮುಖಂಡರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಸಂಕರನೂರ ಅವರು ನಾಲ್ಕು ಜಿಲ್ಲೆಗಳ ಪದವೀಧರರನ್ನು ಪ್ರತಿನಿಧಿಸಲು ಅತಿ ಯೋಗ್ಯರಾಗಿದ್ದಾರೆ. ಗದಗ ಜಿಲ್ಲೆಯ ಜನರು ಬುದ್ಧಿವಂತರಲ್ಲಿ ಬುದ್ಧಿವಂತರು ಎಂದಿರುವ ಅವರು, ಸಂಕರನೂರ ಅವರು ಮೂವತ್ತು ವರ್ಷಗಳ ಕಾಲ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ ಎಂದು ಪ್ರಶಂಸಿಸಿದ್ದಾರೆ.

ಪಕ್ಷಾತೀತ ಚುನಾವಣೆಯ ಕುರಿತು

​ಪಕ್ಷಾತೀತ ಚುನಾವಣೆ:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗದಗ ಜಿಲ್ಲೆಯಲ್ಲಿ ಸಂಕರನೂರ ಅವರು ಸೈನ್ಸ್ ಟೀಚರ್ ಅಸೋಸಿಯೇಷನ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮೊದಲ ವ್ಯಕ್ತಿಯಾಗಿ ಸಂಘ-ಸಂಸ್ಥೆಗಳನ್ನು ಕಟ್ಟಿ ಸಾಧನೆ ಮಾಡಿರುವ ವ್ಯಕ್ತಿಯಾಗಿದ್ದಾರೆ. ಈ ಚುನಾವಣೆ ಪಕ್ಷದ ಆಧಾರದ ಮೇಲೆ ನಡೆಯುತ್ತಿಲ್ಲವಾಗಿದ್ದು, ಬಿಜೆಪಿಯ ಪದವೀಧರರಿಗಿಂತಲೂ ಹೆಚ್ಚು ಇಂತಹ ಇತರ ಪಕ್ಷಗಳ ಪದವೀಧರರು ಕೂಡ ಸಂಕರನೂರ ಅವರಿಗೆ ಬೆಂಬಲ ನೀಡಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಲಾಗಿದೆ. ಸಾಧಕರಾದ ನಿಮ್ಮ ಮಾತಿಗೆ ದೊಡ್ಡ ಬೆಲೆಯಿದ್ದು, ಗದಗಿನಲ್ಲಿ ಉತ್ತಮ ವಾತಾವರಣವನ್ನು ನಿರ್ಮಿಸಿ ಗರಿಷ್ಠ ಮತಗಳನ್ನು ಹಾಕಿಸುವಂತೆ ಮನವಿ ಮಾಡಿದ್ದಾರೆ.

ವಿಶ್ವದಲ್ಲಿನ ಅರಾಜಕತೆ, ತಂತ್ರಜ್ಞಾನ ಮತ್ತು ರಾಜಕೀಯ

​ವಿಶ್ವದಲ್ಲಿ ಹೆಚ್ಚುತ್ತಿರುವ ಅರಾಜಕತೆ: ಎರಡನೇ ಮಹಾಯುದ್ಧದ ನಂತರ ಎಂದಿಗೂ ಇಲ್ಲದ ರೀತಿಯಲ್ಲಿ ಇವತ್ತು ವಿಶ್ವದ 55 ರಾಷ್ಟ್ರಗಳಲ್ಲಿ ಅರಾಜಕತೆ ತಲೆದೋರಿದೆ. ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಯಿಂದ ಸದುಪಯೋಗದ ಜೊತೆಗೆ ದುರುಪಯೋಗವೂ ಆಗುತ್ತಿದ್ದು, ತಂತ್ರಜ್ಞಾನದಲ್ಲಿರುವವರು ರಾಜಕಾರಣಕ್ಕೆ ಬಂದರೆ ಜಗತ್ತಿನಲ್ಲಿ ಇಂತಹ ಸನ್ನಿವೇಶಗಳು ಸೃಷ್ಟಿಯಾಗುತ್ತವೆ ಎಂಬುದಕ್ಕೆ ಇದು ಉದಾಹರಣೆಯಾಗಿದೆ. ಪಶ್ಚಿಮ ದೇಶದ ತತ್ವಜ್ಞಾನಿ ಹೇಳಿದಂತೆ ರಾಜಕೀಯ ವಿಜ್ಞಾನವು ಎಲ್ಲ ವಿಜ್ಞಾನಗಳಿಗಿಂತ ಶ್ರೇಷ್ಠವಾದದ್ದು ಪರಮಾಣು ಬಾಂಬನ್ನು ವಿಜ್ಞಾನಿಗಳು ತಯಾರು ಮಾಡಿದರೂ ಅದನ್ನು ಎಲ್ಲಿ ಮತ್ತು ಯಾವಾಗ ಬಳಸಬೇಕು ಎಂಬ ನಿರ್ಧಾರ ರಾಜಕೀಯ ನಾಯಕರಿಗೆ ಇರುತ್ತದೆ. ಆದರೆ ಪ್ರಸ್ತುತ ವಿಜ್ಞಾನ ಕ್ಷೇತ್ರದಲ್ಲಿರುವ ಕೆಲವರು ರಾಜಕೀಯಕ್ಕೆ ಬಂದು, ಸಿಕ್ಕಾಪಟ್ಟೆ ಹಣವನ್ನು ಬಳಸಿ ಇಡೀ ವಿಶ್ವವನ್ನೇ ಆಳುವ ದುಸ್ಸಾಹಸಕ್ಕೆ ಕೈಹಾಕುತ್ತಿದ್ದಾರೆ ಎಂದು ಬಸವರಾಜ ಬೊಮ್ಮಾಯಿ ಎಚ್ಚರಿಸಿದ್ದಾರೆ.

​​ಜನರ ಸಮಸ್ಯೆಗಳ ನಿರ್ಲಕ್ಷ್ಯ: ರಾಜ್ಯದಲ್ಲಿ ಬರಗಾಲವಿದ್ದರೂ ಕುಡಿಯಲು ನೀರು, ಮೇವು ಸಿಗದೆ ಜನರು ಪರದಾಡುತ್ತಿದ್ದಾರೆ ಮತ್ತು ಸರ್ಕಾರ ಜನರ ಕಷ್ಟಗಳನ್ನು ನಿರ್ಲಕ್ಷಿಸಿ ಜೂಜಾಟದಲ್ಲಿ ತೊಡಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಭವಿಷ್ಯದ ರಾಜಕೀಯ ಗುರಿಗಳು

​ಮುಂದಿನ ರಾಜಕೀಯ ಗುರಿ: 2026ರ ಸಂಕನೂರು ಆಯ್ಕೆಯ ನಂತರ 2028ರಲ್ಲಿ ರಾಜ್ಯದಲ್ಲಿ ಬಿಜೆಪಿ ಆಡಳಿತಕ್ಕೆ ಬರಲಿದೆ ಮತ್ತು 2029ರಲ್ಲಿ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಸಂಧರ್ಭದಲ್ಲಿ ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ಶಾಸಕರುಗಳಾದ ಸಿ.ಸಿ ಪಾಟೀಲ್, ಮಹೇಶ ಟೆಂಗಿನಕಾಯಿ, ಅಭ್ಯರ್ಥಿಯಾದ ಶಲ ಎಸ್.ವಿ ಸಂಕನೂರ, ಭಾರತೀಯ ಜನತಾ ಪಾರ್ಟಿಯ ಜಿಲ್ಲಾಧ್ಯಕ್ಷರಾದ ರಾಜು ಕುರಡಗಿ, ಮುಖಂಡರುಗಳಾದ ಅನಿಲ ಮೆಣಸಿನಕಾಯಿ, ಜಯತೀರ್ಥ ಕಟ್ಟಿ, ಗೋವಿಂದಗೌಡ್ರ, ಮೋಹನ ಮಾಳಶೆಟ್ಟಿ ರವಿ ಗುಂಜಿಕರ, ನಾಗರಾಜ ಕುಲಕರ್ಣಿ ಸೇರಿದಂತೆ ಹಲವಾರು ಪ್ರಮುಖರು ಹಾಗೂ ಮುಖಂಡರು ಉಪಸ್ಥಿತರಿದ್ದರು

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular