HomeKarnataka'ಬಸವಣ್ಣ ಕರ್ನಾಟಕದ ಬೇವರ್ಸಿ'; ಅಂಬೇಡ್ಕರ್‌ಗೆ ಬೈದಿದ್ದ ವ್ಯಕ್ತಿಯ ಮತ್ತೊಂದು ವಿಡಿಯೊ ವೈರಲ್!

‘ಬಸವಣ್ಣ ಕರ್ನಾಟಕದ ಬೇವರ್ಸಿ’; ಅಂಬೇಡ್ಕರ್‌ಗೆ ಬೈದಿದ್ದ ವ್ಯಕ್ತಿಯ ಮತ್ತೊಂದು ವಿಡಿಯೊ ವೈರಲ್!

ಬುದ್ಧ, ಬಸವ, ಅಂಬೇಡ್ಕರ್ ಸಮಾಜದಲ್ಲಿ ಸಮಾನತೆ ತರಬೇಕು ಎಂದು ಹೋರಾಟ ಮಾಡಿದ ಹಾಗೂ ಸಂದೇಶ ಸಾರಿದ ಮಹಾನ್ ವ್ಯಕ್ತಿಗಳು. ಆದರೆ ಸಮಾಜದಲ್ಲಿ ಸಮಾನತೆ ಬೇಡ, ನಾವು ಮೇಲು, ಇತರರು ಕೀಳು ಎಂಬ ನೀಚ ಮನೋಭಾವವುಳ್ಳ ಕೆಲವರಿಗೆ ಮಾತ್ರ ಈ ವ್ಯಕ್ತಿಗಳನ್ನು ಆದರ್ಶರೆಂದು ಒಪ್ಪಿಕೊಳ್ಳಲು ಇಂದಿಗೂ ಸಾಧ್ಯವಾಗಿಲ್ಲ.

ಹೀಗಾಗಿಯೇ ಈ ಮೂವರ ವಿರುದ್ಧ ಈಗಲೂ ವಿರೋಧ, ಹಗೆತನಗಳು ವ್ಯಕ್ತವಾಗುತ್ತಲೇ ಇದ್ದು, ಸದ್ಯ ರಾಜ್ಯದಲ್ಲಿ ವಿಜ್ಞಾನಮೂರ್ತಿ ಅಲಿಯಾಸ್ ವೇದಮೂರ್ತಿ ಎಂಬ ಹೆಸರಿನ ವ್ಯಕ್ತಿ ಇದೇ ಕಾರಣದಿಂದಾಗಿ ವೈರಲ್ ಆಗಿ ಜೈಲು ಪಾಲಾಗಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಳೆದ ಮೂರ್ನಾಲ್ಕು ದಿನಗಳಿಂದ ಎಣ್ಣೆ ಹೊಡೆದುಕೊಂಡು ಸಂವಿಧಾನ ಬರೆದ್ರಾ ಮಿಸ್ಟರ್ ಅಂಬೇಡ್ಕರ್ ಎಂಬ ವಿಡಿಯೊವನ್ನು ಮಾಡಿ ವೈರಲ್ ಆಗಿ ಬಳಿಕ ಅದೇ ವಿಡಿಯೊದ ಮೇಲೆ ದೂರು ದಾಖಲಾದ ಹಿನ್ನೆಲೆಯಲ್ಲಿ ಕೆಆರ್ ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಬಂಧನಕ್ಕೊಳಗಾಗಿರುವ ಈತನ ಮತ್ತೊಂದು ವಿಡಿಯೊ ಸದ್ಯ ವೈರಲ್ ಆಗುತ್ತಿದ್ದು, ವಚನ ಶ್ರೇಷ್ಟ ಬಸವಣ್ಣ ಅವರ ವಿರುದ್ಧ ಆತ ನಾಲಿಗೆ ಹರಿಬಿಟ್ಟಿರುವುದು ಖಂಡನೆಗೆ ಕಾರಣವಾಗಿದೆ.

ಬಸವಣ್ಣ ಕರ್ನಾಟಕದ ಬೇವರ್ಸಿ ಎಂದು ನಿಂದಿಸಿರುವ ಈತ ಇದೇ ವಿಡಿಯೊದಲ್ಲಿ ಬುದ್ಧ ಹಾಗೂ ಬಸವಣ್ಣ ಅವರಿಗೂ ಸಹ ಇದೇ ರೀತಿಯ ನಿಂದನೆ ಮಾಡಿದ್ದಾನೆ. ಸದ್ಯ ಈತನ ವಿರುದ್ಧ ಅಂಬೇಡ್ಕರ್ ನಿಂದಿಸಿದ್ದಕ್ಕೆ ದೂರು ದಾಖಲಾಗಿ ಬಂಧಿಸಲಾಗಿದ್ದು, ಬಸವಣ್ಣನವರನ್ನು ನಿಂದಿಸಿದ್ದಕ್ಕೂ ಸಹ ರಾಜ್ಯಾದ್ಯಂತ ದೂರು ದಾಖಲಿಸಿ ಬುದ್ದಿ ಕಲಿಸಬೇಕು ಎಂದು ಬಸವ ಪ್ರಿಯರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಅಂಬೇಡ್ಕರ್ ಹಾಗೂ ಸಂವಿಧಾನ ಮೀಸಲಾತಿ ವಿರುದ್ಧ ನಾಲಿಗೆ ಹರಿಬಿಟ್ಟಿದ್ದ ವಿಜ್ಞಾನಮೂರ್ತಿ

ವೈರಲ್ ಆದ ವಿಡಿಯೊದಲ್ಲಿ ಈತ ‘ರೀ ಮಿಸ್ಟರ್ ಅಂಬೇಡ್ಕರ್ ಅವರೇ, ಸಂವಿಧಾನ ಬರಿಬೇಕಾದ್ರೆ ಎಣ್ಣೆ ಏನಾದ್ರೂ ಹೊಡೆದುಕೊಂಡು ಸಂವಿಧಾನ ಬರೆದಿದ್ರಾ? ರೀ ಶಿಕ್ಷಣದಲ್ಲಿ ಮೀಸಲಾತಿ ಕೊಡಿಸಿದ್ದೀರ ಒಳ್ಳೆಯದು, ಶಿಕ್ಷಣದಲ್ಲಿ ಸಮಾನತೆ ತರಬೇಕು ಎಂದು ಕಡಿಮೆ ಅಂಕ ತೆಗೆದರೂ ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಸೀಟು ಸಿಗುವಂತೆ ಮಾಡಿದ್ದೀರ ಒಳ್ಳೆಯದು, ಅವರಿಗೆ ಕಡಿಮೆ ಶುಲ್ಕ ಕಟ್ಟುವಂತೆ ಮಾಡಿದ್ದೀರ ಒಳ್ಳೆಯದು, ಸಂಘ ರಿಜಿಸ್ಟರ್ ಮಾಡಿಕೊಂಡ್ರೆ ಅಲ್ಲೂ ಕಡಿಮೆ ಹಣ ಒಳ್ಳೆಯದು, ಪೆಟ್ರೋಲ್ ಪಂಪ್ ಆರಂಭಿಸಿದರೆ ಅಲ್ಲೂ ಸಬ್ಸಿಡಿ ಒಳ್ಳೆಯದು. ಇಷ್ಟೆಲ್ಲ ಮೀಸಲಾತಿ ಇದ್ದ ಮೇಲೂ ಪರೀಕ್ಷೆ ಬರೆದು ಪಡೆದುಕೊಳ್ಳುವ ಸರ್ಕಾರಿ ಕೆಲಸದ ಮೇಲೂ ಯಾಕಪ್ಪ ಮೀಸಲಾತಿ?’ ಎಂದು ಪ್ರಶ್ನಿಸಿದ್ದಾನೆ.

ಆರ್‌ಎಸ್‌ಎಸ್‌ ಹಿಂಬಾಲಕ ಎಂಬ ಟ್ರೋಲ್

ಇನ್ನು ಈತನ ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಈತ ಸಾಮಾಜಿಕ ಜಾಲತಾಣದಲ್ಲಿ ಈ ಹಿಂದೆ ಮಾಡಿದ್ದ ಪೋಸ್ಟ್‌ಗಳು ವೈರಲ್ ಆಗುತ್ತಿದ್ದು, ಸದ್ಯ ಈ ವಿಷಯ ಚರ್ಚೆಗೆ ಕಾರಣವಾಗಿದೆ. ಇಂತಹ ಪೋಸ್ಟ್‌ಗಳನ್ನು ಹಾಕುವ ವ್ಯಕ್ತಿಗೆ ಆರ್‌ಎಸ್‌ಎಸ್‌ ನಂಟಿದೆ ಎಂದು ಹರಿದಾಡಿದ ಮೇಲೆ ಆರ್‌ಎಸ್‌ಎಸ್‌ ಕಾರ್ಯಕರ್ತರು ತಮಗೆ ಚ್ಯುತಿ ಬರದ ಹಾಗೆ ಇಂತಹ ವ್ಯಕ್ತಿಗಳನ್ನು ದೂರ ಇಡಬೇಕು ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular