HomeBusinessಹಬ್ಬಗಳ ಸೀಸನ್ ಗೆ ವಿಶೇಷ ಕೊಡುಗೆ: ವಿಶೇಷ ರಿಯಾಯಿತಿಯಲ್ಲಿ ಕಡಿಮೆ ಬಡ್ಡಿಗೆ BOB ಸಾಲ ಸೌಲಭ್ಯ

ಹಬ್ಬಗಳ ಸೀಸನ್ ಗೆ ವಿಶೇಷ ಕೊಡುಗೆ: ವಿಶೇಷ ರಿಯಾಯಿತಿಯಲ್ಲಿ ಕಡಿಮೆ ಬಡ್ಡಿಗೆ BOB ಸಾಲ ಸೌಲಭ್ಯ

ಬೆಂಗಳೂರು: ಬ್ಯಾಂಕ್ ಆಫ್ ಬರೋಡಾದಿಂದ ಗ್ರಾಹಕರಿಗೆ ವಿಶೇಷ ಸಾಲ ಸೌಲಭ್ಯ ಕಲ್ಪಿಸಲಾಗಿದೆ. ಸಾಲು ಸಾಲು ಹಬ್ಬಗಳ ಹಿನ್ನೆಲೆಯಲ್ಲಿ ಗ್ರಾಹಕರಿಗೆ ವಿಶೇಷ ರಿಯಾಯಿತಿಯೊಂದಿಗೆ ‘ಬ್ಯಾಂಕ್ ಆಫ್ ಬರೋಡಾ ಕೆ ಸಂಗ್ ತ್ಯೋಹಾರ್ ಕಿ ಉಮಂಗ್’ ಕೊಡುಗೆ ಘೋಷಿಸಲಾಗಿದೆ.

ಮನೆ, ಕಾರ್, ವೈಯಕ್ತಿಕ ಹಾಗೂ ಶಿಕ್ಷಣ ಸಾಲಗಳ ಮೇಲಿನ ಆಕರ್ಷಕ ಬಡ್ಡಿ ದರಗಳು, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಗಳ ಮೇಲೆ ಹಬ್ಬದ ಕೊಡುಗೆಗಳನ್ನು ನೀಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಶೂನ್ಯ ಸಂಸ್ಕರಣಾ ಶುಲ್ಕದೊಂದಿಗೆ ವಾರ್ಷಿಕ ಶೇಕಡ 8.4 ರಷ್ಟು ಬಡ್ಡಿ ದರದಲ್ಲಿ ಗೃಹ ಸಾಲ ನೀಡಲಾಗುತ್ತದೆ. ಶೇಕಡ 8.70 ಬಡ್ಡಿಗೆ ಕಾರ್ ಸಾಲ, ಶೇಕಡ 8.55 ಕ್ಕೆ ಶಿಕ್ಷಣ ಸಾಲ, ಶೇಕಡ 10.10 ಬಡ್ಡಿಗೆ ವೈಯಕ್ತಿಕ ಸಾಲ ಸೌಲಭ್ಯ ಇರಲಿದೆ. ಅಲ್ಲದೇ, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಮತ್ತು ಇಎಂಐ ಕೊಡುಗೆಗಳ ಮೇಲೆ ರಿಯಾಯಿತಿ ಇರಲಿದೆ. ಡಿಸೆಂಬರ್ 31ರವರೆಗೆ ‘ಬ್ಯಾಂಕ್ ಆಫ್ ಬರೋಡಾ ಕೆ ಸಂಗ್ ತ್ಯೋಹಾರ್ ಕಿ ಉಮಂಗ್’ ನಡೆಯಲಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular