HomeBusinessಬ್ಯಾಂಕ್ ಎಫ್‌ಡಿ ಗ್ರಾಹಕರಿಗೆ ಬಂಪರ್ ಆಫರ್: ₹1 ಲಕ್ಷಕ್ಕೆ ಈಗ ಸಿಗುತ್ತೆ ಭರ್ಜರಿ ಬಡ್ಡಿ: ಯಾವ...

ಬ್ಯಾಂಕ್ ಎಫ್‌ಡಿ ಗ್ರಾಹಕರಿಗೆ ಬಂಪರ್ ಆಫರ್: ₹1 ಲಕ್ಷಕ್ಕೆ ಈಗ ಸಿಗುತ್ತೆ ಭರ್ಜರಿ ಬಡ್ಡಿ: ಯಾವ ಬ್ಯಾಂಕ್‌ನಲ್ಲಿ ಎಷ್ಟು ಲಾಭ?

ಬೆಂಗಳೂರು: ಸುರಕ್ಷಿತ ಹೂಡಿಕೆ ಮತ್ತು ಖಚಿತವಾದ ಲಾಭದ ದೃಷ್ಟಿಯಿಂದ ಇಂದಿಗೂ ಹೆಚ್ಚಿನ ಭಾರತೀಯರ ಮೊದಲ ಆಯ್ಕೆ ಸ್ಥಿರ ಠೇವಣಿ ಅಥವಾ ಫಿಕ್ಸೆಡ್ ಡೆಪಾಸಿಟ್ (FD). ಹಣವನ್ನು ಭವಿಷ್ಯದ ಗುರಿಗಳಿಗಾಗಿ ಅಥವಾ ತುರ್ತು ಸಂದರ್ಭಗಳಿಗಾಗಿ ಉಳಿಸಲು ಇದು ಅತ್ಯಂತ ನಂಬಿಕಸ್ತ ಮಾರ್ಗವಾಗಿದೆ. ಆದರೆ, ನೀವು ಇಟ್ಟ ಹಣಕ್ಕೆ ಎಷ್ಟು ಬಡ್ಡಿ ಸಿಗುತ್ತದೆ ಎಂಬುದು ನೀವು ಆಯ್ಕೆ ಮಾಡುವ ಎಫ್‌ಡಿ ಪ್ರಕಾರದ ಮೇಲೆ ನಿರ್ಧರಿತವಾಗಿರುತ್ತದೆ.

ಷೇರು ಮಾರುಕಟ್ಟೆಯ ಏರಿಳಿತಗಳ ನಡುವೆಯೂ ಭಾರತೀಯ ಹೂಡಿಕೆದಾರರಿಗೆ ಇಂದಿಗೂ ಫಿಕ್ಸೆಡ್ ಡೆಪಾಸಿಟ್ (FD) ಎಂದರೆ ಒಂದು ರೀತಿಯ ನೆಮ್ಮದಿ. ಆರ್ಥಿಕ ಅನಿಶ್ಚಿತತೆಯ ಈ ಕಾಲದಲ್ಲಿ ಮ್ಯೂಚುವಲ್ ಫಂಡ್‌ಗಳಿಗಿಂತ ಭದ್ರತೆ ಮತ್ತು ಖಚಿತ ಆದಾಯ ಬಯಸುವವರು ಎಫ್‌ಡಿಗಳನ್ನೇ ಹೆಚ್ಚು ನಂಬುತ್ತಿದ್ದಾರೆ. 2026ರಲ್ಲಿ ಬ್ಯಾಂಕ್‌ಗಳು ಬಡ್ಡಿದರವನ್ನು ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಿದ್ದು ಹೂಡಿಕೆದಾರರಿಗೆ ಈಗ ಉತ್ತಮ ಲಾಭ ಪಡೆಯುವ ಅವಕಾಶ ಒದಗಿ ಬಂದಿದೆ

ಎಫ್‌ಡಿಗಳಲ್ಲಿನ ಎರಡು ಮುಖ್ಯ ವಿಧಗಳು:

ಹೆಚ್ಚಿನ ಹಣಕಾಸು ಸಂಸ್ಥೆಗಳು ಬಡ್ಡಿ ಪಾವತಿಯ ಆಧಾರದ ಮೇಲೆ ಎರಡು ರೀತಿಯ ಎಫ್‌ಡಿಗಳನ್ನು ನೀಡುತ್ತವೆ:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

1.ಕ್ಯುಮುಲೇಟಿವ್ ಎಫ್‌ಡಿ (Cumulative FD):

ಇದರಲ್ಲಿ ಪ್ರತಿ ತಿಂಗಳು ಅಥವಾ ವರ್ಷಕ್ಕೊಮ್ಮೆ ಬಡ್ಡಿಯನ್ನು ನೀಡಲಾಗುವುದಿಲ್ಲ. ಬದಲಾಗಿ, ಬಡ್ಡಿಯು ಅಸಲಿಗೆ ಸೇರ್ಪಡೆಯಾಗುತ್ತಾ ಹೋಗುತ್ತದೆ. ಅಂದರೆ ಇಲ್ಲಿ ನಿಮಗೆ ಚಕ್ರಬಡ್ಡಿ (Compounding Interest) ಲಾಭ ಸಿಗುತ್ತದೆ. ಮೆಚ್ಯೂರಿಟಿ ಅವಧಿ ಮುಗಿದ ನಂತರ ಅಸಲು ಮತ್ತು ಬಡ್ಡಿ ಎರಡೂ ಒಟ್ಟಿಗೆ ಕೈಸೇರುತ್ತದೆ. ದೀರ್ಘಕಾಲದ ಉಳಿತಾಯಕ್ಕೆ ಇದು ಸೂಕ್ತ.

2.ನಾನ್-ಕ್ಯುಮುಲೇಟಿವ್ ಎಫ್‌ಡಿ (Non-Cumulative FD):

ಇಲ್ಲಿ ನಿಮ್ಮ ಠೇವಣಿಯ ಮೇಲೆ ಬರುವ ಬಡ್ಡಿಯನ್ನು ನೀವು ಬಯಸಿದಂತೆ ಪ್ರತಿ ತಿಂಗಳು, ಮೂರು ತಿಂಗಳು ಅಥವಾ ವರ್ಷಕ್ಕೊಮ್ಮೆ ನಿಮ್ಮ ಖಾತೆಗೆ ಪಡೆಯಬಹುದು. ಇಲ್ಲಿ ಅಸಲು ಹಣ ಹಾಗೆಯೇ ಇರುತ್ತದೆ.

ಪ್ರಸ್ತುತ ಬಡ್ಡಿದರ ಹೇಗಿದೆ?

ಪ್ರಸ್ತುತ ಪ್ರಮುಖ ಬ್ಯಾಂಕ್‌ಗಳು ಸಾಮಾನ್ಯ ಗ್ರಾಹಕರಿಗೆ ಶೇ. 5.75 ರಿಂದ 7.75 ರವರೆಗೆ ಬಡ್ಡಿ ನೀಡುತ್ತಿವೆ. ಆದರೆ, ಸಣ್ಣ ಹಣಕಾಸು ಬ್ಯಾಂಕ್‌ಗಳು (Small Finance Banks) ಒಂದು ಹೆಜ್ಜೆ ಮುಂದೆ ಹೋಗಿ ಶೇ. 8.10 ರವರೆಗೆ ಬಡ್ಡಿ ನೀಡುವ ಮೂಲಕ ಹೂಡಿಕೆದಾರರನ್ನು ಸೆಳೆಯುತ್ತಿವೆ.

ಬ್ಯಾಂಕ್ ಹೆಸರು ಸಾಮಾನ್ಯ ಗ್ರಾಹಕರಿಗೆ (ತಿಂಗಳಿಗೆ) ಹಿರಿಯ ನಾಗರಿಕರಿಗೆ (ತಿಂಗಳಿಗೆ)

ಯೆಸ್ ಬ್ಯಾಂಕ್ ₹554 ₹646

ಕೋಟಕ್ ಮಹೀಂದ್ರಾ ಬ್ಯಾಂಕ್ ₹542 –

HDFC / ICICI ಬ್ಯಾಂಕ್ ₹521 ₹563

ಆಕ್ಸಿಸ್ ಬ್ಯಾಂಕ್ ₹479 ₹521

ಸಣ್ಣ ಹಣಕಾಸು ಬ್ಯಾಂಕುಗಳಲ್ಲಿ ಬಂಪರ್ ಲಾಭ

ಹೆಚ್ಚಿನ ಬಡ್ಡಿ ದರ ಬಯಸುವವರಿಗೆ ಸಣ್ಣ ಹಣಕಾಸು ಬ್ಯಾಂಕುಗಳು ವರದಾನವಾಗಿವೆ:

ಸೂರ್ಯೋದಯ ಮತ್ತು ಉತ್ಕರ್ಷ್ ಬ್ಯಾಂಕ್: ಶೇ. 8.10 ಬಡ್ಡಿ (ಅತಿ ಹೆಚ್ಚು).

ಶಿವಾಲಿಕ್ ಬ್ಯಾಂಕ್: ಶೇ. 7.80 ಬಡ್ಡಿ.

ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್: ಶೇ. 7.77 ಬಡ್ಡಿ.

ಸಾರ್ವಜನಿಕ ವಲಯದ ಬ್ಯಾಂಕುಗಳ ಸ್ಥಿತಿ (PSB)

ಎಸ್‌ಬಿಐ (SBI), ಕೆನರಾ ಬ್ಯಾಂಕ್ ಮತ್ತು ಪಿಎನ್‌ಬಿ (PNB) ಅಂತಹ ಬ್ಯಾಂಕುಗಳು ಶೇ. 6 ರಿಂದ 6.75 ರವರೆಗೆ ಬಡ್ಡಿ ನೀಡುತ್ತಿವೆ. ಖಾಸಗಿ ಅಥವಾ ಸಣ್ಣ ಬ್ಯಾಂಕುಗಳಿಗೆ ಹೋಲಿಸಿದರೆ ಇಲ್ಲಿ ಬಡ್ಡಿ ಸ್ವಲ್ಪ ಕಡಿಮೆ ಎನಿಸಿದರೂ, ಅತ್ಯುನ್ನತ ಭದ್ರತೆಯ ಕಾರಣದಿಂದಾಗಿ ಕೋಟ್ಯಂತರ ಜನರು ಇಂದಿಗೂ ಈ ಬ್ಯಾಂಕುಗಳನ್ನೇ ನೆಚ್ಚಿಕೊಂಡಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular