ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ಹಲವೆಡೆ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರನ್ನು ಪತ್ತೆ ಮಾಡಿ ಗಡಿಪಾರು ಮಾಡುವ ಕಾರ್ಯಾಚರಣೆ ಚುರುಕುಗಿಒಂಡಿದೆ. ಬೆಂಗಳೂರಿನಿದ ಈವರೆಗೆ 272 ಅಕ್ರಮ ಬಾಂಗ್ಲಾ ವಲಸಿಗರನ್ನು ಗಡಿಪಾರು ಮಾಡಲಾಗಿದೆ.
ಈ ಪೈಕಿ 178 ಪುರುಷರು, 94 ಮಹಿಳೆಯರು ಮತ್ತು 12 ಮಕ್ಕಳು ಸೇರಿದದರೆ. ಎಲ್ಲರನ್ನೂ ಪೊಲೀಸರು ಪತ್ತೆ ಮಾಡಿ ಒಟ್ಟಿಗೆ ಗಡಿಪಾರು ಮಾಡಿದ್ದಾರೆ. ಅಲ್ಲದೇ ಬಾಂಗ್ಲಾ ವಲಸಿಗರನ್ನು ಕರೆ ತರುತ್ತಿದ್ದವರ ಬಗ್ಗೆಯೂ ಸಿಸಿಬಿ ಪೊಲೀಸರು ಪತ್ತೆ ಮಾಡಿದ್ದಾರೆ.
ಅಕ್ರಮವಾಗಿ ಬೆಂಗಳೂರಿನಲ್ಲಿ ನೆಲಸಿದ್ದ ಬಾಂಗ್ಲಾ ವಲಸಿಗರನ್ನು ಗುರುತಿಸಿ ಅವರನ್ನು ವಾಪಸ್ ಅವರ ದೇಶಕ್ಕೆ ಕಳುಹಿಸಲಾಗುತ್ತಿದೆ. ತ್ರಿಪುರ ಗಡಿಯಿಂದ ಬಾರ್ಡರ್ ಸೆಕ್ಯೂರಿಟಿ ಫೋರ್ಸ್ (BSF) ಮೂಲಕ ಇವರನ್ನು ಗಡಿಪಾರು ಮಾಡಲಾಗುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಹಿನ್ನೆಲೆಯಲ್ಲಿ ತ್ರಿಪುರಾ ಮೂಲಕ ಗಡಿಪಾರು ಮಾಡಲಾಗುತ್ತಿದೆ.

