HomeBusinessBIG NEWS: ಉದ್ಯೋಗ ಸೃಷ್ಟಿ, ವೇತನ ಏರಿಕೆಯಲ್ಲಿ ದೇಶದಲ್ಲೇ ಬೆಂಗಳೂರಿಗೆ ಮೊದಲ ಸ್ಥಾನ

BIG NEWS: ಉದ್ಯೋಗ ಸೃಷ್ಟಿ, ವೇತನ ಏರಿಕೆಯಲ್ಲಿ ದೇಶದಲ್ಲೇ ಬೆಂಗಳೂರಿಗೆ ಮೊದಲ ಸ್ಥಾನ

ನವದೆಹಲಿ: ದೇಶದ ಉದ್ಯೋಗ ಸೃಷ್ಟಿ ಕೇಂದ್ರಗಳ ಪಟ್ಟಿಯಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಂಗಳೂರು ಮೊದಲ ಸ್ಥಾನ ಪಡೆದುಕೊಂಡಿದೆ. ವೇತನ ಏರಿಕೆಯಲ್ಲಿಯೂ ಬೆಂಗಳೂರು ಉನ್ನತಸ್ಥಾನ ಪಡೆದಿದೆ ಎಂದು ವರದಿ ಎಂದು ಹೇಳಿದೆ.

ಟೀಮ್ ಲೀಸ್ ಬಿಡುಗಡೆ ಮಾಡಿರುವ 2024ನೇ ಸಾಲಿನ ವರದಿಯ ಅನ್ವಯ ಅತಿ ಹೆಚ್ಚಿನ ಉದ್ಯೋಗ ಸೃಷ್ಟಿಯಲ್ಲಿ ದೇಶದಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ. ಚೆನ್ನೈ ಎರಡನೇ ಸ್ಥಾನ, ನವದೆಹಲಿ ಮೂರನೇ ಸ್ಥಾನ ಪಡೆದುಕೊಂಡಿದೆ.

ಬೆಂಗಳೂರಿನಲ್ಲಿ ಉದ್ಯೋಗಿಗಳ ವಾರ್ಷಿಕ ವೇತನ ಏರಿಕೆ ಶೇಕಡ 9.3 ರಷ್ಟು ಇದ್ದು, ಇದು ಕೂಡ ದೇಶದಲ್ಲಿ ಅತಿಹೆಚ್ಚಿನ ಪ್ರಮಾಣವಾಗಿದೆ. ಬೆಂಗಳೂರಿನವರ ಸರಾಸರಿ ಮಾಸಿಕ ಆದಾಯ 29,500 ರೂಪಾಯಿಯಷ್ಟು ಇದ್ದು ಇದು ದೇಶದಲ್ಲಿ ಅತಿ ಹೆಚ್ಚಿನದಾಗಿದೆ. ಎರಡನೇ ಸ್ಥಾನದಲ್ಲಿರುವ ಚೆನ್ನೈ ಉದ್ಯೋಗಿಗಳ ಸರಾಸರಿ ಮಾಸಿಕ ವೇತನ 24.500 ವಾರ್ಷಿಕ ವೇತನ ಏರಿಕೆ ಶೇಕಡ 7.5 ರಷ್ಟು ಇದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular