HomeKarnatakaಬೆಂಗಳೂರಿಗರೇ ಹುಷಾರ್ : ಕುಡಿಯುವ ನೀರು ಪೋಲು ಮಾಡಿದ್ರೆ ಬೀಳುತ್ತೆ 5 ಸಾವಿರ ದಂಡ..!

ಬೆಂಗಳೂರಿಗರೇ ಹುಷಾರ್ : ಕುಡಿಯುವ ನೀರು ಪೋಲು ಮಾಡಿದ್ರೆ ಬೀಳುತ್ತೆ 5 ಸಾವಿರ ದಂಡ..!

ಬೆಂಗಳೂರು : ಬೆಂಗಳೂರಿನಲ್ಲಿ ಕುಡಿಯುವ ನೀರನ್ನು ಪೋಲು ಮಾಡಿದ್ರೆ 5 ಸಾವಿರ ದಂಡ ವಿಧಿಸಲಾಗುತ್ತದೆ ಎಂದು ಜಲಮಂಡಳಿ ಎಚ್ಚರಿಕೆ ನೀಡಿದೆ.

ಕುಡಿಯುವ ನೀರನ್ನು ಇತರೆ ಉದ್ದೇಶಗಳಿಗೆ ಬಳಸುವುದನ್ನು ನಿಷೇಧಿಸಲಾಗಿದ್ದು, ಈ ಆದೇಶ ಲೆಕ್ಕಿಸದೆ ಕುಡಿಯುವ ನೀರನ್ನು ಬೇರೆ ಉದ್ದೇಶಗಳಿಗೆ ಪೋಲು ಮಾಡಿದರೆ ಜಲಮಂಡಳಿ ಕಾಯ್ದೆ 1964ರ ಕಲಂ 109ರ ಅನ್ವಯ ₹ 5 ಸಾವಿರ ದಂಡ ವಿಧಿಸಲಾಗುತ್ತದೆ. ಉಲ್ಲಂಘನೆ ಮರುಕಳಿಸಿದರೆ ₹ 5 ಸಾವಿರ ದಂಡದ ಜೊತೆಗೆ ಪ್ರತಿನಿತ್ಯ ಹೆಚ್ಚುವರಿಯಾಗಿ ₹ 500 ದಂಡ ವಿಧಿಸಲಾಗುವುದು ಎಂದು ಜಲಮಂಡಳಿ ಅಧ್ಯಕ್ಷ ಡಾ.ವಿ. ರಾಮ್ಪ್ರಸಾತ್ ಮನೋಹರ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ನೀರಿನ ಸಮಸ್ಯೆ ಬಿಗಡಾಯಿಸುತ್ತಿದ್ದು, ಹಣ ಕೊಟ್ಟರೂ ನೀರು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಕುಡಿಯುವ ನೀರನ್ನು ಇತರೆ ಉದ್ದೇಶಗಳಿಗೆ ಬಳಸುವುದನ್ನು ನಿಷೇಧಿಸಿದೆ. ಈ ನಿಯಮ ಉಲ್ಲಂಘಿಘಿಸಿದರೆ 5 ಸಾವಿರ ರೂ. ದಂಡ ವಿಧಿಸುವುದಾಗಿಯೂ ಎಚ್ಚರಿಕೆ ನೀಡಿದೆ. ನೀರಿನ ದುರ್ಬಳಕೆ ತಡೆಗಾಗಿ ವಿಧಿಸಿರುವ ನಿರ್ಬಂಧಗಳನ್ನು ಯಾರಾದರೂ ಉಲ್ಲಂಘಿಸುವುದು ಕಂಡು ಬಂದರೆ ಸಾರ್ವಜನಿಕರು 1916 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಬಹುದು

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಯಾವುದಕ್ಕೆ ಕುಡಿಯುವ ನೀರು ಬಳಸುವಂತಿಲ್ಲ?

ಮನೋರಂಜಕವಾಗಿ ಕಾರಂಜಿಯಂತಹ ಆಕರ್ಷಕ ವ್ಯವಸ್ಥೆಗೆ
ವಾಹನಗಳ ಸ್ವಚ್ಛತೆಗೆ
ಕೈದೋಟಕ್ಕೆ
ರಸ್ತೆ ನಿರ್ಮಾಣ, ರಸ್ತೆಗಳ ಸ್ವಚ್ಛತೆ
ಚಿತ್ರಮಂದಿರ/ ಮಾಲ್ಗಳಲ್ಲಿ ಬೇರೆ ಉದ್ದೇಶಕ್ಕೆ.

ರಸ್ತೆ ನಿರ್ಮಾಣ ಮತ್ತು ಸ್ವಚ್ಛತೆಗೆ

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular