HomeKarnatakaಹಾಸ್ಟೇಲ್ ನಲ್ಲಿ ನೀರಿನ ಸಮಸ್ಯೆ; ಬೆಂಗಳೂರು ವಿವಿ ರಸ್ತೆ ತಡೆದು ವಿದ್ಯಾರ್ಥಿನಿಯರ ಪ್ರತಿಭಟನೆ

ಹಾಸ್ಟೇಲ್ ನಲ್ಲಿ ನೀರಿನ ಸಮಸ್ಯೆ; ಬೆಂಗಳೂರು ವಿವಿ ರಸ್ತೆ ತಡೆದು ವಿದ್ಯಾರ್ಥಿನಿಯರ ಪ್ರತಿಭಟನೆ

ಬೆಂಗಳೂರು: ಬೆಂಗಳೂರು ವಿಶ್ವ ವಿದ್ಯಾಲಯದ ವಿದ್ಯಾರ್ಥಿನಿಯರ ಹಾಸ್ಟೇಲ್ ನಲ್ಲಿ ನೀರಿನ ಸಮಸ್ಯೆಯುಂಟಾಗಿದ್ದು, ವಿದ್ಯಾರ್ಥಿನಿಯರು ಬೀದಿಗಿಳಿದು ಹೋರಾಟ ನಡೆಸಿದ್ದಾರೆ.

ಕಳೆದ 2 ವರ್ಷಗಳಿಂದ ಹಾಸ್ಟೇಲ್ ನಲ್ಲಿ ನೀರಿನ ಸಮಸ್ಯೆಯಿದೆ. ಈ ಬಗ್ಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ವಿದ್ಯಾರ್ಥಿನಿಯರು ಕಿಡಿಕಾರಿದ್ದಾರೆ. ಇಂದು ಬೆಂಗಳೂರಿ ವಿವಿ ಜ್ಞಾನಭಾರತಿ ಮುಖ್ಯ ರಸ್ತೆ ತಡೆ ನಡೆಸಿದ ವಿದ್ಯಾರ್ಥಿನಿಯರು ಬಕೆಟ್, ಕೊಡಗಳ ಸಮೇತ ಆಗಮಿಸಿ ರಸ್ತೆಯಲ್ಲಿಯೇ ಕುಳಿತು ಪ್ರತಿಭಟನೆ ನಡೆಸಿದ್ದಾರೆ. ವಾರ್ಡನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿದ್ಯಾರ್ಥಿನಿಯರ ಪ್ರತಿಭಟನೆಯಿಂದಾಗಿ ಜ್ಞಾನಭಾರತಿ ಪ್ರಮುಖ ರಸ್ತೆ ಬಂದ್ ಆಗಿದ್ದು ವಾಹನ ಸಂಚರಾಕ್ಕೆ ಅಡ್ಡಿಯುಂಟಾಗಿದ್ದು, ವಾಹನ್ ಅಸವಾರರು ಪರದಾಡಿದ ಘಟನೆ ನಡೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular