HomeKarnatakaಸಿನಿಮಾ ಸ್ಟೈಲ್ ನಲ್ಲಿ ಕೊಕೇನ್ ಸಾಗಿಸಲು ಹೋಗಿ ಲಾಕ್; 50ಕ್ಕೂ ಹೆಚ್ಚು ಕ್ಯಾಪ್ಸೂಲ್ ನುಂಗಿ ಬಂದಿದ್ದ...

ಸಿನಿಮಾ ಸ್ಟೈಲ್ ನಲ್ಲಿ ಕೊಕೇನ್ ಸಾಗಿಸಲು ಹೋಗಿ ಲಾಕ್; 50ಕ್ಕೂ ಹೆಚ್ಚು ಕ್ಯಾಪ್ಸೂಲ್ ನುಂಗಿ ಬಂದಿದ್ದ ಆರೋಪಿ ಅರೆಸ್ಟ್

ಬೆಂಗಳೂರು: ಸಿನಿಮಾ ಸ್ಟೈಲ್ ನಲ್ಲಿ ಕೊಕೇನ್ ಸಾಗಿಸುತ್ತಿದ್ದ ವಿದೇಶಿ ಪ್ರಜೆಯನ್ನು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.

ಬಂಧಿತನಿಂದ ಬರೋಬ್ಬರಿ 2 ಕೋಟಿ ಮೌಲ್ಯದ ಕೊಕೇನ್ ಜಪ್ತಿ ಮಾಡಲಾಗಿದೆ. ಕೊಕೇನ್ ಅನ್ನು ಕ್ಯಾಪ್ಸೂಲ್ ಮಾದರಿಯಲ್ಲಿ ಸೇವಿಸಿದ್ದ ಭೂಪ. 50ಕ್ಕೂ ಹೆಚ್ಚು ಕ್ಯಾಪ್ಸೂಲ್ ಗಳನ್ನು ಆರೋಪಿ ಸೇವಿಸಿದ್ದು, ತಪಾಸಣೆ ವೇಳೆ ಆರೋಪಿಯನ್ನು ಬಂಧಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇಥಿಯೋಪಿಯಾದಿಂದ ಬೆಂಗಳೂರು ಏರ್ ಪೋರ್ಟ್ ಗೆ ಬಂದಿದ್ದ ಆರೋಪಿ ಅಸಹಜವಾಗಿ ವರ್ತಿಸುತ್ತಿದ್ದ. ಅನುಮಾನಗೊಂಡ ಕಸ್ಟಮ್ಸ್ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದು ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ನಡೆಸಿದ್ದಾರೆ. ಈ ವೇಳೆ ಆತನ ಹೊಟ್ಟೆಯಲ್ಲಿ 50ಕ್ಕೂ ಹೆಚ್ಚು ಕ್ಯಾಪ್ಸೂಲ್ ಗಳು ಪತ್ತೆಯಾಗಿವೆ. ತಕ್ಷಣ ಆತನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

 

For Latest News Updates, Join Our Whatsapp Community🚩
RELATED ARTICLES

Most Popular