HomeKarnatakaBREAKING : ಹನೂರು ಶೂಟೌಟ್ ಬೆನ್ನಲ್ಲೇ ಬಂಡೀಪುರದ ಹೋಮ್ ಸ್ಟೇನಲ್ಲಿ 48 ಜಿಂಕೆ ಕೊಂಬು, ಬಂದೂಕುಗಳು...

BREAKING : ಹನೂರು ಶೂಟೌಟ್ ಬೆನ್ನಲ್ಲೇ ಬಂಡೀಪುರದ ಹೋಮ್ ಸ್ಟೇನಲ್ಲಿ 48 ಜಿಂಕೆ ಕೊಂಬು, ಬಂದೂಕುಗಳು ಪತ್ತೆ.!

ಚಾಮರಾಜನಗರ: ಹನೂರು ಅರಣ್ಯ  ಪ್ರದೇಶದಲ್ಲಿ ನಡೆದ ಶೂಟೌಟ್‌ ಪ್ರಕರಣದ ಬೆನ್ನಲ್ಲೇ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಸಮೀಪದ ಖಾಸಗಿ ಹೋಂಸ್ಟೇಯೊಂದರಲ್ಲಿ ಅಪಾರ ಪ್ರಮಾಣದ ವನ್ಯಜೀವಿ ಅವಶೇಷಗಳು ಹಾಗೂ ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ.

ಗುಂಡ್ಲುಪೇಟೆ ತಾಲೂಕಿನ ಕೆಬ್ಬೇಪುರ ಗ್ರಾಮದ ಸರ್ವೇ ನಂಬರ್‌ 116ರಲ್ಲಿರುವ ಹೋಂಸ್ಟೇನಲ್ಲಿ ರೈತ ಸಂಘದ ಮುಖಂಡರು ಪರಿಶೀಲನೆ ನಡೆಸಿದ ವೇಳೆ ಜಿಂಕೆಗಳ ಕೊಂಬುಗಳು, ನವಿಲುಗರಿಗಳು, ಪ್ರಾಣಿಗಳ ಚರ್ಮ ಸೇರಿದಂತೆ 4 ಗನ್‌ಗಳು, ಒಂದು ರಿವಾಲ್ವರ್‌ ಮತ್ತು ಏರ್‌ಸ್ಪೇಸ್‌ ಪಿಸ್ತೂಲ್‌ ಪತ್ತೆಯಾಗಿವೆ.

ರೈತ ಸಂಘದ ಕಾರ್ಯಕರ್ತರು ನೀಡಿದ ಮಾಹಿತಿ ಮೇರೆಗೆ ಬಂಡೀಪುರದ ಪ್ರಭಾರ ಅರಣ್ಯ ಸಂರಕ್ಷಣಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪತ್ತೆಯಾದ ವಸ್ತುಗಳನ್ನು ಅರಣ್ಯ ಇಲಾಖೆ ವಶಕ್ಕೆ ಪಡೆದುಕೊಂಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೋಂಸ್ಟೇನಲ್ಲಿ ಇಷ್ಟೊಂದು ಪ್ರಮಾಣದ ವನ್ಯಜೀವಿ ಅವಶೇಷಗಳು ಮತ್ತು ಶಸ್ತ್ರಾಸ್ತ್ರಗಳು ಹೇಗೆ ಬಂದವು ಎಂಬ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ರೈತ ಸಂಘದ ಮುಖಂಡರು ಆಗ್ರಹಿಸಿದ್ದಾರೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯವೇ ಇಂತಹ ಘಟನೆಗಳಿಗೆ ಕಾರಣವಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ.ಈ ಪ್ರಕರಣದ ಹಿಂದೆ ಬೇಟೆ ಅಥವಾ ಅಕ್ರಮ ವನ್ಯಜೀವಿ ಚಟುವಟಿಕೆಗಳ ಸಂಪರ್ಕವಿದೆಯೇ ಎಂಬುದನ್ನು ತನಿಖೆಯ ಬಳಿಕವೇ ಖಚಿತಪಡಿಸಬೇಕಾಗಿದೆ.

ಹನೂರು ಶೂಟೌಟ್

ಚಾಮರಾಜನಗರ ಜಿಲ್ಲೆಯ ಹನೂರು ಅರಣ್ಯ ಪ್ರದೇಶದಲ್ಲಿ ಆಗಸ್ಟ್‌ 15ರಂದು ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಅರಣ್ಯಕ್ಕೆ ಪ್ರವೇಶಿಸಿದ್ದ ಮೂವರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಮೂವರು ಮೃತಪಟ್ಟಿದ್ದಾರೆ. ಈ ಘಟನೆ ಇದೀಗ ರಾಜ್ಯಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ.

ಘಟನೆ ಹೇಗಾಯಿತು?
ಕಾವೇರಿ ವನ್ಯಜೀವಿಧಾಮದ ವ್ಯಾಪ್ತಿಯಲ್ಲಿ ಅಕ್ರಮವಾಗಿ ಪ್ರವೇಶಿಸಿದ್ದ ಮೂವರನ್ನು ಅರಣ್ಯ ಸಿಬ್ಬಂದಿ ತಡೆದಿದ್ದಾರೆ. ಅವರ ಬಳಿ ಬಂದೂಕು, ಜಿಂಕೆ ಮಾಂಸ, ಗುಂಡುಗಳು, ಅಡುಗೆ ಸಾಮಗ್ರಿಗಳು ಪತ್ತೆಯಾಗಿದ್ದವು .  ಅರಣ್ಯ ಸಿಬ್ಬಂದಿ ಶರಣಾಗುವಂತೆ ಸೂಚಿಸಿದರೂ ಅವರು ಪ್ರತಿರೋಧ ತೋರಿದ ಹಿನ್ನೆಲೆಯಲ್ಲಿ ಗುಂಡಿನ ದಾಳಿ ನಡೆದಿದೆ ಎಂದು ಸರ್ಕಾರದ ಪರವಾಗಿ ಹೇಳಲಾಗಿದೆ. ಘಟನೆಯಲ್ಲಿ ಮೂವರು ಮೃತಪಟ್ಟಿದ್ದಾರೆ.

ವಿವಾದಕ್ಕೆ ಕಾರಣವೇನು?

ಮೃತರ ಕುಟುಂಬಸ್ಥರು ಹಾಗೂ ಸ್ಥಳೀಯರು ಮೃತರು ಬೇಟೆಗೆ ಹೋಗಿರಲಿಲ್ಲ, ಜಾನುವಾರುಗಳನ್ನು ಹುಡುಕಲು ಅರಣ್ಯಕ್ಕೆ ತೆರಳಿದ್ದರು ಎಂದು ಆರೋಪಿಸಿದ್ದಾರೆ. ಮತ್ತೊಂದೆಡೆ, ಸರ್ಕಾರ ಹಾಗೂ ಅರಣ್ಯ ಇಲಾಖೆ ಅವರು ಬೇಟೆಗೆ ತೆರಳಿದ್ದರು ಎಂಬ ನಿಲುವು ಹೊಂದಿವೆ. ಹೀಗಾಗಿ ಘಟನೆಯ ನಿಜವಾದ ಹಿನ್ನೆಲೆ ಬಗ್ಗೆ ಹಲವು ಪ್ರಶ್ನೆಗಳು ಎದ್ದಿವೆ.

ಘಟನಾ ಸ್ಥಳದಲ್ಲಿ ಶಸ್ತ್ರಾಸ್ತ್ರ, ಮಾಂಸ ಹಾಗೂ ಚಪ್ಪಲಿಗಳು ಪತ್ತೆಯಾಗಿರುವುದು ಕೂಡ ತನಿಖೆಯಲ್ಲಿ ಪ್ರಮುಖ ಅಂಶವಾಗಿದೆ. ಚಪ್ಪಲಿಗಳು ಬಳಕೆಯಾಗದಂತೆ ಕಂಡುಬಂದಿವೆ ಎಂಬ ವಿಚಾರವನ್ನೂ ಮೃತರ ಕುಟುಂಬಸ್ಥರು ಪ್ರಶ್ನಿಸಿದ್ದಾರೆ.

 

 

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular