HomeKarnatakaಶಿವಸೇನೆ ಜತೆ ಕಾಂಗ್ರೆಸ್ ಹೋದ್ರೆ ಕೋಮುವಾದಿ ಅಲ್ಲ, ಬಿಜೆಪಿ ಜತೆ ಜೆಡಿಎಸ್ ಹೋದ್ರೆ ತಪ್ಪಾ…?

ಶಿವಸೇನೆ ಜತೆ ಕಾಂಗ್ರೆಸ್ ಹೋದ್ರೆ ಕೋಮುವಾದಿ ಅಲ್ಲ, ಬಿಜೆಪಿ ಜತೆ ಜೆಡಿಎಸ್ ಹೋದ್ರೆ ತಪ್ಪಾ…?

ಶಿವಸೇನೆ ಜತೆ ಸೇರಿ ಕಾಂಗ್ರೆಸ್ ಸರ್ಕಾರ ಮಾಡಿದರೆ ಕೋಮುವಾದಿ ಅಲ್ಲ, ಆದರೆ, ಬಿಜೆಪಿ ಜತೆ ಜೆಡಿಎಸ್ ಹೋದರೆ ಅದು ತಪ್ಪಾ ಎಂದು ಮಾಜಿ ಸಚಿವ ಬಂಡೆಪ್ಪ ಕಾಶಂಪುರ ಪ್ರಶ್ನಿಸಿದ್ದಾರೆ.

ಚಿಕ್ಕನಾಯಕನಹಳ್ಳಿಯಲ್ಲಿ ಮಾತನಾಡಿದ ಅವರು, ರಾಜ್ಯ ಹಾಗೂ ಪಕ್ಷದ ಹಿತ ದೃಷ್ಟಿಯಿಂದ ಮೈತ್ರಿ ಮಾಡಿಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸೋಲಿಸುವುದೇ ಜೆಡಿಎಸ್ ಗುರಿಯಾಗಿದೆ. ನಾವು ಯಾವತ್ತೂ ಜಾತ್ಯತೀತರೇ. ಜಾತ್ಯತೀತ ಬಿಟ್ಟು ಬೇರೆ ಕಡೆ ಹೋಗಲ್ಲ. ಇಡೀ ದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಹಿಷ್ಕರಿಸಿದ್ದಾರೆ. 135 ಸೀಟು ಬಂದಿದ್ದಕ್ಕೆ ಇಲ್ಲಿ ಅವರ ಗತ್ತು ನಡವಳಿಕೆ ಬದಲಾಗಿದೆ. ಒಳ್ಳೆಯ ಆಡಳಿತ ಕೊಡುವುದನ್ನು ಬಿಟ್ಟು ಬೇರೆ ಕಡೆ ಗಮನ ಕೊಡುತ್ತಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಜನರು ಸರಿಯಾದ ಪಾಠ ಕಲಿಸುತ್ತಾರೆ ಎಂದು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular