HomeInternationalಮತ್ತೊಂದು ರಾಷ್ಟ್ರದಿಂದ 15 ವರ್ಷದೊಳಗಿನ ಮಕ್ಕಳಿಗೆ ಸೋಶಿಯಲ್ ಮೀಡಿಯಾ ಬ್ಯಾನ್

ಮತ್ತೊಂದು ರಾಷ್ಟ್ರದಿಂದ 15 ವರ್ಷದೊಳಗಿನ ಮಕ್ಕಳಿಗೆ ಸೋಶಿಯಲ್ ಮೀಡಿಯಾ ಬ್ಯಾನ್

ಮಕ್ಕಳ ಮೊಬೈಲ್ ಗೀಳು ಬಿಡಿಸುವುದು ಈಗ ವಿವಿಧ ರಾಷ್ಟ್ರಗಳಲ್ಲಿ ಈಗ ಸವಾಲಿನ ಕೆಲಸವಾಗಿದೆ. ಆದ್ದರಿಂದ 15 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣದ ಬಳಕೆ ನಿಷೇಧಿಸುವ ಪ್ರಸ್ತಾವನೆ ಇದೆ. ಹಲವು ರಾಷ್ಟ್ರಗಳಲ್ಲಿ ಇದನ್ನು ಈಗಾಗಲೇ ಜಾರಿಗೆ ತರಲಾಗಿದೆ.

ಈಗ ಮತ್ತೊಂದು ರಾಷ್ಟ್ರ ಇಂತಹ ಪ್ರಯತ್ನದತ್ತ ಹೆಜ್ಜೆ ಹಾಕಿದೆ. “ಮುಂದಿನ ಶಾಲಾ ವರ್ಷದ ಆರಂಭದಲ್ಲಿ ಸೆಪ್ಟೆಂಬರ್‌ನಲ್ಲಿಯೇ 15 ವರ್ಷದೊಳಗಿನ ಮಕ್ಕಳ ಸಾಮಾಜಿಕ ಮಾಧ್ಯಮದ ಮೇಲಿನ ನಿಷೇಧವು ಜಾರಿಗೆ ಬರಬಹುದು” ಎಂದು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಹೇಳಿದ್ದಾರೆ.

“ಸರ್ಕಾರವು ಈ ಕುರಿತು ಕಾನೂನು ಪ್ರಕ್ರಿಯೆಯು ವೇಗವಾಗಿ ನಡೆಯುತ್ತಿದೆ ಎಂದು ಖಚಿತಪಡಿಸಿಕೊಳ್ಳುತ್ತಿದೆ” ಎಂದು ಅಧ್ಯಕ್ಷರು ಹೇಳಿದ್ದಾರೆ. ಈ ಕುರಿತ ವಿಡಿಯೋವನ್ನು ಫ್ರೆಂಚ್ ಪ್ರಸಾರಕ ಬಿಎಫ್ಎಂ ಟಿವಿ ಶನಿವಾರ ತಡರಾತ್ರಿ ಬಿಡುಗಡೆ ಮಾಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ವಿಡಿಯೋದಲ್ಲಿ ಮ್ಯಾಕ್ರೋನ್ ಅವರು, “ಸರ್ಕಾರವನ್ನು ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಸೂಚಿಸಲಾಗಿದೆ. ಇದರಿಂದಾಗಿ ಪ್ರಸ್ತಾವಿತ ಕಾನೂನು ಸಾಧ್ಯವಾದಷ್ಟು ಬೇಗ ಜಾರಿಯಾಗಬಹುದು ಮತ್ತು ಇದಕ್ಕೂ ಮೊದಲು ಸರಿಯಾದ ಸಮಯಕ್ಕೆ ಸೆನೆಟ್ ಅಂಗೀಕರಿಸಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

“ನಮ್ಮ ಮಕ್ಕಳು ಮತ್ತು ಹದಿಹರೆಯದವರ ಮೆದುಳು ಮಾರಾಟಕ್ಕೆ ಇಲ್ಲ. ಅವರ ಭಾವನೆಗಳು ಮಾರಾಟದ ವಸ್ತುವಲ್ಲ. ಅಮೆರಿಕ ಅಥವ ಚೀನಾದ ಪ್ಲಾಟ್‌ಫಾರ್ಮ್‌ಗಳಿಗೆ ಅವುಗಳನ್ನು ಮಾರಾಟ ಮಾಡುವುದಿಲ್ಲ” ಎಂದು ಹೇಳಿದ್ದಾರೆ.

“ಸರ್ಕಾರವು 15 ವರ್ಷದೊಳಗಿನವರನ್ನು ಸಾಮಾಜಿಕ ಮಾಧ್ಯಮದಿಂದ ನಿಷೇಧಿಸುವುದನ್ನು ಗಂಭೀರವಾಗಿ ಪರಿಗಣಿಸುತ್ತದೆ. ಇದು ಮಕ್ಕಳನ್ನು ಹಾನಿಕಾರಕ ವಿಷಯಗಳಿಂದ ಮತ್ತು ಅತಿಯಾದ ಸ್ಕ್ರೀನ್ ಸಮಯದಿಂದ ರಕ್ಷಿಸಲು ರಚಿಸಲಾದ ಕಾನೂನು ಆಗಿದ್ದು, ಅದನ್ನು ಇನ್ನಷ್ಟು ಬಿಗಿಯಾಗಿ ಜಾರಿಗೊಳಿಸಬೇಕಿದೆ” ಎಂದು ತಿಳಿಸಿದ್ದಾರೆ.

ಫ್ರಾನ್ಸ್ ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ಇಬ್ಬರು ಹದಿಹರೆಯದವರಲ್ಲಿ ಒಬ್ಬರು ದಿನಕ್ಕೆ 2-5 ಗಂಟೆಗಳ ಕಾಲ ಸ್ಮಾರ್ಟ್‌ಫೋನ್‌ನಲ್ಲಿ ಸಮಯ ಕಳೆಯುತ್ತಾರೆ. ಡಿಸೆಂಬರ್‌ನಲ್ಲಿ ಪ್ರಕಟವಾದ ವರದಿಯಲ್ಲಿ 12ರಿಂದ 17 ವರ್ಷದೊಳಗಿನ ಶೇ 90 ಪ್ರತಿಶತ ಮಕ್ಕಳು ಅಂತರ್ಜಾಲ ಪ್ರವೇಶಿಸಲು ಪ್ರತಿದಿನ ಸಾರ್ಟ್‌ಪೋನ್ ಬಳಕೆ ಮಾಡುತ್ತಾರೆ ಎಂದು ಉಲ್ಲೇಖಿಸಲಾಗಿದೆ.

ಶೇ 58 ಪ್ರತಿಶತದಷ್ಟು ಜನರು ಸಾಮಾಜಿಕ ಜಾಲತಾಣಗಳಿಗಾಗಿ ತಮ್ಮ ಫೋನ್ ಬಳಕೆ ಮಾಡುತ್ತಾರೆ. ಮಕ್ಕಳು ಮಾದಕವಸ್ತು ಬಳಕೆ ಮತ್ತು ಆತ್ಮಹತ್ಯೆಯಂತಹ ಅಪಾಯಕಾರಿ ನಡವಳಿಕೆಗಳಿಗೆ ಸಂಬಂಧಿಸಿದ ವಿಷಯಗಳಿಗೆ ಹೆಚ್ಚು ಒಗ್ಗಿಕೊಳ್ಳಲು ಸಾಮಾಜಿಕ ಜಾಲತಾಣಗಳ ಬಳಕೆಯೇ ಕಾರಣ ಎಂದು ಉಲ್ಲೇಖಿಸಲಾಗಿದೆ.

ಫ್ರಾನ್ಸ್‌ನ ಹಲವಾರು ಕುಟುಂಬಗಳು ಹದಿಹರೆಯದವರ ಆತ್ಮಹತ್ಯೆ, ಹಾನಿಕಾರಕ ವಿಷಯಗಳ ವೀಕ್ಷಣೆಗೆ ಟಿಕ್‌ಟಾಕ್ ಕಾರಣ ಎಂದು ಅದರ ವಿರುದ್ಧ ಮೊಕದ್ದಮೆ ಹೂಡಿದ್ದಾರೆ. ನಾವು 15 ವರ್ಷದೊಳಗಿನವರಿಗೆ ಸಾಮಾಜಿಕ ಮಾಧ್ಯಮವನ್ನು ನಿಷೇಧಿಸುತ್ತಿದ್ದೇವೆ ಮತ್ತು ನಮ್ಮ ಮೊಬೈಲ್ ಫೋನ್‌ಗಳ ಮೇಲೆ ಇನ್ನೂ ಹೆಚ್ಚಿನ ನಿಷೇಧವನ್ನು ವಿಧಿಸುತ್ತಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಹದಿಹರೆಯದವರು, ಕುಟುಂಬಗಳು, ಶಿಕ್ಷಕರು ನಾವು ಸ್ಪಷ್ಟವಾದ ಹಾದಿಯಲ್ಲಿ ಮುಂದೆ ಸಾಗುತ್ತಿದ್ದೇವೆ. ಆಸ್ಟ್ರೇಲಿಯಾದಲ್ಲಿ 16 ವರ್ಷದೊಳಗಿನವರು ಸಾಮಾಜಿಕ ಜಾಲತಾಣಗಳ ಬಳಕೆ ನಿಷೇಧಿಸಲಾಗಿದೆ. ಮಕ್ಕಳಿಗೆ ಸೇರಿದವು ಎಂದು ಗುರುತಿಸಲಾದ ಸುಮಾರು 47 ಲಕ್ಷ ಖಾತೆಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಕಾನೂನು ಆಸ್ಟ್ರೇಲಿಯಾದಲ್ಲಿ ತಂತ್ರಜ್ಞಾನ ಬಳಕೆ, ಗೌಪ್ಯತೆ, ಮಕ್ಕಳ ಸುರಕ್ಷತೆ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಭಾರೀ ಚರ್ಚೆಗಳನ್ನು ಹುಟ್ಟು ಹಾಕಿತು ಮತ್ತು ಇತರ ದೇಶಗಳನ್ನು ಇದೇ ರೀತಿಯ ಕ್ರಮಗಳನ್ನು ಪರಿಗಣಿಸಲು ಪ್ರೇರೇಪಿಸಿದೆ ಎಂದು ಹೇಳಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular