HomeLatest NewsBig Update: ಜಿಬಿಎ ಚುನಾವಣೆಗೆ ಬ್ಯಾಲೆಟ್ ಪೇಪರ್ ಬಳಕೆ

Big Update: ಜಿಬಿಎ ಚುನಾವಣೆಗೆ ಬ್ಯಾಲೆಟ್ ಪೇಪರ್ ಬಳಕೆ

ಕಾಂಗ್ರೆಸ್‌ ವೋಟ್ ಚೋರಿ ಬಗ್ಗೆ ದೇಶಾದ್ಯಂತ ಧ್ವನಿ ಎತ್ತಿದೆ. ಪಕ್ಷ ಅಧಿಕಾರದಲ್ಲಿರುವ ರಾಜ್ಯವಾದ ಕರ್ನಾಟಕದಲ್ಲಿ ಮತದಾನಕ್ಕೆ ಇವಿಎಂ ಬದಲು ಬ್ಯಾಲೆಟ್ ಪೇಪರ್ ಬಳಕೆ ಮಾಡಲಾಗುತ್ತದೆ. ಈ ತೀರ್ಮಾನದ ಕುರಿತು ಈಗ ಪರ-ವಿರೋಧ ಚರ್ಚೆಗಳು ಪ್ರಾರಂಭವಾಗಿದೆ.

ಹೌದು, ಬಿಬಿಎಂಪಿಯನ್ನು ಗ್ರೇಟರ್ ಬೆಂಗಳೂರು ಅಥಾರಿಟಿ (ಬಿಬಿಎಂಪಿ) ಎಂದು ಬದಲಾವಣೆ ಮಾಡಿ 369 ವಾರ್ಡ್‌ಗಳಾಗಿ ಮಾಡಲಾಗಿದೆ. 5 ನಗರ ಪಾಲಿಕೆಯಾಗಿ ಬದಲಾವಣೆ ಮಾಡಿರುವ ರಾಜ್ಯ ಸರ್ಕಾರ ಈಗ ಸುಪ್ರೀಂಕೋರ್ಟ್‌ ನಿರ್ದೇಶದಂತೆ ಜೂನ್ ಅಂತ್ಯದೊಳಗೆ ಜಿಬಿಎ ಚುನಾವಣೆ ನಡೆಸಬೇಕಿದೆ.

ಈಗ ಚುನಾವಣೆಗೆ ತಯಾರಿ ಪ್ರಾರಂಭಿಸಲಾಗಿದೆ. ಜಿಬಿಎ ಚುನಾವಣಾ ವಿಶೇಷ ಆಯುಕ್ತರು ಬ್ಯಾಲೆಟ್ ಪೇಪರ್ ಬಳಕೆ ಮಾಡುವ ಕುರಿತು ಮಾಹಿತಿ ನೀಡಿದ್ದಾರೆ. ಅಕ್ಟೋಬರ್ 1, 2025ಅನ್ನು ಆಧಾರವಾಗಿಟ್ಟುಕೊಂಡು ಕರಡು ಮತದಾರರ ಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ಅದನ್ನು ಬಿಡುಗಡೆ ಮಾಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಚುನಾವಣೆಯನ್ನು ಬ್ಯಾಲೆಟ್ ಪೇಪರ್, ಮತಯಂತ್ರದ ಮೂಲಕ ನಡೆಸಬೇಕೆ? ಎಂದು ಚುನಾವಣಾ ಆಯೋಗವು ತೀರ್ಮಾನಿಸುತ್ತದೆ. ಈಗ ಜಿಬಿಎ ಚುನಾವಣೆಯನ್ನು  ಬ್ಯಾಲೆಟ್ ಪೇಪರ್‌ಗಳ ಮೂಲಕ ನಡೆಸಲು ನಿರ್ಧರಿಸಲಾಗಿದ್ದು, ಈ ಕುರಿತು ಪರ-ವಿರೋಧ ಚರ್ಚೆಗಳು ಪ್ರಾರಂಭವಾಗಿವೆ.

ಜಿಬಿಎ ಚುನಾವಣೆಗೆ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಮೇ 25ರ ನಂತರ ಚುನಾವಣೆ ನಡೆಯುವ ಸಾಧ್ಯತೆ ಇದೆ. ಮತಪತ್ರಗಳ ಬಳಕೆಗೆ ಚುನಾವಣಾ ಆಯೋಗವು ಹಲವು ಕಾರಣಗಳನ್ನು ನೀಡಿದೆ. ಅಲ್ಲದೇ ಬ್ಯಾಲೆಟ್ ಪೇಪರ್‌ಗಳನ್ನು ಬಳಸಬಾರದು ಎಂದು ಸುಪ್ರೀಂಕೋರ್ಟ್ ಸಹ ಹೇಳಿಲ್ಲ.

ಸಾಮಾನ್ಯವಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಇವಿಎಂ ಬಳಕೆ ಮಾಡುತ್ತಿಲ್ಲ. ಸುಲಭವಾಗಿ ಮತದಾನ ಮಾಡಲು, ಎಣಿಕೆ ಮಾಡಲು ಅನುಕೂಲವಾಗುವಂತೆ ಇವಿಎಂ ಬಳಕೆ ಮಾಡಲಾಗುತಿತ್ತು. ಆದರೆ ಈಗ ಬೆಂಗಳೂರು ನಗರದ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ ಮಾಡುವುದಾಗಿ ಆಯೋಗ ಹೇಳಿದ್ದು, ಚರ್ಚೆಗೆ ಕಾರಣವಾಗಿದೆ.

ಕಾಂಗ್ರೆಸ್ ಪಕ್ಷ ಇವಿಎಂ, ವೋಟ್ ಚೋರಿ ಕುರಿತು ನಿರಂತರವಾಗಿ ಆರೋಪಗಳನ್ನು ಮಾಡುತ್ತಿದೆ. ಇದನ್ನು ಆಯೋಗವು ತಳ್ಳಿ ಹಾಕುತ್ತಲೇ ಬಂದಿದೆ. ಆದರೆ ಈಗ ಕಾಂಗ್ರೆಸ್ ಆಡಳಿತ ಇರುವ ರಾಜ್ಯದ ರಾಜಧಾನಿಯ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ ಮಾಡುತ್ತಿರುವುದು ಏಕೆ? ಎಂದು ಪ್ರಶ್ನೆ ಮಾಡಲಾಗುತ್ತಿದೆ.

ಈ ಹಿಂದೆ ನಡೆದ ಬಿಬಿಎಂಪಿ ಚುನಾವಣೆಗಳಲ್ಲಿ ಇವಿಎಂ ಬಳಸಲಾಗಿತ್ತು. ಈಗ ಬಿಬಿಎಂಪಿಯನ್ನು ಜಿಬಿಎ ಎಂದು ಬದಲಾವಣೆ ಮಾಡಿ 5 ನಗರ ಪಾಲಿಕೆಯಾಗಿ ಮಾಡಲಾಗಿದ್ದು, ಬ್ಯಾಲೆಟ್ ಪೇಪರ್ ಬಳಕೆ ಏಕೆ? ಎಂಬುದು ಸದ್ಯ ಚರ್ಚೆಯ ವಿಚಾರವಾಗಿದೆ.

ಒಟ್ಟು ಎಷ್ಟು ಮತದಾರರು?: ಜಿಬಿಎ ಚುನಾವಣೆಗೆ ಸದ್ಯ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಅಂಕಿ-ಅಂಶಗಳ ಪ್ರಕಾರ ಜಿಬಿಎ ವ್ಯಾಪ್ತಿಯ 5 ನಗರ ಪಾಲಿಕೆಗಳಲ್ಲಿ ಒಟ್ಟು 88,91,411 ಮತದಾರರು ಇದ್ದಾರೆ.

ಇವರಲ್ಲಿ 45,69,193 ಪುರುಷ ಮತದಾರರು. 43,20,583 ಮಹಿಳಾ ಮತದಾರರು ಹಾಗೂ 1,635 ಇತರರು. ಮತದಾರರ ಪಟ್ಟಿಗೆ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದ್ದು, ಆಕ್ಷೇಪಣೆಗಳ ಬಳಿಕ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ.

ಐದು ನಗರ ಪಾಲಿಕೆ ವ್ಯಾಪ್ತಿಯನ್ನು ನೋಡಿದರೆ ಬೆಂಗಳೂರು ಕೇಂದ್ರ (63 ವಾರ್ಡ್) ಮತದಾರರು 14,25,483. ಬೆಂಗಳೂರು ಉತ್ತರ  (72 ವಾರ್ಡ್) ಮತದಾರರು-19,54,206. ಬೆಂಗಳೂರು ದಕ್ಷಿಣ (72 ವಾರ್ಡ್) ಮತದಾರರು-1744270 ಆಗಿದ್ದಾರೆ.

ಹಾಗೆಯೇ ಬೆಂಗಳೂರು ಪೂರ್ವ ಪಾಲಿಕೆಯಲ್ಲಿ 50 ವಾರ್ಡ್‌ ಇದ್ದು, ಮತದಾರರು 10,41,738. ಬೆಂಗಳೂರು ಪಶ್ಚಿಮ (112) ವಾರ್ಡ್‌ ಇದ್ದು, ಮತದಾರರು 27,25,714 ಇದ್ದಾರೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಆಡಳಿತವಿದೆ. ರಾಜ್ಯ ರಾಜಧಾನಿ ಬೆಂಗಳೂರು ನಗರದ ಆಡಳಿತವನ್ನು ಪಡೆಯುವ ಮೂಲಕ 2028ರ ಚುನಾವಣೆಗೆ ತಯಾರಿ ನಡೆಸಲು ಕಾಂಗ್ರೆಸ್ ತಂತ್ರ ರೂಪಿಸುತ್ತಿದೆ. ಮುಂಬೈ ಮಾದರಿಯಲ್ಲಿ ಬೆಂಗಳೂರು ನಮ್ಮ ಕೈವಶವಾಗಲಿದೆ ಎಂದು ಬಿಜೆಪಿ ನಾಯಕರು ಉತ್ಸಾಹದಲ್ಲಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular