HomeIndiaBIG NEWS: ಬಲೂನ್ ಗೆ ಗ್ಯಾಸ್ ತುಂಬಿಸಲು ಬಳಸುತ್ತಿದ್ದ ಸಿಲಿಂಡರ್ ಸ್ಫೋಟ; ಓರ್ವ ದುರ್ಮರಣ, 9...

BIG NEWS: ಬಲೂನ್ ಗೆ ಗ್ಯಾಸ್ ತುಂಬಿಸಲು ಬಳಸುತ್ತಿದ್ದ ಸಿಲಿಂಡರ್ ಸ್ಫೋಟ; ಓರ್ವ ದುರ್ಮರಣ, 9 ಮಕ್ಕಳಿಗೆ ಗಾಯ

ಲಾತೂರ್: ಬಲೂನ್ ಗೆ ಗ್ಯಾಸ್ ತುಂಬಲು ಬಳಸುತ್ತಿದ್ದ ಸಿಲಿಂಡರ್ ಸ್ಫೊಟಗೊಂಡು ಓರ್ವ ಸಾವನ್ನಪ್ಪಿದ್ದು, 9 ಮಕ್ಕಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ಲಾತೂರ್ ನಲ್ಲಿ ನಡೆದಿದೆ.

ಗಾಯಾಳು 9 ಮಕ್ಕಳಲ್ಲಿ ಓರ್ವ ಮಗುವಿನ ಸ್ಥಿತಿ ಚಿಂತಾಜನಕವಾಗಿದೆ. ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಲಾತೂರ್ ನ ತವರ್ಜಾ ಕಾಲೋನಿಯಲ್ಲಿರುವ ಮಸೀದಿ ಹೊರ ಭಾಗದಲ್ಲಿ ವ್ಯಕ್ತಿಯೊಬ್ಬ ಬಲೂನ್ ಮಾರಾಟ ಮಾಡುತ್ತಿದ್ದ. ಆತನ ಸುತ್ತಲು ಮಕ್ಕಳು ನೆರೆದಿದ್ದರು. ಮಕ್ಕಳು ಗಲಾಟೆ ಮಾಡುತ್ತಿದ್ದುದರಿಂದ ಮಸೀದಿಯಲ್ಲಿದ್ದವರು ಬಲೂನ್ ವ್ಯಾಪಾರಿ ರಾಮ ನಾಮದೇವ್ ನನ್ನು ಬೇರೆಡೆ ತೆರಳುವಂತೆ ಸೂಚಿಸಿದ್ದರು. ಇದರಿಂದ ಆತನನ್ನು ಮಕ್ಕಳು ಹಿಂಬಾಲಿಸಿಕೊಂಡು ಹೋಗಿದ್ದರು. ಈ ವೇಳೆ ಏಕಾಏಕಿ ಸ್ಫೋಟದ ಶಬ್ಧ ಕೇಳಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸ್ಥಳಕ್ಕೆ ಬಂದು ನೋಡುವಷ್ಟರಲ್ಲಿ ಬಲೂನ್ ಗೆ ಅನಿಲ ತುಂಬುತ್ತಿದ್ದ ಸಿಲಿಂಡರ್ ಸ್ಫೋಟಗೊಂಡಿದ್ದು ಗೊತ್ತಾಗಿದೆ. ಘಟನೆಯಲ್ಲಿ ವ್ಯಕ್ತಿಯೋರ್ವ ಸಾವನ್ನಪ್ಪಿದ್ದು, 9 ಮಕ್ಕಳು ಗಾಯಗೊಂಡಿದ್ದಾರೆ.

 

For Latest News Updates, Join Our Whatsapp Community🚩
RELATED ARTICLES

Most Popular