HomeLatest Newsಬಳ್ಳಾರಿ ಬ್ಯಾನರ್ ಗಲಾಟೆ: ವರ್ಗಾವಣೆ ಆದೇಶ ರದ್ದುಪಡಿಸಿ ಚಂದ್ರಕಾಂತ್ ನಂದಾರೆಡ್ಡಿಯನ್ನೇ ಡಿವೈಎಸ್ ಪಿಯಾಗಿ ಮುಂದುವರೆಸಿದ ಸರ್ಕಾರ

ಬಳ್ಳಾರಿ ಬ್ಯಾನರ್ ಗಲಾಟೆ: ವರ್ಗಾವಣೆ ಆದೇಶ ರದ್ದುಪಡಿಸಿ ಚಂದ್ರಕಾಂತ್ ನಂದಾರೆಡ್ಡಿಯನ್ನೇ ಡಿವೈಎಸ್ ಪಿಯಾಗಿ ಮುಂದುವರೆಸಿದ ಸರ್ಕಾರ

ಬಳ್ಳಾರಿ: ಬಳ್ಳಾರಿಯಲ್ಲಿ ನಡೆದಿದ್ದ ಬ್ಯಾನರ್ ಗಲಾಟೆ-ಫೈರಿಂಗ್ ಪ್ರಕರಣದ ಬೆನ್ನಲ್ಲೇ ವರ್ಗಾವಣೆ ಮಾಡಲಾಗಿದ್ದ ಡಿವೈಎಸ್ ಪಿ ಚಂದ್ರಕಾಂತ್ ನಂದಾರೆಡ್ಡಿ ಅವರನ್ನು ರಾಜ್ಯ ಸರ್ಕಾರ ಇದೀಗ ಮತ್ತೆ ಮುಂದುವರಿಕೆ ಮಾಡಿದೆ.

ಡಿವೈ ಎಸ್ ಪಿ ನಂದಾರೆಡ್ಡಿ ಅವರಗಾವಣೆ ಆದೇಶವನ್ನು ದುಢೀರ್ ರದ್ದುಗೊಳಿಸಿದ್ದು, ಬಳ್ಳಾರಿ ಡಿವೈಎಸ್ ಪಿಯಾಗಿ ಅವರನ್ನೇ ಮುಂದುವರೆಸಿದೆ. ಸರ್ಕಾರದ ಈ ನಡುವೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಬಳ್ಳಾರಿ ಗಲಾಟೆ ನಡೆದ ಮರುದಿನವೇ ರಾಜ್ಯ ಸರ್ಕಾರ ನೂತನ ಎಸ್ ಪಿ ಪವನ್ ನಜ್ಜೂರ್ ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು. ಡಿಐಜಿಯಾಗಿದ್ದ ವರ್ತಿಕಾ ಕಟಿಯಾರ್ ಅವರನ್ನೂ ವರ್ಗಾವಣೆ ಮಾಡಲಾಗಿತ್ತು. ಇದಾದ ಬಳಿಕ ಡಿವೈ ಎಸ್ ಪಿ ಚಂದ್ರಕಾಂತ್ ನಂದಾರೆಡ್ಡಿ ಅವರನ್ನು ಸ್ಥಳ ನಿಯೋಜನೆ ಮಾಡದೇ ದಿಢೀರ್ ವರ್ಗಾವಣೆ ಮಾಡಿ ಆದೇಶ ಹೊರಡಿಸಿಸಲಾಗಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಡಿವೈ ಎಸ್ ಪಿ ಚಂದ್ರಕಾಂತ್ ನಂದಾರೆಡ್ಡಿ ಅವರ ಜಾಗಕ್ಕೆ ಐಪಿಎಸ್ ಅಧಿಕಾರಿ ಯಶ್ ಕುಮಾರ್ ಶರ್ಮಾ ಅವರನ್ನು ನೇಮಕ ಮಾಡಲಾಗಿತ್ತು. ಯಶ್ ಕುಮಾರ್ ಶರ್ಮಾ ಅವರು ಅಧಿಕಾರ ಸ್ವೀಕರಿಸುವ ಮುನ್ನವೇ ಸರ್ಕಾರ ಅವರನ್ನು ವಾಪಸ್ ಕರೆಸಿಕೊಂಡಿದೆ. ಇದರಿಂದ ಅಧಿಕಾರ ಸ್ವೀಕರಿಸಲು ಬಳ್ಳಾರಿಗೆ ಬಂದಿದ್ದ ಯಶ್ ಕುಮಾರ್ ಶರ್ಮಾ ಚಾರ್ಜ್ ವಹಿಸಿಕೊಳ್ಳದೇ ವಾಪಸ್ ತೆರಳಬೇಕಾಗಿದೆ.

ವರ್ಗಾವಣೆ ಮಾಡಿದ್ದ ಡಿವೈ ಎಸ್ ಪಿ ಚಂದ್ರಕಾಂತ್ ನಂದಾರೆಡ್ಡಿ ಅವರನ್ನೇ ಸರ್ಕಾರ ಮತ್ತೆ ಮುಂದುವರೆಸಿದೆ. ಬಳ್ಳಾರಿ ಗಲಾಟೆಗೆ ಪೊಲೀಸ್ ವೈಫಲ್ಯ ಕಾರಣ ಎಂದು ಎಡಿಜಿಪಿ ಹಿತೇಂದ್ರ ವರದಿ ಬೆನ್ನಲ್ಲೇ ಡಿವೈಎಸ್ ಪಿ ನಂದಾರೆಡ್ಡಿಯನ್ನು ವರ್ಗಾವಣೆ ಮಾಡಿದ್ದ ಸರ್ಕಾರ ಇದೀಗ ಮತ್ತೆ ಅವರನ್ನೇ ಮುಂದುವರೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular