HomeLatest NewsBREAKING: ಬಳ್ಳಾರಿ ಗಲಾಟೆ ಪ್ರಕರಣ: ಬಿಜೆಪಿ ಪಾದಯಾತ್ರೆ ಇಲ್ಲ, ಸಮಾವೇಶ ಮಾಡುತ್ತೇವೆ ಎಂದ ಆರ್.ಅಶೋಕ್

BREAKING: ಬಳ್ಳಾರಿ ಗಲಾಟೆ ಪ್ರಕರಣ: ಬಿಜೆಪಿ ಪಾದಯಾತ್ರೆ ಇಲ್ಲ, ಸಮಾವೇಶ ಮಾಡುತ್ತೇವೆ ಎಂದ ಆರ್.ಅಶೋಕ್

ಮೈಸೂರು: ಬಳ್ಳಾರಿಯಲ್ಲಿ ಬ್ಯಾನರ್ ಕಟ್ಟುವ ವಿಚಾರವಾಗಿ ನಡೆದ ಗಲಾಟೆ-ಫೈರಿಂಗ್ ಪ್ರಕರಣದ ಬೆನ್ನಲ್ಲೇ ವಿಪಕ್ಷ ಬಿಜೆಪಿ ಸರ್ಕಾರದ ವಿರುದ್ಧ ನಡೆಸಲು ಸಿದ್ಧತೆ ನಡೆಸಿದ್ದ ಪಾದಯಾತ್ರೆ ಪ್ಲಾನ್ ಕೊನೇ ಕ್ಷಣದಲ್ಲಿ ರದ್ದಾಗಿದೆ. ಬಳ್ಳಾರಿ ಗಲಾಟೆ ವಿಚಾರವಾಗಿ ಪಾದಯಾತ್ರೆ ಇಲ್ಲ, ಸಮಾವೇಶ ಮಾಡುತ್ತೇವೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಆರ್.ಅಶೋಕ್, ಬಳ್ಳಾರಿ ಗಲಾಟೆ ವಿಚಾರವಾಗಿ ಪಾದಯಾತ್ರೆ ಮಾಡುವುದಿಲ್ಲ. ಬಿಜೆಪಿಯಿಂದ ಸಮಾವೇಶ ನಡೆಸಲಾಗುವುದು. ಬಳ್ಳಾರಿಯಲ್ಲಿ ಜನವರಿ 17 ರಂದು ಸಮಾವೇಶ ನಡೆಸುತ್ತೇವೆ ಎಂದು ತಿಳಿಸಿದರು.

ಮೈಸೂರಿನಲ್ಲಿ ಜನವರಿ 31 ರಂದು ಡ್ರಗ್ಸ್ ವಿರುದ್ಧ ಸಮಾವೇಶ ನಡೆಸುತ್ತೇವೆ. ಗೃಹಲಕ್ಷ್ಮೀ ಯೋಜನೆ ವಿರುದ್ಧ ಹುಬ್ಬಳ್ಳಿಯಲ್ಲಿ ಸಮಾವೇಶ ನಡೆಸುತ್ತೇವೆ. ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟಕ್ಕೆ ಬಿಜೆಪಿ ಯೋಜನೆ ಸಿದ್ಧವಾಗಿದೆ ಎಂದು ತಿಳಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಶ್ರೀರಾಮುಲು ಹಾಗೂ ಜನಾರ್ಧನ ರೆಡ್ಡಿ ಒಂದಾಗಿದ್ದಾರೆ. ಹೀಗಾಗಿ ಕಾಂಗ್ರೆಸ್ ನಿಂದ ಇಂಥಹ ಘತನೆಗಳು ನಡೆದಿವೆ. ಬಳ್ಳಾರಿ ಗಲಾಟೆ-ಫೈರಿಂಗ್ ಪ್ರಕರಣದಲ್ಲಿ ಬುಲೆಟ್ ಕಾಂಗ್ರೆಸ್ ಪಕ್ಷದವರದ್ದು, ಗನ್ ಕೂಡ ಅವರದ್ದೇ. ಬುಲೆಟ್ ಹೊಡೆದಿದ್ದೂ ಕಾಂಗ್ರೆಸ್ ನವರೇ. ಪ್ರಾಣ ಹೋಗಿದ್ದೂ ಅವರದೇ ಕಾರ್ಯಕರ್ತನದ್ದು ಎಂದು ವಾಗ್ದಾಳಿ ನಡೆಸಿದ್ದಾರೆ

For Latest News Updates, Join Our Whatsapp Community🚩
RELATED ARTICLES

Most Popular