HomeKarnatakaಬಾಗಲಕೋಟೆ ಉಪ ಚುನಾವಣೆ: ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳ ಪ್ಲಸ್, ಮೈನಸ್

ಬಾಗಲಕೋಟೆ ಉಪ ಚುನಾವಣೆ: ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳ ಪ್ಲಸ್, ಮೈನಸ್

ಹೆಚ್.ವೈ.ಮೇಟಿ ನಿಧನದ ಕಾರಣ ಬಾಗಲಕೋಟೆ ಕ್ಷೇತ್ರದ ಉಪ ಚುನಾವಣೆ ಎದುರಾಗಿದೆ. ಏಪ್ರಿಲ್ 9ರಂದು ನಡೆಯುವ ಚುನಾವಣೆಗೆ ನಾಮಪತ್ರ ಸಲ್ಲಿಕೆ ಅಂತ್ಯಗೊಂಡಿದೆ. ನಾಮಪತ್ರ ವಾಪಸ್ ಪಡೆಯಲು ಗುರುವಾರ ಕಡೆ ದಿನ, ಚುನಾವಣಾ ಫಲಿತಾಂಶ ಮೇ 4ರಂದು ಪ್ರಕಟವಾಗಲಿದೆ.

ಬಾಗಲಕೋಟೆ ಕ್ಷೇತ್ರಕ್ಕೆ ಕಾಂಗ್ರೆಸ್‌ನಿಂದ ಹೆಚ್.ವೈ.ಮೇಟಿ ಪುತ್ರ ಉಮೇಶ್‌ ಮೇಟಿ, ಬಿಜೆಪಿಯಿಂದ ವೀರಣ್ಣ ಚರಂತಿಮಠ ಪ್ರಮುಖ ಅಭ್ಯರ್ಥಿಗಳು. ಈ ಇಬ್ಬರ ನಡುವೆ ಪೈಪೋಟಿ ನಿರೀಕ್ಷೆ ಮಾಡಲಾಗಿದೆ.

ಹೆಚ್.ವೈ.ಮೇಟಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತರಾಗಿದ್ದರು. ಆದ್ದರಿಂದ ಚುನಾವಣೆ ಗೆಲ್ಲುವುದು ಅವರಿಗೆ ಪ್ರತಿಷ್ಠೆಯಾಗಿದೆ. ಆದರೆ ವೀರಣ್ಣ ಚರಂತಿಮಠ ಗೆಲ್ಲಿಸಬೇಕು ಎಂದು ಬಿಜೆಪಿ ನಾಯಕರು ಈಗಾಗಲೇ ತಂತ್ರ ರೂಪಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಒಟ್ಟು ಮತದಾರರು; ಕ್ಷೇತ್ರದ ಒಟ್ಟು ಮತದಾರರು 1,26,761. ವೀರಶೈವ ಲಿಂಗಾಯತ 80 ಸಾವಿರ, ಕುರುಬ 40 ಸಾವಿರ, ಮುಸ್ಲಿಂ 25 ಸಾವಿರ, ಎಸ್ಸಿ/ ಎಸ್ಟಿ 58 ಸಾವಿರ, ಇತರರು 45 ಸಾವಿರ.

ಲಿಂಗಾಯತ ಸಮುದಾಯ ವೀರಣ್ಣ ಚರಂತಿಮಠ ಬೆಂಬಲಕ್ಕೆ ನಿಲ್ಲಲಿದೆ ಎಂದು ಅಂದಾಜಿಸಲಾಗಿದೆ. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವದಲ್ಲಿ ಇರುವ ಕಾರಣ ಕಾಂಗ್ರೆಸ್‌ಗೆ ಜಯ ಎಂಬುದು ಲೆಕ್ಕಾಚಾರವಾಗಿದೆ.

ಪ್ಲಸ್ ಮತ್ತು ಮೈನಸ್ ಪಾಯಿಂಟ್ಸ್

  • ವೀರಣ್ಣ ಚರಂತಿಮಠ ಪ್ಲಸ್ ಪಾಯಿಂಟ್ ಎಂದರೆ ಭಿನ್ನಮತ ಮರೆತು ಎಲ್ಲಾ ನಾಯಕರು ಒಂದಾಗಿದ್ದಾರೆ.
  • ಬಾಗಲಕೋಟೆಯಲ್ಲಿ ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿತ್ತು. ಆದ್ದರಿಂದ ಹಿಂದೂಗಳು ಬಿಜೆಪಿ ಬೆಂಬಲಿಸಲಿದ್ದಾರೆ ಎಂಬುದು ಅಂದಾಜು
  • ವೀರಣ್ಣ ಚರಂತಿಮಠ ಕ್ಷೇತ್ರದಲ್ಲಿ ಹಲವು ಸಲ ಗೆದ್ದಿದ್ದು, ಈ ಬಾರಿಯೂ ಗೆಲ್ಲಲಿದ್ದಾರೆ ಎಂದು ಅಂದಾಜಿಸಲಾಗಿದೆ.
  • ಕಾಂಗ್ರೆಸ್‌ ಅಭ್ಯರ್ಥಿ ಹೆಚ್.ವೈ.ಮೇಟಿ ಅನುಕಂಪದ ಅಲೆಯನ್ನು ನೆಚ್ಚಿಕೊಂಡಿದ್ದಾರೆ.
  • ಹೆಚ್‌.ವೈ.ಮೇಟಿ ಸಿದ್ದರಾಮಯ್ಯಗೆ ಆಪ್ತರು. ಅದು ಕಾಂಗ್ರೆಸ್‌ಗೆ ಲಾಭ.
  • ಸಂಪುಟ ವಿಸ್ತರಣೆಯಾದರೆ ಉಮೇಶ್ ಮೇಟಿ ಸಚಿವರಾಗುವ ಸಾಧ್ಯತೆ ಎಂಬ ಸುದ್ದಿ

ಮೈನಸ್ ಪಾಯಿಂಟ್ಸ್

  • ವೀರಣ್ಣ ಚರಂತಿಮಠ ಬಿಜೆಪಿಯ ಕೆಲವು ನಾಯಕರ ಜೊತೆ ಭಿನ್ನಮತ ಹೊಂದಿದ್ದಾರೆ. ಅದು ಉಪ ಚುನಾವಣೆ ಮೇಲೆ ಪ್ರಭಾವ ಬೀರಬಹುದು.
  • ರಾಜ್ಯ ಬಿಜೆಪಿಯ ಭಿನ್ನಮತ ಉಪ ಚುನಾವಣೆಯಲ್ಲಿ ಹಿನ್ನಡೆ ಉಂಟು ಮಾಡಲಿದೆ ಎಂಬುದು ಅಂದಾಜು.
  • ವೀರಣ್ಣ ಚರಂತಿಮಠ ಕುಟುಂಬದಲ್ಲಿ ಆಂತರಿಕ ಕಚ್ಚಾಟವಿದ್ದು, ಅದು ಪ್ರಭಾವ ಬೀರಬಹುದು.
  • ಹೆಚ್.ವೈ.ಮೇಟಿ ಕುಟುಂಬದ ನಾಲ್ವರ ಟಿಕೆಟ್ ಫೈಟ್ ಹಿನ್ನಡೆ ಮಾಡಬಹುದು.
  • ಮೇಟಿ ಕುಟುಂಬದ ಸದಸ್ಯರು ಜನಮನ್ನಣೆಗಳಿಸಿಲ್ಲ.
  • ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾಗಿದ್ದವರು ತಟಸ್ಥವಾಗಿ ಉಳಿದರೆ ಹಿನ್ನಡೆ ಖಚಿತ ಎಂಬುದು ಲೆಕ್ಕಾಚಾರ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular